ಕಾಮನ್‌ವೆಲ್ತ್ ಪವರ್ ಲಿಪ್ಟಿಂಗ್ ಸ್ಪರ್ಧೆ ತೆರಳು ಸಂತೋಷ್‌ ಶೆಟ್ಟಿಗೆ ಹಣಕಾಸಿನ ತೊಂದರೆ

| Published : Sep 03 2024, 01:36 AM IST

ಕಾಮನ್‌ವೆಲ್ತ್ ಪವರ್ ಲಿಪ್ಟಿಂಗ್ ಸ್ಪರ್ಧೆ ತೆರಳು ಸಂತೋಷ್‌ ಶೆಟ್ಟಿಗೆ ಹಣಕಾಸಿನ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಆರ್ಥಿಕವಾಗಿ ಧನ ಸಹಾಯ ಮಾಡುವ ಮೂಲಕ ಕ್ರೀಡಾಪಟುವಿಗೆ ಸಹಕಾರ ನೀಡುವಂತೆ ಪವರ್‌ ಲಿಪ್ಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ನಿರಂಜನ್ ಅರಸು ಹಾಗೂ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಆರ್ಥಿಕವಾಗಿ ಧನ ಸಹಾಯ ಮಾಡುವ ಮೂಲಕ ಕ್ರೀಡಾಪಟುವಿಗೆ ಸಹಕಾರ ನೀಡುವಂತೆ ಪವರ್‌ ಲಿಪ್ಟಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ನಿರಂಜನ್ ಅರಸು ಹಾಗೂ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್ ಕ್ರೀಡಾಪಟು ಸಂತೋಷ್ ಶೆಟ್ಟಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಾಮನ್‌ವೆಲ್ತ್ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಕಾಮನ್‌ವೆಲ್ತ್ ಸ್ಪರ್ಧೆಯು ದಕ್ಷಿಣ ಆಫ್ರಿಕದಲ್ಲಿರುವ ಸನ್ ಸಿಟಿಯಲ್ಲಿ ೪-೧೦-೨೦೨೪ ರಿಂದ ೧೩-೧೦-೨೦೨೪ ರವರೆಗೆ ನಡೆಯಲಿದ್ದು. ಕಾಮನ್‌ವೆಲ್ತ್ ಸ್ಪರ್ಧೆಗೆ ಪಾಲ್ಗೊಳ್ಳಲು ಅಂದಾಜು ೧,೬೦,೦೦೦ ರು. ಖರ್ಚಾಗುತ್ತದೆ. ನಾನು ಖಾಸಗಿ ಉದ್ಯೋಗ ಮಾಡುವುದರಿಂದ ನಾನು ೧೫ ವರ್ಷದಿಂದ ಹಾಸನದಲ್ಲಿ ನೆಲೆಸಿರುತ್ತೇನೆ. ನಾನು ಸುಮಾರು ೪ ವರ್ಷಗಳಿಂದಲೂ ರಾಜ್ಯ ಮಟ್ಟ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಹಾಸನ ವೇಟ್ ಲಿಫ್ಟಿಂಗ್ ಸಂಘದ ಸಹ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದೇನೆ ಹಾಗೂ ಹಲವಾರು ಮಕ್ಕಳಿಗೆ ಪವರ್‌ ಲಿಫ್ಟಿಂಗ್ ತರಬೇತಿಯನ್ನು ನೀಡುತ್ತಿದ್ದೇನೆ ಮತ್ತು ಹಲವಾರು ಸನ್ಮಾನಗಳು ದೊರೆತಿವೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಸನದ ಕ್ರೀಡಾಪಟು ಮೊಟ್ಟಮೊದಲ ಬಾರಿಗೆ ಏಷಿಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ೭೪ ಕೆ.ಜಿ ವಿಭಾಗ (ಎಂ.೧) ಅಡಿಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತೇನೆ. ರಾಷ್ಟ್ರೀಯ ಮಟ್ಟದಲ್ಲಿ ೫ ಬಾರಿ ಸ್ಪರ್ಧಿಸಿ ಅದರಲ್ಲಿ ನಾಲ್ಕು ಬಾರಿ ಪದಕವನ್ನು ಗಳಿಸಿರುತ್ತೇನೆ ಎಂದರು. (ಬೆಳ್ಳಿ ಹಾಗೂ ಕಂಚಿನ ಪದಕ), ರಾಜ್ಯ ಮಟ್ಟದಲ್ಲಿ ೫ ಬಾರಿ ಸ್ಪರ್ಧಿಸಿ ೪ ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗಳಿಸಿರುತ್ತೇನೆ. ರಾಷ್ಟ್ರಮಟ್ಟಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ, ಹಾಗೂ ನನ್ನ ಹುಟ್ಟೂರಿಗೆ ಕೀರ್ತಿ ತಂದಿರುತ್ತೇನೆ. ಇದನ್ನು ಪರಿಗಣಿಸಿ ತಾವುಗಳೂ ಸಹಾಯ ಮಾಡಬೇಕೆಂದು ಕೋರುತ್ತೇನೆ. ಮುಂದೆ ಬರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗೆ ತಮ್ಮ ಆಶೀರ್ವಾದ ಹಾಗೂ ಸಹಾಯ ಹಸ್ತ ಮಾಡಬೇಕಾಗಿ ಕೋರುತ್ತೇನೆ ಎಂದು ಹೇಳಿದರು.

ಧನ ಸಹಾಯ ಮಾಡುವವರು ಖಾತೆ ವಿವರ: ಸಂತೋಷ್ ಶೆಟ್ಟಿ, ಹಾಸನದ ರವೀಂದ್ರ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡ, ಅಕೌಂಟ್ ನಂಬರ್ ೮೯೫೬೦೧೦೦೦೦೦೬೬೫, ಐಎಫ್‌ಎಸ್‌ಸಿಕೋಡ್ : ಬಿಎಆರ್‌ಬಿಒವಿಜೆಎಚ್‌ಎಆರ್‌ಎ. ಮೊಬೈಲ್‌ ಸಂಖ್ಯೆ ೯೭೪೧೮೪೮೨೭೫ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಅಮೇಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಮೋಹನ್ ಕುಮಾರ್, ಸಚಿನ್ ಪ್ರಭು, ಪಂಜ ಕುಸ್ತಿ ಸಂಸ್ಥೆ ಅಧ್ಯಕ್ಷ ಗಿರೀಗೌಡ, ಚರಣ್ ಬೂವನಹಳ್ಳಿ ಇತರರು ಉಪಸ್ಥಿತರಿದ್ದರು.