ಸಾರಾಂಶ
ಮಂಗಳೂರು : ಸಂತಾನ ಹೀನತೆಯು ಸಮಾಜದ ಸುಮಾರು 15 - 20 ಶೇಕಡಾ ಜನರನ್ನು ಬಾಧಿಸುತ್ತದೆ ಎಂದು ವೈಜ್ಞಾನಿಕ ವಿಶ್ಲೇಷಣೆಗಳು ಹೇಳುತ್ತವೆ. ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯು ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಆಶಾದಾಯಕ ವಿಷಯವೆಂದರೆ ಸರಿಯಾದ ಮಾಹಿತಿ ಮತ್ತು ಸಮಾಲೋಚನೆ ಆಧುನಿಕ ವಿಜ್ಞಾನದಲ್ಲಿರುವ ಚಿಕಿತ್ಸೆಗಳನ್ನು ಸಮಯೋಚಿತವಾಗಿ ಬಳಸಿದ್ದಲ್ಲಿ ಹೆಚ್ಚಿನ ಜನರಿಗೆ ಸಂತಾನಪ್ರಾಪ್ತಿಯಾಗುತ್ತದೆ. ಮಂಗಳೂರು ನಗರದ ಅಪ್ಪರ್ ಬೆಂದೂರ್‌ನ ಮಂಗಳೂರು ನರ್ಸಿಂಗ್ ಹೋಮ್ ಸಮೀಪ ಕಾರ್ಯ ನಿರ್ವಹಿಸುತ್ತಿರುವ ಸಂತತಿ ಪ್ರಜನನ ಚಿಕಿತ್ಸಾ ಕೇಂದ್ರ ಮಕ್ಕಳಾಗದ ದಂಪತಿಗೆ ಸೂಕ್ತ ಪರೀಕ್ಷೆ ನಡೆಸಿ ಮಕ್ಕಳಾಗುವ ಬಗೆಗೆ ಸಲಹೆ, ಮಾರ್ಗದರ್ಶನ ಮತ್ತು ಅವಶ್ಯಕತೆ ಉಳ್ಳವರಿಗೆ ಚಿಕಿತ್ಸೆಯನ್ನು ಒದಗಿಸುವ ಪ್ರಪ್ರಥಮ ಸಂಸ್ಥೆಯಾಗಿದೆ.
2000 ಇಸವಿಯಿಂದ ಕಾರ್ಯಾಚರಿಸುತ್ತಿರುವ ಈ ಕೇಂದ್ರದಲ್ಲಿ 3500ಕ್ಕೂ ಅಧಿಕ ದಂಪತಿಗಳಿಗೆ ಯಶಸ್ವೀ ಸಂತಾನ ಭಾಗ್ಯ ನೀಡಲಾಗಿದೆ. ಮಂಗಳೂರಿನ ಪ್ರಥಮ ಪ್ರಣಾಳ ಶಿಶು ಜನನದ ಕೀರ್ತಿ ‘ಸಂತತಿ’ಗೆ ಸಲ್ಲುತ್ತದೆ. ಆಧುನಿಕ ವೈದ್ಯಕೀಯ ಉಪಕರಣಗಳು, ತಜ್ಞ ವೈದ್ಯರು ಹಾಗೂ ವಿಜ್ಞಾನಿಗಳು ಮತ್ತು ಸರಳವಾದ ಕೌನ್ಸೆಲಿಂಗ್ ವ್ಯವಸ್ಥೆ, ಅಂತಾರಾಷ್ಟ್ರೀಯ ಗುಣಮಟ್ಟದ ಟೆಸ್ಟ್ ಟ್ಯೂಬ್ ಬೇಬಿ (ಐವಿಎಫ್) ಲ್ಯಾಬೋರೇಟರಿಗೆ ಏರ್ ಹ್ಯಾಂಡ್ಲಿಂಗ್ ಘಟಕ, ಆ್ಯಂಟಿ-ಮೈಕ್ರೋಬಿಯಲ್ ಫ್ಲೂರಿಂಗ್ ಹಾಗೂ ಸ್ಟೀಲ್ ಪ್ಯಾನೆಲ್ಸ್ ಗೋಡೆಗಳನ್ನು ಅಳವಡಿಸಲಾಗಿದೆ.ತಪಾಸಣೆಗಳು:
ಸಮಗ್ರ ವೀರ್ಯ ವಿಶ್ಲೇಷಣೆ, ಹಾರ್ಮೋನ್‌ಗಳ ತಪಾಸಣೆ, ಡೊಪ್ಲರ್ ಮತ್ತು ಟ್ರಾನ್ಸ್ವಜಿನಲ್ ಅಲ್ಟ್ರಾಸೌಂಡ್, ಹಿಸ್ಟಿರೊ ಸಾಲ್ಪಿಂಗೊಗ್ರಾಮ್, ಹಿಸ್ಟಿರೊಸ್ಕೊಪಿ ಮತ್ತು ಲ್ಯಾಪ್ರೊಸ್ಕೊಪಿ ಮುಂತಾದವು ಮಕ್ಕಳಾಗದಿರುವಿಕೆಗೆ ‘ಸಂತತಿ’ಯಲ್ಲಿ ನಡೆಸಲಾಗುವ ಪ್ರಮುಖ ತಪಾಸಣೆ, ಪರೀಕ್ಷೆಗಳು.ಚಿಕಿತ್ಸೆಗಳು:
ಗರ್ಭಧಾರಣೆಗೆ ನೆರವಾಗುವ ತೀರಾ ಸರಳವಾದ ಚಿಕಿತ್ಸೆಯಿಂದ ಹಿಡಿದು ಅತ್ಯಾಧುನಿಕ ಪ್ರಣಾಳ ಶಿಶು ವಿಧಾನದವರೆಗಿನ ವಿವಿಧ ಸೇವಾ ಸೌಲಭ್ಯಗಳನ್ನು ಹೊಂದಿದೆ. ಉದಾ: ಐಯುಐ (ಸಹಾಯಕ ವೀರ‍್ಯಧಾರಣೆ), ಐವಿಎಫ್ (ಪ್ರಣಾಳ ಶಿಶು ಚಿಕಿತ್ಸೆ)-ಐಸಿಎಸ್‌ಐ, ಸ್ಪರ್ಮ್ ಆ್ಯಸ್ಪಿರೇಶನ್ ಟೆಕ್‌ನಿಕ್ಸ್, ಎಗ್ ಆ್ಯಂಡ್ ಎಂಬ್ರಿಯೊ ಡೊನೇಶನ್.ಸ್ತ್ರೀ ಆರೋಗ್ಯ ಸೇವೆ (Well Women Clinic) : ನುರಿತ ಸ್ತ್ರೀರೋಗ ತಜ್ಞರಿಂದ ರೋಗಗಳ ತಪಾಸಣೆ ಹಾಗೂ ತಡೆಗಟ್ಟುವುದರ (Early detection & amp; prevention) ಬಗ್ಗೆಯು ಸಲಹೆಗಳನ್ನು ಸಂತತಿಯಲ್ಲಿ ಪಡೆಯಬಹುದು.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ: ಮಂಗಳೂರು ನರ್ಸಿಂಗ್ ಹೋಮ್ ಬಳಿ, ಅಪ್ಪರ್ ಬೆಂದೂರು, ಮಂಗಳೂರು. Ph : 0824- 4278441, 94805 02822 E-mail: santhathicrm@rediffmail.com, Website : www.santhathifertility.com