ಸಂಸ್ಕೃತ ಭಾಷೆಗೆ ಉನ್ನತ ಸ್ಥಾನಮಾನ ಸಿಗಲಿ

| Published : Sep 11 2025, 12:03 AM IST

ಸಾರಾಂಶ

ಹಿಂದಿನಿಂದ ನಡೆಸಿಕೊಂಡು ಬಂದ ಕಾರ್ಯಕ್ರಮವನ್ನು ಮತ್ತಷ್ಟು ಚೆನ್ನಾಗಿ ನಡೆಸಬೇಕು

ಗದಗ: ಸಂಸ್ಕೃತ ಭಾಷೆ ಅಪಾರ ಜ್ಞಾನ ಸಂಪತ್ತವುಳ್ಳ ಭಾಷೆ ಇದಕ್ಕೆ ಉನ್ನತ ಸ್ಥಾನಮಾನ ಸಿಗಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.

ನಗರದ ಡಾ.ಪಂ. ಪುಟ್ಟರಾಜ ಗವಾಯಿಗಳ ಸಂಸ್ಕೃತ ಪಾಠಶಾಲೆಯಲ್ಲಿ ಜಿಲ್ಲಾ ಮಟ್ಟದ ಸಂಸ್ಕೃತ ಶ್ರಾವಣಿ ಮತ್ತು ಯುಷ್ಮಾಕಂ ಸಂಸ್ಕೃತಂ ಸಮಾರೋಪದ ಸಾನಿಧ್ಯ ವಹಿಸಿ ಮಾತನಾಡಿದರು.

ಡಾ.ಪಿ.ಜಿ.ಎ.ಎಸ್‌ ಸಮಿತಿಯ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ ಮಾತನಾಡಿ, 1995-96ರಲ್ಲಿ ಉಡುಪಿಯಲ್ಲಿ ಜರುಗಿದ ಸಂಸ್ಕೃತ ಸಮ್ಮೇಳನದಲ್ಲಿ ತ್ರಿಭಾಷಾ ಕವಿಗಳಾದ ಪೂಜ್ಯ ಪುಟ್ಟರಾಜ ಗವಾಯಿಗಳು ಭಾಗವಹಿಸಿದ್ದನ್ನು ಸ್ಮರಿಸಿದರು.

ಡಿ.ಜಿ.ಎಂ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕ ಜಿ.ಎಸ್. ಗಾಂವಕರ್ ಮಾತನಾಡಿ, ಹಿಂದಿನಿಂದ ನಡೆಸಿಕೊಂಡು ಬಂದ ಕಾರ್ಯಕ್ರಮವನ್ನು ಮತ್ತಷ್ಟು ಚೆನ್ನಾಗಿ ನಡೆಸಬೇಕು. ಎಲ್ಲ ಸಂಸ್ಕೃತ ಪಾಠಶಾಲೆ ಶಿಕ್ಷಕರು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ಸಂಸ್ಕೃತವನ್ನು ಪ್ರಚಾರ ಪ್ರಸಾರ ಮಾಡಬೇಕು ಎಂದರು.

2025ನೇ ಸಂಸ್ಕೃತ ಪ್ರಸಿದ್ಧ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದವರಿಗೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಜ.ಪಂ.ಪಾಠಶಾಲೆಯ ಮುಖ್ಯ ಶಿಕ್ಷಕ ಗುರುಸಿದ್ಧಯ್ಯ ಹಿರೇಮಠ, ಮೌನೇಶ ಭಜಂತ್ರಿ, ಬಿ.ಬಿ.ಆರೇರ ಸೇರಿದಂತೆ ಇತರರು ಇದ್ದರು. ಕಳಕಪ್ಪ ಕುರ್ತಕೋಟಿ ನಿರೂಪಿಸಿದರು. ಎಸ್.ಎನ್. ಶಿಂಪಿಗೇರ ಸ್ವಾಗತಿಸಿದರು. ಎಸ್.ಎಸ್. ಸಾಲಿಮಠ ವಂದಿಸಿದರು.