ಮಗುವಿನ ಗಂಟಲಲ್ಲಿ ಸಿಲುಕಿದ್ದ ಸೀರೆ ಪಿನ್‌ : ಶಸ್ತ್ರಚಿಕಿತ್ಸೆ ಇಲ್ಲದೆ ಹೊರತೆಗೆದ ವೈದ್ಯರು

| Published : Jul 13 2025, 01:18 AM IST

ಮಗುವಿನ ಗಂಟಲಲ್ಲಿ ಸಿಲುಕಿದ್ದ ಸೀರೆ ಪಿನ್‌ : ಶಸ್ತ್ರಚಿಕಿತ್ಸೆ ಇಲ್ಲದೆ ಹೊರತೆಗೆದ ವೈದ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಆಟವಾಡುತ್ತಿದ್ದ ವೇಳೆ ಪ್ಲಾಸ್ಟಿಕ್‌ ಕ್ಲಿಪ್‌ ಪಿನ್‌ ಗಂಟಲಲ್ಲಿ ನುಂಗಿ, ಉಸಿರಾಡಲಿಕ್ಕಾಗದೇ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಐದು ವರ್ಷದ ಬಾಲಕನೊಬ್ಬನನ್ನು ಇಲ್ಲಿನ ನಾಯ್ಕೋಡಿ ಆಸ್ಪತ್ರೆಯೆ ವೈದ್ಯರ ತಂಡ, ಶಸ್ತ್ರಚಿಕಿತ್ಸೆ ಇಲ್ಲದೆ, ಸ್ಕೋಪಿ ಚಿಕಿತ್ಸೆ ಮೂಲಕ ಹೊರತೆಗೆದು ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿಯ ಆಕಾಶ (5) ಎಂಬ ಮಗು ಆಟವಾಡುತ್ತಿದ್ದ ವೇಳೆ ಸೀರೆಗೆ ಸಿಲುಕಿಸಿಕೊಳ್ಳುವ ಪಿನ್‌ನ ಪ್ಲಾಸ್ಟಿಕ್‌ ಕ್ಲಿಪ್‌ ಆಕಸ್ಮಿಕವಾಗಿ ನುಂಗಿದ್ದಾನೆ. ಉಸಿರಾಡಲು ಕಷ್ಟವಾದಾಗ, ಆತಂಕಗೊಂಡ ಪಾಲಕರು ನಾಯ್ಕೋಡಿ ಆಸ್ಪತ್ರೆಗೆ ಧಾವಿಸಿದ್ದಾರೆ. ನಾಯ್ಕೋಡಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ರೋಗ ತಜ್ಞ ಡಾ. ರಾಹುಲ್ ನಾಯ್ಕೋಡಿ ನೇತೃತ್ವದ ವೈದ್ಯರ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಗುವಿಗೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಸ್ಕೋಪಿ ಮೂಲಕ ಪಿನ್ನಿನ ಪ್ಲಾಸ್ಟಿಕ್ ಕ್ಲಿಪ್ ಅನ್ನು ಯಶಸ್ವಿಯಾಗಿ ಹೊರತೆಗೆದು ಪ್ರಾಣ ರಕ್ಷಿಸಿದ್ದಾರೆ. ಡಾ.ರಾಹುಲ್ ನಾಯ್ಕೋಡಿ ತಂಡದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.