ಸಾರಾಂಶ
ತಾಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಅಭಿಮತ । ವಿವೇಕಾನಂದ ಜಯಂತಿ, ಮಕ್ಕಳ ಸಂತೆಕನ್ನಡಪ್ರಭ ವಾರ್ತೆ ಅರಸೀಕೆರೆ
ವೈಜ್ಞಾನಿಕ ಯುಗದಲ್ಲಿ ಕೃಷಿ ಪದ್ದತಿಯಿಂದ ಸಂಕ್ರಾಂತಿ ಸುಗ್ಗಿ ಹಬ್ಬದ ಮಹತ್ವವನ್ನೆ ನಾವುಗಳು ಮರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ವಿಶ್ವಹಿಂದು ಪರಿಷತ್ ಅಧ್ಯಕ್ಷ ಅರುಣ್ ಕುಮಾರ್ ಬೇಸರ ವ್ಯಕ್ತಪಡಿಸಿದರು.ನಗರದ ಸೇವಾ ಸಂಕಲ್ಪ ಶಾಲೆಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿಯ ಮಹತ್ವ, ವಿವೇಕಾನಂದ ಜಯಂತಿ ಹಾಗೂ ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲಾ ಮಕ್ಕಳು ಸಂಕ್ರಾಂತಿ ಸುಗ್ಗಿ ಹಬ್ಬದ ಮಹತ್ವವನ್ನು ತಿಳಿಸುವ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜನೆ ಮಾಡಲಾಗಿರುವುದು ಪ್ರಶಂಸನೀಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಗೋ ಪೂಜೆ ನೆರವೇರಿಸುವ ಮೂಲಕ ಆಯುರ್ವೇದ ವೈದ್ಯರಾದ ಡಾ.,ಹೇಮಾ ಅಮೃತ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳ ಸಂತೆಯಲ್ಲಿ ಮಕ್ಕಳೇ ತಮ್ಮ ಕೈಯಿಂದ ತಯಾರಿಸಿದ್ದ ತರಾವರಿಯ ತಿಂಡಿ, ಪಾನೀಯಗಳನ್ನು ಖರೀದಿಸಲು ಮಕ್ಕಳು ಆಹಾರ ಪ್ರಿಯರನ್ನು ಕೈಬೀಸಿ ಕರೆದು ಭರ್ಜರಿ ವ್ಯಾಪಾರ ನಡೆಸಿ ಖುಷಿ ಪಟ್ಟರು, ಮಕ್ಕಳ ಸಂತೆಯಲ್ಲಿ ಸಂಕ್ರಾಂತಿ ಹಬ್ಬದ ವಿಶೇಷವಾದ ಎಳ್ಳು, ಬೆಲ್ಲ, ಕಬ್ಬು, ಸೊಪ್ಪು, ತರಕಾರಿ ಇತ್ಯಾದಿ ಆಹಾರ ಪದಾರ್ಥಗಳನ್ನು ಪೋಷಕರ ಜೊತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಹಕರಾಗಿ ಖರೀದಿಯಲ್ಲಿ ತಲ್ಲೀನರಾಗಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ಮಾರಾಟ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್.ಶ್ರೀಧರ್ ವಹಿಸಿದ್ದರು. ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕೃಷ್ಣ, ವಿದ್ಯಾಸಂಸ್ಥೆ ನಿರ್ದೇಶಕ ಮೋಹನ್ ಕುಮಾರ್, ಬಬ್ರುವಾಹನ ರಾವ್, ಜಿ.ಕುಮಾರ್, ಕೆ.ಎನ್.ಸತ್ಯನಾರಾಯಣ್, ಕೆ.ಅರ್.ಮುರುಳೀಧರ್, ಮಯೂರಿ, ವಿಜಯಲಕ್ಷ್ಮೀ, ವೀಣಾ, ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಸ್ವಾಮಿ. ಬಸವಂತಪ್ಪ, ಗಂಗಾಧರ್, ಕುಮಾರಸ್ವಾಮಿ, ಲೋಕೇಶ್, ಚಂದ್ರಶೇಖರ್, ದೀಪಾ ಇದ್ದರು.
ಅರಸೀಕೆರೆ ನಗರದ ಸೇವಾ ಸಂಕಲ್ಪ ಶಾಲೆಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಮತ್ತು ಸ್ವಾಮಿ ವಿವೇಕಾನಂದ ಜಯಂತಿ, ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯುರ್ವೇದ ವೈದ್ಯರಾದ ಡಾ.ಹೇಮಾ ಅಮೃತ್ ಗೋ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು..