ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಮಿತಿ ನೇತೃತ್ವದಲ್ಲಿ ನಡೆಯುವ ೬೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಲೋಕಕಲ್ಯಾಣಾರ್ಥ ಸಹಸ್ರ ದೂರ್ವಹವನ
ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಮಿತಿ ನೇತೃತ್ವದಲ್ಲಿ ನಡೆಯುವ ೬೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಲೋಕಕಲ್ಯಾಣಾರ್ಥ ಸಹಸ್ರ ದೂರ್ವಹವನ ನಡೆಯಿತು.ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಂಟಾರು ಗುರು ತಂತ್ರಿ ಮತ್ತು ಸುಬ್ರಹ್ಮಣ್ಯ ಭಟ್ ಅವರ ವೈದಿಕತ್ವದಲ್ಲಿ ನಡೆದ ಸಹಸ್ರ ದೂರ್ವಾಹವನದಲ್ಲಿ ಭಕ್ತರು ತಾವು ತಂದ ಗರಿಕೆ ಸಮರ್ಪಣೆ ಮಾಡಿದರು. ಹೋಮದ ಪೂರ್ಣಾಹುತಿ ಬಳಿಕ ಪಲ್ಲಪೂಜೆ ನಡೆಯಿತು. ಬಳಿಕ ಶ್ರೀ ಗಣೇಶನಿಗೆ ಮಧ್ಯಾಹ್ನದ ಮಹಾಪೂಜೆ ನಡೆಯಿತು.
ಮನೋಜ್ ಶೆಣೈ ದಂಪತಿ ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಸಹಿತ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.ಪೂಜೆಯ ಬಳಿಕ ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ಗಾನಸಿರಿ ಕಲಾ ತಂಡದಿಂದ ಭಕ್ತಿ ಸಂಗೀತ, ಮಧ್ಯಾಹ್ನ ಭಜನೆ, ಬಳಿಕ ಶ್ರೀ ಸಾಯಿ ಕಲಾ ಯಕ್ಷ ಬಳಗ ಡಾ.ಶಿವರಾಮ ಕಾರಂತ ಬಾಲವನ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು.