ಸಂತೇಮರಹಳ್ಳಿ ಆಸ್ಪತ್ರೆ ಲಂಚಾವತಾರ: ವೀಡಿಯೋ ವೈರಲ್

| Published : Mar 25 2024, 12:50 AM IST

ಸಾರಾಂಶ

ಹೆರಿಗೆಗೆ ಇಂತಿಷ್ಟು ಎಂದು ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ಲಂಚಾವತಾರದ ವೀಡಿಯೋ ವೈರಲ್ ಆಗಿದ್ದು ಉತ್ತಮ ಆಸ್ಪತ್ರೆ ಎಂದು ಹೆಸರು ಪಡೆದಿದ್ದ ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿನ‌ ಭ್ರಷ್ಟಾಚಾರ ಬಯಲಾಗಿದೆ.

ಚಾಮರಾಜನಗರ: ಹೆರಿಗೆಗೆ ಇಂತಿಷ್ಟು ಎಂದು ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ಲಂಚಾವತಾರದ ವೀಡಿಯೋ ವೈರಲ್ ಆಗಿದ್ದು ಉತ್ತಮ ಆಸ್ಪತ್ರೆ ಎಂದು ಹೆಸರು ಪಡೆದಿದ್ದ ಸಂತೇಮರಹಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿನ‌ ಭ್ರಷ್ಟಾಚಾರ ಬಯಲಾಗಿದೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ದೃಶ್ಯವನ್ನು ಆಶಾ ಕಾರ್ಯಕರ್ತೆ ರಾಣಿ ಎಂಬವರು ಸೆರೆ ಹಿಡಿದಿದ್ದಾರೆ. ಒಂದೊಂದು ಚಿಕಿತ್ಸೆಗೆ ಇಲ್ಲಿ ಒಂದೊಂದು ರೇಟ್ ಫಿಕ್ಸ್ ಆಗಿದ್ದು ನಾರ್ಮಲ್ ಡೆಲವರಿ ಆದ್ರೆ 3 ಸಾವಿರ, ಸೀಜೆರಿಯನ್ ಆದ್ರೆ 20 ಸಾವಿರ, ಸಂತಾನಹರಣ ಶಸ್ತ್ರ ಚಿಕಿತ್ಸೆಗೆ 3 ರಿಂದ 8 ಸಾವಿರ, ಗರ್ಭಕೋಶದ ಆಪರೇಷನ್‌ಗೆ 35 ಸಾವಿರ ಕೊಡಬೇಕಿದೆ ಎಂಬ ಅರೋಪ ಕೇಳಿಬಂದಿದೆ.ಸಂತೇಮರಳ್ಳಿ ಆಸ್ಪತ್ರೆಯ ಕರ್ಮಕಾಂಡದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಡಿಎಚ್ಒ‌ ಡಾ.ಚಿದಂಬರ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ, 2 ದಿನಗಳಲ್ಲಿ ವರದಿ ತಯಾರಿಸಿ ಡೀಸಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.