ಸಾರಾಂಶ
60, 70, 80, 90ರ ದಶಕದ ಗೀತೆಗಳನ್ನು ಪ್ರೇಕ್ಷಕರಿಗೆ ಕೇಳಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಭೂಮಿಕಾ ಅಸೋಸಿಯೇಟ್ಸ್ ಮತ್ತು ದಿವಂಗತ ಮೈಕ್ ಚಂದ್ರು ಗೆಳೆಯರ ಬಳಗವು ನಗರದ ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸುಮಧುರ ಹಳೆಯ ಕನ್ನಡ ಚಿತ್ರಗೀತೆಗಳ ಗೀತನಮನ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಿತು.ಈ ಕಾರ್ಯಕ್ರಮದ ಸಂಘಟಕ ಸುರೇಶ್ ಮಾತನಾಡಿ, 60, 70, 80, 90ರ ದಶಕದ ಗೀತೆಗಳನ್ನು ಪ್ರೇಕ್ಷಕರಿಗೆ ಕೇಳಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಗಾಯಕರಾದ ಹಂಸಿನಿ ಎಸ್. ಕುಮಾರ್, ದಿವ್ಯಾ ಸಚ್ಚಿದಾನಂದ, ಕೆ.ಪಿ. ರೇವತಿ, ನಿತಿನ್ ರಾಜಾರಾಮಶಾಸ್ತ್ರಿ, ಅತಿಶಯ್, ಶ್ರೀಕರ ಅವರು ಮೂರುವರೆ ಗಂಟೆಗಳ ಕಾಲ ಹಳೆಯ ಸಮಧುರ ಗೀತೆಗಳನ್ನು ಹಾಡಿ ರಂಜಿಸಿದರು. ಇವರ ಗಾಯನಕ್ಕೆ ವಾದ್ಯವೃಂದಲ್ಲಿ ವಿನಯ್ ರಂಗಧೋಳ್, ಮೆಲ್ವಿನ್ ಲಿಮಾ, ಪ್ರದೀಪ್ ಕಿಗ್ಗಾಲ್, ಸಮರ್ಥ ಮಂಗಳೂರು, ಆತ್ಮರಾಮ್, ಸುಜೇಂದ್ರ ರಾವ್ ಸಾಥ್ ನೀಡಿದರು.ನಂತರ ಮೈಸೂರು ಆನಂದ್ ತಮ್ಮ ಮಿಮಿಕ್ರಿ ಗಾಯನ ಹಾಗೂ ನೃತ್ಯದಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಆಕಾಶವಾಣಿಯ ಮಂಜುನಾಥ್ ನಿರೂಪಿಸಿದರು.