ಚಿತ್ರದುರ್ಗದ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಡಿ.23ರಂದು ಚಿತ್ರದುರ್ಗದಲ್ಲಿ ಜೀವರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಸೌಮ್ಯ ಮಂಜುನಾಥ್ ತಿಳಿಸಿದರು.
ಚಿತ್ರದುರ್ಗ: ಚಿತ್ರದುರ್ಗದ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಡಿ.23ರಂದು ಚಿತ್ರದುರ್ಗದಲ್ಲಿ ಜೀವರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಸೌಮ್ಯ ಮಂಜುನಾಥ್ ತಿಳಿಸಿದರು.ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ಸಂತೋಷ್ ಲಾಡ್ ಅವರ ಅನೇಕ ಸಾಮಾಜಿಕ ಸೇವೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕೇರಳದ ಗುಡ್ಡ ಕುಸಿತ, ಕೇದಾರನಾಥದಲ್ಲಿ ಪ್ರವಾಹ, ಕರೋನ ಸಂದರ್ಭದಲ್ಲಿ ಜೀವಗಳ ರಕ್ಷಣೆ, ಒರಿಸ್ಸಾ ರೈಲು ದುರಂತ, ಈ ಎಲ್ಲಾ ಸಂದರ್ಭಗಳಲ್ಲೂ ತಮ್ಮ ಸಾಮಾಜಿಕ ಕಳಕಳಿಯಿಂದ ತಂಡ ರಚಿಸಿಕೊಂಡು ಸಕ್ರಿಯನಾಗಿ ಪಾಲ್ಗೊಂಡಿದ್ದಾರೆ. ಅವಗಡ ಸಂಭವಿಸಿದ ಸ್ಥಳಕ್ಕೆ ತೆರಳಿ ಅಪಾಯಕ್ಕೆ ಸಿಲುಕಿದ ಜೀವಗಳ ರಕ್ಷಣೆಯಲ್ಲಿ ತೊಡಗಿ ತಕ್ಷಣದ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಕಾಶ್ಮೀರದಲ್ಲಿ ಪಹಲ್ಗಾಂ ದಾಳಿಯ ಸಂದರ್ಭದಲ್ಲಿಯೂ ಭಯಭೀತಗೊಂಡಿದ್ದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಸಂತೋಷ್ ಅವರು ತಮ್ಮ ನೆರವಿನ ಹಸ್ತವನ್ನ ಚಾಚಿದ್ದಾರೆ. ಅವರ ಈ ಸೇವೆಗಳನ್ನು ಪರಿಗಣಿಸಿ ಜೀವ ರಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಡಿ.23ರಂದು ವಾಲ್ಮೀಕಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಪಂಚ ಮಠಾಧೀಶರುಗಳ ನೇತೃತ್ವ, ದಿನೇಶ್ ಅಮ್ಮಿನ್ ಮಟ್ಟು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.ಡಾ.ಸಂದೀಪ್, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಕರ್ನಾಟಕ ರಾಜ್ಯಾಧ್ಯಕ್ಷ ರಂಗಸ್ವಾಮಿ, ಕಾನೂನು ಸಲಹೆಗಾರ ಶಿವಕುಮಾರ್, ಪ್ರಸನ್ನ, ಅಂಬಿಕಾ, ಪ್ರಸನ್ನ ಕೆನ್ನಡಲು, ಧನಂಜಯ, ಅಜಯ್ ಮತ್ತು ಕುಮಾರ್ ಸ್ವಾಮಿ ಇದ್ದರು.