ಭಗವದ್ಗೀತೆಯಲ್ಲಿ ಅಂತ್ಯಾಕ್ಷರಿ ಹೇಳುವ ಸಾಮರ್ಥ್ಯವನ್ನು ಹೊಂದಿರುವ ಇವರು 18 ಅಧ್ಯಾಯಗಳ ಯಾವುದೇ ಶ್ಲೋಕವನ್ನು ಅಂತ್ಯಾಕ್ಷರಿಗೆ ಬಳಸಿಕೊಳ್ಳುವ ಪರಿಣತಿ ಹೊಂದಿದ್ದಾರೆ. ರಾಜ್ಯಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪುರಸ್ಕಾರ ಪಡೆದಿರುವ ಇವರನ್ನು ಶುಕ್ರವಾರ ಹಾಸನ ನಗರದ ಸಂಸ್ಕೃತ ಭವನದಲ್ಲಿ ಸಂಸ್ಕೃತ ಪಾಠ ಶಾಲೆ, ಮತ್ತು ಸಂಸ್ಕೃತ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೆ ಅನೇಕ ಹಿರಿಯರು ಹಾಗೂ ಪಾಠಶಾಲಾ ಶಿಕ್ಷಕರು ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ಹಾಸನ

ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ ಮಾಡಿರುವ ಮತ್ತು ನಿರರ್ಗಳವಾಗಿ ಹೇಳುವ ಹಾಸನದ ಶ್ರೀಮತಿ ಸರೋಜಮ್ಮ ರಾಜ್ಯದ ವಿವಿಧಡೆ ಗೀತಾ ಗಾಯನ ಸ್ಪರ್ಧೆಯಾಗಿ ತೀರ್ಪುಗಾರರಾಗಿ ಹಲವು ಸಂಘ ಸಂಸ್ಥೆಗಳಿಂದ ಅಭಿನಂದಿತರಾಗಿದ್ದಾರೆ.

ಭಗವದ್ಗೀತೆಯಲ್ಲಿ ಅಂತ್ಯಾಕ್ಷರಿ ಹೇಳುವ ಸಾಮರ್ಥ್ಯವನ್ನು ಹೊಂದಿರುವ ಇವರು 18 ಅಧ್ಯಾಯಗಳ ಯಾವುದೇ ಶ್ಲೋಕವನ್ನು ಅಂತ್ಯಾಕ್ಷರಿಗೆ ಬಳಸಿಕೊಳ್ಳುವ ಪರಿಣತಿ ಹೊಂದಿದ್ದಾರೆ. ರಾಜ್ಯಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪುರಸ್ಕಾರ ಪಡೆದಿರುವ ಇವರನ್ನು ಶುಕ್ರವಾರ ಹಾಸನ ನಗರದ ಸಂಸ್ಕೃತ ಭವನದಲ್ಲಿ ಸಂಸ್ಕೃತ ಪಾಠ ಶಾಲೆ, ಮತ್ತು ಸಂಸ್ಕೃತ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದಕ್ಕೆ ಅನೇಕ ಹಿರಿಯರು ಹಾಗೂ ಪಾಠಶಾಲಾ ಶಿಕ್ಷಕರು ಸಾಕ್ಷಿಯಾದರು.

ಗೀತಾ ಜಯಂತಿ ಅಂಗವಾಗಿ ಸಂಸ್ಕೃತ ಪಾಠ ಶಾಲೆ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಿತ್ತು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಶ್ರೀಮತಿ ಸರೋಜಮ್ಮ ಅವರನ್ನು ಅಭಿನಂದಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮವಾಗಿ ಆಯೋಜಕರು ಮಾಡಿದರು. ಸರೋಜಮ್ಮ ಅವರು ನಿವೃತ್ತ ಶಿಕ್ಷಕ ದಿವಂಗತ ಸುಂದರೇಶನ್( ಗುಂಡಣ್ಣ ) ಅವರ ಧರ್ಮಪತ್ನಿ. ಭಗವದ್ಗೀತೆಯನ್ನು ಪ್ರಸರಿಸುವ ನಿಟ್ಟಿನಲ್ಲಿ ಶಾಲೆ ಮತ್ತು ಸಂಸ್ಕೃತ ಸಂಘವು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.