ಸರಗೂರು ನಮ್ಮ ಮಾವನವರ ಊರು, ನಮಗೂ ಸರಗೂರಿಗೂ ನಂಟಿದೆ: ನಟಿ ಗಿರಿಜಾ ಲೋಕೇಶ್

| Published : Jan 18 2025, 12:46 AM IST

ಸರಗೂರು ನಮ್ಮ ಮಾವನವರ ಊರು, ನಮಗೂ ಸರಗೂರಿಗೂ ನಂಟಿದೆ: ನಟಿ ಗಿರಿಜಾ ಲೋಕೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆಯನ್ನು ಕಬ್ಬಿಣದ ಕಡಲೆ ಎನ್ನುತ್ತಾರೆ. ಎಂತಹ ಸುಂದರ ಭಾಷೆ ನಮ್ಮದು. ಕನ್ನಡ ಭಾಷೆಗೆ ಮಾತ್ರ ಪೇಟೆ ಇರುವುದು ಕನ್ನಡಕ್ಕೆ ಮಾತ್ರ. ಏಕೆಂದರೆ ಕನ್ನಡದಲ್ಲಿ ಏನು ಮಾತನಾಡುತ್ತೀವೋ ಅದನ್ನು ಬರೆಯುತ್ತೇವೆ, ಏನು ಬರೆಯುತ್ತೇವೋ ಅದನ್ನು ಮಾತನಾಡುತ್ತೇವೆ ಅಂತಹ ಭಾಷೆ ನಮ್ಮದು.

ಕನ್ನಡಪ್ರಭ ವಾರ್ತೆ ಸರಗೂರು

ಸರಗೂರು ನಮ್ಮ ಮಾವನವರ ಊರು. ನಮಗೂ ಸರಗೂರಿಗೂ ನಂಟಿದೆ. ಸರಗೂರಿನಲ್ಲಿ ಇಂತಹ ಪ್ರತಿಭಾವಂತ ಮಕ್ಕಳಿರುವುದು ನಮ್ಮ ಹೆಮ್ಮೆ ಎಂದು ಚಲನಚಿತ್ರ ಹಿರಿಯ ನಟಿ ಗಿರಿಜಾ ಲೋಕೇಶ್ ಸಂತಸಪಟ್ಟರು.

ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯನ್ನು ಕಬ್ಬಿಣದ ಕಡಲೆ ಎನ್ನುತ್ತಾರೆ. ಎಂತಹ ಸುಂದರ ಭಾಷೆ ನಮ್ಮದು. ಕನ್ನಡ ಭಾಷೆಗೆ ಮಾತ್ರ ಪೇಟೆ ಇರುವುದು ಕನ್ನಡಕ್ಕೆ ಮಾತ್ರ. ಏಕೆಂದರೆ ಕನ್ನಡದಲ್ಲಿ ಏನು ಮಾತನಾಡುತ್ತೀವೋ ಅದನ್ನು ಬರೆಯುತ್ತೇವೆ, ಏನು ಬರೆಯುತ್ತೇವೋ ಅದನ್ನು ಮಾತನಾಡುತ್ತೇವೆ ಅಂತಹ ಭಾಷೆ ನಮ್ಮದು ಎಂದರು.

ಚಲನಚಿತ್ರ ನಿರ್ದೇಶಕ ಕಾರ್ತಿಕ್, ಸರಗೂರು ತಾಲೂಕು ದರ್ಶನ ವಿಷಯದ ಕುರಿತು ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಯ ಹಿನ್ನೆಲೆ ವಿಚಾರವನ್ನು ಮಂಡನೆ ಮಾಡಿದರು. ನಂತರ ಕನ್ನಡ ಶಾಲೆಗಳು-ಇತ್ತೀಚಿನ ಬೆಳವಣಿಗೆ ಕುರಿತು ಡಾ.ಎಚ್.ಬಿ. ಬೆಟ್ಟಸ್ವಾಮಿ ವಿಚಾರ ಮಂಡಿಸಿದರು.

ತಾಲೂಕಿನ ಸುಮಾರು 15ಕ್ಕೂ ಹೆಚ್ಚಿನ ಕವಿಗಳು ಕವನ ವಾಚನ ಮಾಡಿದರು.

ಶಾಸಕ ಶ್ರೀವತ್ಸ, ಎಚ್. ವಿಶ್ವನಾಥ್, ಸಮ್ಮೇಳನಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ವಕೀಲರದ ಎಂ.ಎನ್. ರವಿಶಂಕರ್, ಆಚಾರ್ಯ ವಿದ್ಯಾಕುಲದ ಕುಲಸಚಿವ ಡಾ.ಎಚ್.ಪಿ. ಮೋಹನ್ ಕುಮಾರ್ ಶಾಸ್ತ್ರಿ, ಗ್ರಾಮೀಣ ಮಹೇಶ್, ವಿವಿಧ ಸಮುದಾಯಗಳ ತಾಲೂಕು ಅಧ್ಯಕ್ಷರಾದ ಶಿವಣ್ಣ, ವೀರಭದ್ರಪ್ಪ, ಎಂ.ಎನ್. ಭೀಮರಾಜ್, ಧರಣೇಶ್, ದಸಂಸದ ಇಟ್ನಾ ರಾಜಣ್ಣ, ನಿಂಗರಾಜು ಹೆಗ್ಗನೂರು, ಮಹಮ್ಮದ್ ಅಂಜುಂಪಾಷ, ಚಲುವರಾಜು, ಪರೀಕ್ಷಿತ ರಾಜೇ ಅರಸ್, ಶಿವಶಂಕರ್, ರವಿಕುಮಾರ್, ಚಿಕ್ಕಬೊಮ್ಮ, ಇದಾಯತ್, ಪಿ. ರವಿ, ವಿನಾಯಕ್, ನಾಗರಾಜು ಹುಣಸೇಹಳ್ಳಿ, ಸಿ.ಕೆ. ಗಿರೀಶ್, ಮನುಗನಹಳ್ಳಿ ಮಂಜು, ಬೆಟ್ಟಸ್ವಾಮಿ ಇದ್ದರು.