ಸಾರಾಂಶ
ರಾಣಿಬೆನ್ನೂರು:ಮಹಿಳೆಯರಿಂದ ಸಂಸ್ಕಾರ, ಸಂಸ್ಕೃತಿ ನಿಂತಿದ್ದು ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾತೆಯರು ಮಾಡುತ್ತಿದ್ದಾರೆ ಎಂದು ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಸ್ವಾಮೀಜಿ ನುಡಿದರು. ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಏರ್ಪಡಿಸಿದ್ದ ಜಂಗಮ ಜ್ಯೋತಿ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಇಂದು ನಾಲ್ಕು ಗೋಡೆಗಳಿಂದ ಆಚೆ ಬಂದಿದ್ದಾರೆ. ಬದುಕನ್ನು ಕಟ್ಟಿಕೊಳ್ಳಲು ಸ್ವಾವಲಂಬಿಗಳಾಗಲು ಪ್ರಯತ್ನಿಸುತ್ತಿದ್ದಾರೆ. ಪುರುಷ ಸಮಾಜ ಅವರನ್ನು ಗೌರವಿಸಬೇಕು ಎಂದರು. ಹಾವೇರಿಯ ಶೋಭಾ ಚಿಕ್ಕಮಠದ ಮಾತನಾಡಿ, ಆಧುನಿಕತೆಯಿಂದಾಗಿ ಜಂಗಮ ಸಂಸ್ಕಾರ ತೆರೆ ಮರೆಗೆ ಸಾಗುತ್ತಿದೆ. ಪ್ರತಿಯೊಬ್ಬರೂ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ವಿದ್ಯೆಯ ಜೊತೆಗೆ ಜಂಗಮರ ಆಚರಣೆ, ದೀಕ್ಷಾ, ಲಿಂಗಧಾರಣೆ ಸೇರಿದಂತೆ ಧಾರ್ಮಿಕ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಮಹಿಳೆಯರು ತಮ್ಮ ತಮ್ಮ ಮನೆಯಿಂದಲೇ ಕಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಂಗಮ ಜ್ಯೋತಿ ಮಹಿಳಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಗೀತಾ ಭಸ್ಮಾಂಗಿಮಠ ಮಾತನಾಡಿ, ಜಂಗಮ ಮಹಿಳಾ ಸಮಾಜವು ಮಹಿಳಾ ಶ್ರೇಯೋಭಿವೃದ್ಧಿಗೆ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಬದ್ಧವಾಗಿದೆ. ಈ ಸಂಸ್ಥೆಯು ಮಹಿಳೆಯರ ಶಕ್ತಿ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ದಕ್ಷತೆಯನ್ನು ವೃದ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.ಇಂದಿರಾ ಹಿರೇಮಠ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಶಬ್ದಗಳನ್ನು ಬಳಸಿ ಕನ್ನಡದಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಗೀತಾ ಹಿರೇಮಠ, ಸುಧಾ ಮಠದ ಹಾಗೂ ಸುಜಾತಾ ಆರಾಧ್ಯಮಠ ಅವರಿಗೆ ಓಂಕಾರ ಸ್ವಾಮೀಜಿಗಳು ಪ್ರಶಸ್ತಿ ನೀಡಿ ಗೌರವಿಸಿದರು.ಗೀತಾ ಬೂದಿಹಾಳಮಠ, ಮೈತ್ರಾ ಅಜ್ಜೋಡಿಮಠ, ವಿಜಯಾ ನೆಲೋಗಲ್‌ಮಠ, ಶೈಲಾ ಉಜ್ಜೈನಿಮಠ, ಗೀತಾ ಹಿರೇಮಠ, ಜಯಮ್ಮ ಆರಾಧ್ಯಮಠ, ಪೂರ್ಣಿಮಾ ತೊಗರ್ಸಿಮಳೇಮಠ, ಸುವರ್ಣ ಅಕ್ಕಿಮಠ, ಸುಜಾತಾ ಆರಾಧ್ಯಮಠ, ಚೆನ್ನಮ್ಮ ಗುರುಪಾದದೇವರಮಠ, ಉಮಾ ಚಪ್ಪರದಹಳ್ಳಿಮಠ, ಶೈಲಾ ಉಜ್ಜೈನಿಮಠ, ಸುಮಾ ಹಿರೇಮಠ, ಜಯಶ್ರೀ ಟಿ, ಚೇತನಾ ಪಾಟೀಲ, ವಿದ್ಯಾವತಿ ಜಂಗಿನ, ಮಂಗಳಾ ಹಿರೇಮಠ, ರಾಜೇಶ್ವರಿ ಹನಗೋಡಿಮಠ, ಪ್ರಕಾಶ ಗಚ್ಚಿನಮಠ, ಫಕ್ಕೀರೇಶ ಭಸ್ಮಾಂಗಿಮಠ, ಮುಕ್ತೇಶ್ವರ ಕೂರಗುಂದಮಠ, ಪ್ರೊ. ಎಸ್.ವಿ.ಉಜ್ಜೈನಿಮಠ, ನಾಗಯ್ಯ ಮಾಗನೂರಮಠ, ರಾಜಶೇಖರ ಮಠದ, ರವಿಕುಮಾರ ಪಾಟೀಲ, ಜಗದೀಶ ಮಳೇಮಠ, ಗಾಯತ್ರಿ ಹಿರೇಮಠ, ಪಾರ್ವತಿ ಹಿರೇಮಠ, ಶೋಭಾ ದೇವಗಿರಿಮಠ, ಕವಿತಾ ಎಂ.ಜೆ. ಶೋಭಾ ತೊಗರ್ಸಿಮಳೇಮಠ, ವಾಗೀಶ ನೀರಲಗಿಮಠ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))