ಸಾರಾಂಶ
ಶಹಾಪುರ ನಗರದ ಶೈನ್ ಕಿಡ್ಸ್ ಶಾಲೆಯಲ್ಲಿ ಎರಡನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಸತ್ಯ ಶುದ್ಧವಾದ ಬದುಕಿಗೆ ಸಂಸ್ಕಾರ ಸಂಸ್ಕೃತಿ ಮುಖ್ಯ. ಇಂದಿನ ಯುವಕರು ಗುರು-ಹಿರಿಯರ ಬಗ್ಗೆ ಗೌರವ ಇಡಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕೊಡಬೇಕೆಂದು ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಹೇಳಿದರು.ನಗರದ ಶೈನ್ ಕಿಡ್ಸ್ ಶಾಲೆಯಲ್ಲಿ ನಡೆದ 2ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ಶಿಕ್ಷಣ ಕೊಡಿಸುವ ಭರಾಟೆಯಲ್ಲಿ ಸಂಸ್ಕಾರ ಮಾಯವಾಗುತ್ತಿದೆ. ಶಿಕ್ಷಣ ಎಷ್ಟು ಮಹತ್ವವೋ ಅಷ್ಟೆ ಸಂಸ್ಕಾರವು ಮಹತ್ವದ್ದಾಗಿದೆ ಎಂಬುದನ್ನು ಪಾಲಕರು ಪೋಷಕರು ಅರಿಯಬೇಕಿದೆ. ಹೀಗಾಗಿ ಹೆತ್ತವರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕೊಡುವ ಕರ್ತವ್ಯ ನಿಮ್ಮಗಳದ್ದಾಗಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಭಾಸ್ಕರರಾವ್ ಮುಡಬೂಳ, ಪ್ರತಿಯೊಂದು ಮಗುವಿಗೂ ಶಿಕ್ಷಣದ ಜತೆಯಲ್ಲಿ ಸಂಸ್ಕಾರಗಳನ್ನು ಮೌಲ್ಯಗಳನ್ನು ಕಲಿಸಿದಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ. ಶಿಕ್ಷಣ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿಸುವ ಪಾಲಕರ ಕರ್ತವ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ, ಉದ್ಯಮಿ ಗುರು ಶೆಟ್ಟಿ ಮತ್ತು ಸುರೇಶ ಅರುಣಿ ಮಾತನಾಡಿದರು.ಅನಸೂಯ ಛಲವಾದಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಸಂಗೀತಾ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಉಳ್ಳಿ ಮತ್ತು ಸುರೇಖಾ ಕುಂಬಾರ ನಿರೂಪಿಸಿದರು. ಸುಪ್ರಿಯಾ ವಂದಿಸಿದರು. ಮಲ್ಲಯ್ಯ ಹಿರೇಮಠ ಮತ್ತು ಬಸವರಾಜ ಪತ್ತಾರ ಸಂಗೀತ ಸೇವೆ ನೀಡಿದರು. ಶಾಲಾ ಚಿಣ್ಣರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.