ಸಾರಾಂಶ
ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ 565 ಸಂಸ್ಥಾನಗಳಿಂದ ಕೂಡಿತ್ತು. ಈ ಸಂಸ್ಥಾನಗಳನ್ನು ಒಟ್ಟಿಗೆ ಸೇರಿಸಿ ಏಕತೆಯ ಭಾರತವನ್ನು ರೂಪಿಸಿದ ಕೀರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಸ್ವತಂತ್ರ ಭಾರತದ ರೂಪುರೇಷೆಯನ್ನು ಬದಲಿಸಿ ಅಖಂಡ ಭಾರತ ನಿರ್ಮಾಣದಲ್ಲಿ ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಇತಿಹಾಸ ಉಪನ್ಯಾಸಕ ಎಸ್.ಬಿ. ಅಣ್ಣಿಗೇರಿ ಹೇಳಿದರು.
ಹಾವೇರಿ: ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ 565 ಸಂಸ್ಥಾನಗಳಿಂದ ಕೂಡಿತ್ತು. ಈ ಸಂಸ್ಥಾನಗಳನ್ನು ಒಟ್ಟಿಗೆ ಸೇರಿಸಿ ಏಕತೆಯ ಭಾರತವನ್ನು ರೂಪಿಸಿದ ಕೀರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಸ್ವತಂತ್ರ ಭಾರತದ ರೂಪುರೇಷೆಯನ್ನು ಬದಲಿಸಿ ಅಖಂಡ ಭಾರತ ನಿರ್ಮಾಣದಲ್ಲಿ ಅವರ ಕಾರ್ಯ ಸ್ಮರಣೀಯವಾಗಿದೆ ಎಂದು ಇತಿಹಾಸ ಉಪನ್ಯಾಸಕ ಎಸ್.ಬಿ. ಅಣ್ಣಿಗೇರಿ ಹೇಳಿದರು.
ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಐಕ್ಯೂಎಸಿ ಹಾಗೂ ಯೂತ್ ರೆಡ್ ಕ್ರಾಸ್ ಸಹಯೋಗದೊಂದಿಗೆ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮದಲ್ಲಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಸವಿತಾ ಹಿರೇಮಠ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಏಕತೆಯ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸದಿಂದ ಬದುಕಿದಾಗ ಇಂಥಹ ಮಹನೀಯರ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕಿ ವಿ.ಕೆ. ಹಲಗಣ್ಣನವರ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್ ಬಿ. ಗಾಜಿಪುರ, ಒಕ್ಕೂಟದ ಕಾರ್ಯಾಧ್ಯಕ್ಷೆ ಎಸ್.ಎ. ಸೈಯದ್, ಎಸ್.ಎಸ್. ಸಣ್ಣಪ್ಪನವರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.ಕವನಾ ಬೊಮ್ಮನಕಟ್ಟಿ ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಂ. ಮಡಿವಾಳರ ಸ್ವಾಗತಿಸಿದರು. ನಾಗರಾಜ ಎಂ.ಎಚ್. ವಂದಿಸಿದರು. ಬಸಮ್ಮ ತಾಯಮ್ಮನವರ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))