ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಭಾರತ ಬೆಳಕಿನ ದೇಶ ಜ್ಞಾನ ಪರಂಪರೆಯಿಂದ ಈ ಬೆಳಕು ಲಭ್ಯವಾಗಿದೆ. ಪ್ರಕೃತಿಯನ್ನು ಪೂಜಿಸುವ ಭಾರತೀಯರು ಭಾವನೆಗಳೊಂದಿಗೆ ಬದುಕನ್ನು ಕಟ್ಟಿಕೊಂಡವರು. ಭಾರತದ ವೈಭವಪೂರ್ಣ ಕಥಾನಕಗಳು, ನಮ್ಮಲ್ಲಿನ ಉನ್ನತವಾದ ಹಾಗೂ ಮೌಲ್ಯಯುತ ಸಂಸ್ಕಾರಗಳು ಈಗಿನ ಮಕ್ಕಳಿಗೆ ಸ್ಫೂರ್ತಿ- ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಭಾರತೀ ಸಂಘಟನೆಯ ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮ ಸರ್ವರಿಗೂ ಮಾದರಿ ಎಂದು ವಿದ್ವಾಂಸ, ಪ್ರಖರ ವಾಗ್ಮಿ ದಾಮೋದರ ಶರ್ಮ ಹೇಳಿದರು.
ಅವರು ಅಡ್ಯಾರಿನ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸಂಸ್ಕಾರ ಭಾರತೀ ದೀಪಾವಳಿ ಕುಟುಂಬ ಮಿಲನದಲ್ಲಿ ಮಾತನಾಡಿದರು. ಸಂಸ್ಕಾರ ಭಾರತೀ ಮಂಗಳೂರು ನಗರ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ದಶಕಗಳ ಕಾಲದಿಂದ ದೀಪಾವಳಿ ಹಬ್ಬವನ್ನು ಎಲ್ಲರನ್ನು ಸೇರಿಸಿಕೊಂಡು ಬಹಳ ಅರ್ಥ ಪೂರ್ಣ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು ಹೇಳಿದರು.ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಡ್ಯಾರ್ ಇದರ ಗೌರವಾಧ್ಯಕ್ಷ ದಿವಾಕರ ನಾಯ್ಕ್ ಅಡ್ಯಾರ್ ಮತ್ತು
ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಅಡ್ಯಾರ್ ಇದರ ಅಧ್ಯಕ್ಷ ರಮೇಶ್ ತುಂಬೆ ಇದ್ದರು.ಬಾಲಕೃಷ್ಣ ಕತ್ತಲ್‌ಸಾರ್, ಬಳಗದಿಂದ ‘ತುಳುನಾಡ ಬಲೀoದ್ರ ಲೆಪ್ಪುದ ಪೊರ್ಲು’ ಕಾರ್ಯಕ್ರಮ ನಡೆಯಿತು.ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಕಾರ ಭಾರತೀ ಸೇವಾ ಪುರಸ್ಕಾರವನ್ನು ಪ್ರದೀಪ್ ಕುಮಾರ್ ಶೆಟ್ಟಿ (ಸ್ವಯಂ ಸೇವಕ) ನಾರಾಯಣ ನಾಯ್ಕ್ (ಶಿಕ್ಷಕರು ಸಾಮರಸ್ಯ ) ಗಜೇಂದ್ರ ಪೂಜಾರಿ ಅಧ್ಯಕ್ಷರು, ಮಡಿಲು ಸಂಸ್ಥೆ ( ಕುಟುಂಬ ಪ್ರಭೋಧನ್) ಮಾಧವ ಉಳ್ಳಾಲ್ ಪರಿಸರ ಪ್ರೇಮಿ (ಪರಿಸರ)ರಮೇಶ್ ಕಾವೂರು ರಿಕ್ಷಾ ಚಾಲಕರು (ನಾಗರಿಕರ ಶಿಷ್ಚಾಚಾರ) ಧನಂಜಯ ಕೊಟ್ಟಾರಿ, ಯೋಗ ಗುರು (ಸ್ವದೇಶಿ) ಇವರುಗಳಿಗೆ ನೀಡಲಾಯಿತು.
ಈ ಅಭಿನಂದನಾ ಕಾರ್ಯಕ್ರಮ ಡಾ. ಅರುಣ್ ಉಳ್ಳಾಲ್ ನೆರವೇರಿಸಿದರು. ನಾಟ್ಯ ನಿಕೇತನ ಕೊಲ್ಯ, ಸನಾತನ ನಾಟ್ಯಾಲಯ ಮಂಗಳೂರು, ಭರತಾoಜಲಿ ಕೊಟ್ಟಾರ ಇವರಿಂದ ನೃತ್ಯ ವೈವಿಧ್ಯ ನಡೆಯಿತು.ಶ್ರೀಧರ್ ಹೊಳ್ಳ ವಂದಿಸಿದರು. ದೀಪಕ್ ಅಡ್ಯಾರ್ ನಿರೂಪಿಸಿದರು.
;Resize=(128,128))
;Resize=(128,128))