ಸಾರಾಂಶ
ಮಲೆನಾಡು ಭಾಗ ಜನಪದದ ಜೊತೆ ಅವಿನಾವಭಾವ ಸಂಬಂಧ ಇರಿಸಿಕೊಂಡಿದೆ. ಮಲೆನಾಡು, ಕರಾವಳಿ, ಬಯಲುಸೀಮೆ ಸೇರಿದಂತೆ ನಮ್ಮ ಪ್ರದೇಶಗಳ ಸಂಸ್ಕೃತಿ ಬೇರೆಬೇರೆ ಇದ್ದರೂ ಮೂಲ ಆಶಯ ಜನಪದವನ್ನು ಉಳಿಸುವುದೇ ಆಗಿದೆ. ಜಾನಪದ ಕಲೆ ಮತ್ತು ಕಲಾವಿದರು ನೇಪಥ್ಯಕ್ಕೆ ಸರಿಯುವ ಆತಂಕ ಎದುರಿಸುತ್ತಿದ್ದಾರೆ. ನಮ್ಮ ಸಂಸ್ಕೃತಿಯ ಮೂಲ ಬೇರಾಗಿರುವ ಜಾನಪದ ಮತ್ತು ಅದನ್ನು ರಕ್ಷಿಸಿಕೊಂಡು ಬರುತ್ತಿರುವ ಕಲಾವಿದರನ್ನು ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.
ಸಾಗರ: ಜಾನಪದ ಸಂಸ್ಕಾರವನ್ನು ಕಲಿಸುತ್ತದೆ. ಜನಪದೀಯರ ಮೂಲಕ ಯುವ ಸಮೂಹಕ್ಕೆ ಹೊಸ ಸಂಸ್ಕಾರದ ಜ್ಞಾನಾರ್ಜನೆ ಆಗಬೇಕು ಎಂದು ಜನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಮತಿ ಇಂದಿರಾ ಗಾಂಧಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಯುವಜನತೆ ಮತ್ತು ಜಾನಪದ ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಗೊತ್ತಿಲ್ಲದವರು ಯಾರೂ ಇಲ್ಲ. ಒಂದಿಲ್ಲೊಂದು ಹಂತದಲ್ಲಿ ಅವರಿಗೆ ಜಾನಪದದ ಸಂಪರ್ಕ ಇರುತ್ತದೆ ಎಂದರು.ಮಲೆನಾಡು ಭಾಗ ಜನಪದದ ಜೊತೆ ಅವಿನಾವಭಾವ ಸಂಬಂಧ ಇರಿಸಿಕೊಂಡಿದೆ. ಮಲೆನಾಡು, ಕರಾವಳಿ, ಬಯಲುಸೀಮೆ ಸೇರಿದಂತೆ ನಮ್ಮ ಪ್ರದೇಶಗಳ ಸಂಸ್ಕೃತಿ ಬೇರೆಬೇರೆ ಇದ್ದರೂ ಮೂಲ ಆಶಯ ಜನಪದವನ್ನು ಉಳಿಸುವುದೇ ಆಗಿದೆ. ಜಾನಪದ ಕಲೆ ಮತ್ತು ಕಲಾವಿದರು ನೇಪಥ್ಯಕ್ಕೆ ಸರಿಯುವ ಆತಂಕ ಎದುರಿಸುತ್ತಿದ್ದಾರೆ. ನಮ್ಮ ಸಂಸ್ಕೃತಿಯ ಮೂಲ ಬೇರಾಗಿರುವ ಜಾನಪದ ಮತ್ತು ಅದನ್ನು ರಕ್ಷಿಸಿಕೊಂಡು ಬರುತ್ತಿರುವ ಕಲಾವಿದರನ್ನು ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.
ಪ್ರಾಚಾರ್ಯೆ ಡಾ.ರಾಜೇಶ್ವರಿ ಎಚ್. ಅಧ್ಯಕ್ಷತೆ ವಹಿಸಿದ್ದರು. ಗುಡ್ಡಪ್ಪ ಜೋಗಿ, ಡಾ.ಶಿವಾನಂದ ಭಟ್, ಕಸ್ತೂರಿ ಸಾಗರ್, ಎಸ್.ಬಸವರಾಜ್, ಸರೋಜಮ್ಮ, ಸತ್ಯನಾರಾಯಣ್ ಸಿರಿವಂತೆ ಇನ್ನಿತರರು ಹಾಜರಿದ್ದರು.- - - -26ಕೆ.ಎಸ್.ಎ.ಜಿ.5: