ಆಧ್ಯಾತ್ಮೀಕ ನೆಲದ ಶ್ರೀಮಂತ ಭಾಷೆ ಸಂಸ್ಕೃತ

| Published : Apr 12 2024, 01:01 AM IST / Updated: Apr 12 2024, 01:02 AM IST

ಆಧ್ಯಾತ್ಮೀಕ ನೆಲದ ಶ್ರೀಮಂತ ಭಾಷೆ ಸಂಸ್ಕೃತ
Share this Article
  • FB
  • TW
  • Linkdin
  • Email

ಸಾರಾಂಶ

ಗುಳೇದಗುಡ್ಡ: ಸಂಸ್ಕೃತ ಭಾಷೆ ಇತರೆ ಭಾಷೆಗಳ ಕಲಿಕೆಗೆ ಪೂರಕವಾಗಿದೆ. ಭಾರತೀಯರ ಆಧ್ಯಾತ್ಮಿಕ ಜ್ಞಾನ ಭಂಡಾರ ಅರಿಯಲು ಸಂಸ್ಕ್ರತ ಭಾಷೆ ಕಲಿಕೆ ಬಹಳ ಅವಶ್ಯಕವಾಗಿದೆ. ನಮ್ಮ ಆಧ್ಯಾತ್ಮಿಕ ನೆಲದ ಶ್ರೀಮಂತ ಭಾಷೆಯಾಗಿ ಬೆಳೆದಿದೆ ಎಂದು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಸಂಸ್ಕೃತ ಭಾಷೆ ಇತರೆ ಭಾಷೆಗಳ ಕಲಿಕೆಗೆ ಪೂರಕವಾಗಿದೆ. ಭಾರತೀಯರ ಆಧ್ಯಾತ್ಮಿಕ ಜ್ಞಾನ ಭಂಡಾರ ಅರಿಯಲು ಸಂಸ್ಕ್ರತ ಭಾಷೆ ಕಲಿಕೆ ಬಹಳ ಅವಶ್ಯಕವಾಗಿದೆ. ನಮ್ಮ ಆಧ್ಯಾತ್ಮಿಕ ನೆಲದ ಶ್ರೀಮಂತ ಭಾಷೆಯಾಗಿ ಬೆಳೆದಿದೆ ಎಂದು ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಹೇಳಿದರು.

ಅವರು ಬುಧವಾರ ಪಟ್ಟಣದ ಮರಡಿಮಠದಲ್ಲಿ ಶ್ರೀ ಶಾರದಾ ವಿದ್ಯಾಲಯ ಹಮ್ಮಿಕೊಂಡಿದ್ದ ಸಂಸ್ಕೃತ ಸಂಭಾಷಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಎಲ್ಲ ಭಾಷೆಗಳನ್ನು ಪ್ರೀತಿಸಬೇಕು. ಪ್ರಾಚೀನ ಮಹಾಕವಿಗಳಿಗಳ ಕಾವ್ಯಗಳನ್ನು ಅರಿಯಲು ಸಂಸ್ಕೃತ ಭಾಷೆ ಸಹಾಯಕವಾಗಿದೆ. ಸಂಸ್ಕೃತ ಭಾಷೆಯ ಕಲಿಕೆಯಿಂದ ಜೀವನದಲ್ಲಿ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದೆಂದು ಹೇಳಿದರು.

ಸಂಸ್ಕೃತ ಪಾಠಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕಿ ನಾಗವೇಣಿ ತಿಪ್ಪಾ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಸ್ಕೃತ ಅತ್ಯಂತ ಪುರಾತನ ಭಾಷೆಯಾಗಿದೆ. ನಾವು ಮಾತನಾಡುವ ಬಹುತೇಕ ಭಾಷೆಗಳಲ್ಲಿ ಸಂಸ್ಕೃತ ಅಡಕವಾಗಿದೆ. ಸಂಸ್ಕೃತ ಕಲಿಕೆಯಿಂದ ಭಾಷಾ ಉಚ್ಛಾರಣೆ ಶುದ್ಧವಾಗುತ್ತದೆ.

ಸದ್ಯದ ಕಾಲಘಟ್ಟದಲ್ಲಿ ಸಂಸ್ಕೃತ ಶಿಕ್ಷಣ ಬಹಳಷ್ಟು ಅವಶ್ಯವಾಗಿದೆ. ಕನ್ನಡದೊಂದಿಗೆ ಭಾರತೀಯರ ಪುರಾತನ ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಈ ಪವಿತ್ರ ಹಾಗೂ ನಾಡಿನ ಶ್ರೀಮಂತ ಭಾಷೆಯನ್ನು ಬೆಳೆಸಬೇಕು ಎಂದರು.

ಭಾಗ್ಯಾ ಉದ್ನೂರ ಮಾತನಾಡಿ, ಸಂಸ್ಕೃತವನ್ನು ಬಹಳಷ್ಟು ಆಸಕ್ತಿಯಿಂದ ಮಕ್ಕಳಿಗೆ ಕಲಿಸಬೇಕು. ಸಂಸ್ಕೃತ ಕಲಿಕೆ ಬಹಳ ಸರಳ ಕಲಿಕೆಯಾಗಿದೆ. ಹಾಗಾಗಿ ಮಕ್ಕಳ ಭಾಷಾ ಬೆಳವಣಿಗೆಗೆ ಸಂಸ್ಕೃತ ಕಲಿಕೆ ಅವಶ್ಯವೆಂದರು. ಮಾಲಾ ರಾಜನಾಳ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾರದಾ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಿ ಸುನಂದಾ ರಾಸನಕರ, ಕುಮಾರೇಶ್ವರ ಸಂಸ್ಕೃತ ಪಾಠಶಾಲೆ ಶಿಕ್ಷಕ ಮಹಾಂತೇಶ ಬಂಕಾಪೂರ, ಮಲ್ಲಿಕಾರ್ಜುನ ರಾಜನಾಳ, ಮೋಹನ ರಾಸನಕರ, ಚನ್ನಮ್ಮ ಜವಳಿ, ಅನಿತಾ ಶಿರೋಳ, ದೀಪಾ ಉಂಕಿ, ಗೌರಮ್ಮ ಕಲಬುರ್ಗಿ, ಶಶಿಕಲಾ ಭಾವಿ, ಗಿರಿಜಾ ಕಲ್ಯಾಣಿ ಹಾಗೂ ಇತರರು ಇದ್ದರು.