ಅಚ್ಯುತನಗರ ನಿವಾಸಿ, 14 ವರ್ಷಗಳಿಂದ ತಮ್ಮ ಬಾಡಿಗೆ ಮನೆ ಬಳಿ ಬೀಡಾಡಿ ದನಗಳಿಗೆ ನಿತ್ಯವೂ ಆಹಾರ ನೀಡುವ ತೀರ್ಥಹಳ್ಳಿಯ ಪುರಸಭೆ ಮಾಜಿ ಉಪಾಧ್ಯಕ್ಷ ಕೆ. ಆರ್. ಅಶೋಕ್ ಅವರನ್ನು ಸರಳೇಬೆಟ್ಟಿನಲ್ಲಿ ಸನ್ಮಾನಿಸಲಾಯಿತು.
ಮಣಿಪಾಲ: ಇಲ್ಲಿನ ಸರಳಬೆಟ್ಟುವಿನ ನಮ್ ಟೀಮ್ ಸಂಘಟನೆಯ 23ನೇ ಹೊಸ ವರ್ಷಾಚರಣೆಯನ್ನು ಮಂಗಳವಾರ ಕಾಂಗ್ರೆಸ್ ಮುಖಂಡ ಜಯ ಶೆಟ್ಟಿ ಬನ್ನಂಜೆ ಉದ್ಘಾಟಿಸಿದರು.
ಈ ಸಂದರ್ಭ ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಸಾಧಕರಾದ ಇಲ್ಲಿನ ಅಚ್ಯುತನಗರ ನಿವಾಸಿ, 14 ವರ್ಷಗಳಿಂದ ತಮ್ಮ ಬಾಡಿಗೆ ಮನೆ ಬಳಿ ಬೀಡಾಡಿ ದನಗಳಿಗೆ ನಿತ್ಯವೂ ಆಹಾರ ನೀಡುವ ತೀರ್ಥಹಳ್ಳಿಯ ಪುರಸಭೆ ಮಾಜಿ ಉಪಾಧ್ಯಕ್ಷ ಕೆ. ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅಶೋಕ್, ಈ ಗೋ ಸೇವೆ ನನಗೆ ಬಹಳ ತೃಪ್ತಿ ಕೊಡುತ್ತದೆ. ನಾನು ಮನೆ ಬದಲಾಯಿಸಿದರೂ ಅವುಗಳು ನಮ್ಮ ಹೊಸ ಮನೆಯನ್ನು ಹುಡುಕಿಕೊಂಡು ಬರುತ್ತವೆ. ನನ್ನ ಕೈಲಾದಷ್ಟು ನಿತ್ಯ ಆಹಾರ ನೀಡುತ್ತೇನೆ. ಮುಂದೆ ಪರ್ಕಳದಲ್ಲಿ ಗೋ ಸೇವಾ ಟ್ರಸ್ಟೊಂದನ್ನು ಆರಂಭಿಸುವ ಇರಾದೆ ಇದೆ. ಇದಕ್ಕೆ ಮಠ ಮಂದಿರಗಳು ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ವಿನಂತಿಸಿದರು.ಈ ಸಂದರ್ಭ ಮಕ್ಕಳಿಗೆ ದಾನಿಗಳ ಸಹಕಾರದಿಂದ ನೋಟ್ ಬುಕ್ ಹಾಗೂ ಶಾಲಾ ಕಲಿಕೆಗೆ ಆಗುವ ಇತರ ವಸ್ತುಗಳನ್ನು ನೀಡಲಾಯಿತು. ಈ ಸಾಲಿನಲ್ಲಿ ನಮ್ಮನ್ನಗಲಿದ ಖ್ಯಾತ ಹುಲಿ ವೇಷದಾರಿ ಅಶೋಕ್‌ರಾಜ್ ಕಾಡಬೆಟ್ಟು, ಸರಳಬೆಟ್ಟು ಬಾಲಮಿತ್ರ ಯಕ್ಷಗಾನ ತಂಡದ ಸ್ಥಾಪಕ ಕಮಲಾಕ್ಷ ಪ್ರಭು ಚೇರ್ಕಾಡಿ, ಸಮಿತಿ ಪದಾಧಿಕಾರಿಗಳಾದ ಪ್ರೇಮ ನಾಯ್ಕ್. ಲಲಿತಾ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಕ್ಕಳಿಗೆ ರಸಪ್ರಶ್ನೆ, ವಿವಿಧ ಆಟೋಟ ಸ್ಪರ್ಧೆ ನಂತರ ಹೊಸ ವರ್ಷ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಹಿರಿಯಡ್ಕ ಸುಧೀರ್ ಶೆಟ್ಟಿ. ಜಯದೀಪ್ ನಾಯಕ್ ಪರ್ಕಳ, ನಮ್ ಟೀಮ್ ಸಂಘಟಕ ಗಣೇಶರಾಜ್ ಸರಳ ಬೆಟ್ಟು, ಸಂಘಟನೆ ಪ್ರಮುಖರಾದ ಸಿಸ್ಟರ್ ಜ್ಯೋತಿ ಗಣೇಶರಾಜ್, ರಾಜೇಶ್ ಪ್ರಭು ಪರ್ಕಳ, ಸುಜಾತ ವಿ. ಪುತ್ರನ್ ಸರಳಬೆಟ್ಟು ಜೊತೆಗಿದ್ದರು.