ಶಾರದಾಳ ಮಾರುತೇಶ್ವರ ಓಕುಳಿ ಸಂಭ್ರಮ

| Published : May 19 2024, 01:47 AM IST

ಸಾರಾಂಶ

ಕಲಾದಗಿ : ಶಾರದಾಳ ಗ್ರಾಮದ ಗ್ರಾಮದೇವತೆ ದ್ಯಾಮವ್ವ ದೇವಿಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಗ್ರಾಮ ಆರಾಧ್ಯದೈವ ಮಾರುತೇಶ್ವರ ಓಕುಳಿ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕಲಾದಗಿ

ಶಾರದಾಳ ಗ್ರಾಮದ ಗ್ರಾಮದೇವತೆ ದ್ಯಾಮವ್ವ ದೇವಿಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಗ್ರಾಮ ಆರಾಧ್ಯದೈವ ಮಾರುತೇಶ್ವರನ ಓಕುಳಿ ಸಂಭ್ರಮದಿಂದ ಜರುಗಿತು.

ದ್ಯಾಮವ್ವ ದೇವಿಯ ದೇವಸ್ಥಾನದಿಂದ ಮಾರುತೇಶ್ವರ ಪಲ್ಲಕ್ಕಿ ಉತ್ಸವ ಹವಳ್ಯಪ್ಪ ದೇಗುಲವರೆಗೆ ಸಾಗಿ ಅಲ್ಲಿ ಪೂಜೆ ಸಲ್ಲಿಸಿ, ಹವಳ್ಯಪ್ಪ, ಮಳಿಯಪ್ಪ ದೇಗುಲ ಮುಂದೆ ಶತಮಾನದ ಕಾಲದಿಂದಲೂ ಇದ್ದ ಕಿರು ಓಕುಳಿ ಹೊಂಡಕ್ಕೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಕಿರು ಓಕುಳಿ ಆಡಲಾಯಿತು, ಬಳಿಕ ಗ್ರಾಮದ ಅಗಸಿಯಲ್ಲಿ ಮಾರುತೇಶ್ವರ ದೇವಸ್ಥಾನದವರೆಗೂ ಪಲ್ಲಕ್ಕಿ ಮೆರವಣಿಗೆ ನಡೆದು ಮಾರುತೇಶ್ವರನ ದೇವಸ್ಥಾನ ಮುಂದಿನ ಓಕುಳಿ ಹೊಂಡಕ್ಕೆ ಪೂಜೆ ಸಲ್ಲಿಸಿ ಹೊಂಡಕ್ಕೆ ಬಣ್ಣ ಹಾಕಿ ಓಕುಳಿಗೆ ಚಾಲನೆ ನೀಡಲಾಯಿತು. ಯುವಕರು ಪರಸ್ಪರ ಬಣ್ಣದ ನೀರು ಎರಚುತ್ತದ ಓಕುಳಿ ಆಡಿದರೆ, ಗ್ರಾಮದ ಮಹಿಳೆಯರು ಓಕುಳಿ ನೋಡಿ ಸಂಭ್ರಮಿಸಿದರು.

ನಿಂಗಪ್ಪ ಅರಕೇರಿ, ಯಲ್ಲಪ್ಪ ಅರಕೇರಿ, ಈರಪ್ಪ ಅರಕೇರಿ, ಗಂಗಪ್ಪ ಅರಕೇರಿ, ಸುರೇಶ ಅರಕೇರಿ, ನಿಂಗಪ್ಪ ಕೊಕ್ಕನ್ನವರ, ನಿಂಗಪ್ಪ ಕೊಪ್ಪದ, ರಮೇಶ ಅರಕೇರಿ, ಈರಪ್ಪ ಕೊಕ್ಕನ್ನವರ, ಲಕ್ಷ್ಮಣ ಶಿರಬೂರ, ವಿಠ್ಠಲ ಬಸುನಾಯ್ಕ, ಮಂಜುನಾಥ ಅರಕೇರಿ, ರಾಮಚಂದ್ರ ಬಡಿಗೇರ, ಗೌಡಪ್ಪಗೌಡ ಪಾಟೀಲ, ರಾಮಚಂದ್ರ ಬಡಿಗೇರ, ಬಸು ತೆಗ್ಗಿ, ತಿಪ್ಪಣ್ಣ ಸಾರವಾಡ, ಮಕ್ತುಮ್‌ಸಾಬ ಬಾವಾಖಾನ, ಫಕ್ರುಸಾಬ ಬಾವಾಖಾನ್‌ ಇತರರು ಇದ್ದರು.