ಸಾರಾಂಶ
ಕೊಪ್ಪ ಗ್ರಾಪಂ ಎಲ್ಲಾ ಸದಸ್ಯರ ಒಗ್ಗಟ್ಟನ ಬೆಂಬಲದಿಂದ ನಾನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ,ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಸಂತೋಷ್ ಕೊಟ್ಟಿಗೆ ಯಾರ್ ಅವಿರೋಧವಾಗಿ ಆಯ್ಕೆಯಾದರು.ಹಾಲಿ ಅಧ್ಯಕ್ಷ ಕೆ.ಪಿ.ರುದ್ರೇಶ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ನಿಗದಿ ಮಾಡಲಾಗಿತ್ತು. ನಾಮಪತ್ರ ಸಲ್ಲಿಸುವ ಕಾಲಕ್ಕೆ ಸಂತೋಷ್ ಕೊಟ್ಟಿಗೆಯಾರ್ ಹೊರತುಪಡಿಸಿ ಬೇರೆ ಸದಸ್ಯರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ತಾಪಂ ಇಒ ರಾಮಲಿಂಗಯ್ಯ ಅಂತಿಮವಾಗಿ ಘೋಷಣೆ ಮಾಡಿದರು. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂತೋಷ್ ಮಾತನಾಡಿ, ಕೊಪ್ಪ ಗ್ರಾಪಂ ಎಲ್ಲಾ ಸದಸ್ಯರ ಒಗ್ಗಟ್ಟನ ಬೆಂಬಲದಿಂದ ನಾನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ,ರಸ್ತೆ ಅಭಿವೃದ್ಧಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷರನ್ನು ಉಪಾಧ್ಯಕ್ಷೆ ಸಾವಿತ್ರಮ್ಮ ಸುರೇಶ್, ಸದಸ್ಯರಾದ ಟಿ. ಎಸ್.ಉಮಾ, ಕವಿತಾ ದಿವಾಕರ್, ಕೆ.ಎಸ್. ನವೀನ್, ಸಿ.ಪಿ. ಜ್ಯೋತಿ, ಕೆ.ಸಿ.ಗಿರೀಶ್, ಜಯಶೀಲ, ಯೋಗಾನಂದ, ಶಬಾನ, ಕುಮಾರ ಕೊಪ್ಪ, ಪರ್ವೇಜ್ ಅಹ್ಮದ್, ವಿಜಯ ಕುಮಾರಿ, ಬಿಸಿ ಸುರೇಶ, ಜೋಗಿ ಗೌಡ,ಜಯಲಕ್ಷ್ಮಿ, ಮಮತಾ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿ ಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಗ್ರಾಪಂ ಮಾಜಿ ಸದಸ್ಯ ಅಂಕೇಗೌಡ, ಮುಖಂಡರಾದ ಕೃಷ್ಣೇಗೌಡ, ಪುಟ್ಟಸ್ವಾಮಿ, ಎಚ್.ಜಿ.ರಾಮಚಂದ್ರ ಮತ್ತಿತರರು ಅಭಿನಂದಿಸಿದರು.