ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲಾ ಸರ್ವದಾರ್ಶನಿಕರ ಜಯಂತಿಯನ್ನೂ ಒಂದೇ ವೇದಿಕೆಯಲ್ಲಿ ಆಚರಿಸಲು ಎಲ್ಲಾ ಸಮುದಾಯದವರ ಒಪ್ಪಿಗೆಯಂತೆ ಆಚರಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ದೇಶದಲ್ಲೇ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಾತ್ರ ವಿಶೇಷವಾಗಿ ಈ ಸಮಾಜದ ಉದ್ದಾರಕ್ಕೆ ತಮ್ಮ ಕೊಡುಗೆಗಳನ್ನು ನೀಡಿದ ನಮ್ಮ ದಾರ್ಶನಿಕರನ್ನು ಒಂದೇ ಜಾತಿಗೆ ಸೀಮಿತಮಾಡದೇ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲಾ ಸರ್ವದಾರ್ಶನಿಕರ ಜಯಂತಿಯನ್ನೂ ಒಂದೇ ವೇದಿಕೆಯಲ್ಲಿ ಆಚರಿಸಲು ಎಲ್ಲಾ ಸಮುದಾಯದವರ ಒಪ್ಪಿಗೆಯಂತೆ ಆಚರಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ಅಡಳಿತ ಸೌಧದಲ್ಲಿ ಸರ್ವದಾರ್ಶನಿಕರ ಜಯಂತ್ಯುತ್ಸವ ಆಚರಣೆ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು, ಹಾಗೂ ಅವರಲ್ಲಿರುವ ಕೌಶಲ್ಯವನ್ನು ಗುರುತಿಸಿ ಅವರಿಗೆ ಸೂಕ್ತ ಉದ್ಯೋಗ ನೀಡುವುದು, ಸೇರಿದಂತೆ ನಮ್ಮ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಗಿಡಗಳನ್ನು ನೀಡುವುದು, ಮತ್ತು ಲ್ಯಾಬ್‌ಟಾಪ್ ನೀಡುವಂತಹ ಕಾರ್ಯಕ್ರಮಗಳೊಂದಿಗೆ ಸಮ ಸಮಾಜದ ನಿರ್ಮಾಣವನ್ನು ಮಾಡುವಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಒಂದು ಉತ್ತಮ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ರೂಪಿಸಲಾಗಿದ್ದು ಅದರಂತೆ ಈ ವರ್ಷವು ಸರ್ವದಾರ್ಶನಿಕರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಬರಗಾಲ ವಿರುವುದರಿಂದ ಸರಳವಾಗಿ ಆಚರಿಸಲು ಎಲ್ಲಾ ಸಮುದಾಯದವರೂ ಸೇರಿ ತೀರ್ಮಾನಿಸಿದ್ದು ಅದರಂತೆ ನಮ್ಮ ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ದಿನವಾದ ನವೆಂಬರ್ ೨೬ರಂದು ಎಲ್ಲಾ ಸರ್ವದಾರ್ಶನಿಕರ ಜಯಂತೋತ್ಸವನ್ನು ಸಾಣೆಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯಸಾನಿದ್ಯದಲ್ಲಿ ಏರ್ಪಡಿಲಸಲಾಗಿದ್ದು ಈ ಕಾರ್ಯಕ್ರಮದಲ್ಲಿ ನಮ್ಮ ತಾಲೂಕಿನ ಐದು ಮಠಗಳ ಸ್ವಾಮಿಜಿಗಳು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದ ಪೂರ್ವಬಾವಿಯಾಗಿ ಎಲ್ಲಾ ಸಮಾಜದ ಅಧ್ಯಕ್ಷರ ಸಭೆಯನ್ನು ಕರೆದು ಅವರಿಗೆ ಈಗಾಗಲೇ ಟ್ಯಾಬ್ಲೂಗಳನ್ನು ಮಾಡಲು ಕಲಾತಂಡಗಳೊಂದಿಗೆ ಅಲಂಕಾರದೊಂದಿಗೆ ದಾರ್ಶನಿಕರ ಭಾವಚಿತ್ರಗಳನ್ನು ಮೆರವಣಿಗೆಯಲ್ಲಿ ತರುವಂತೆ ತಿಳಿಸಲಾಗಿದೆ. ಕಾರ್ಯಕ್ರಮ ಬೆಳಗ್ಗೆ ೮.೩೦ಕ್ಕೆ ಕನ್ನಡ ಸಂಘದ ವೇದಿಕೆಯ ಮುಂಭಾಗದಿಂದ ಎಲ್ಲಾ ದಾರ್ಶನಿಕರ ಭಾವಚಿತ್ರಗಳ ಮೆರವಣಿಗೆಯನ್ನು ಗೋಡೆಕೆರೆಯ ಶ್ರೀಮೃತ್ಯುಂಜಯ ಸ್ವಾಮಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರಸ್ವಾಮಿ, ಕುಪ್ಪೂರು ಗದ್ದುಗೆಮಠದ ಶ್ರೀತೇಜೇಶ್ವರ ಶಿವಾಚಾರ್ಯಸ್ವಾಮಿ, ಮಾದಿಹಳ್ಳಿ ಮಠದ ಶ್ರೀಚೆನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿ, ಯಹಳನಡುವಿನ ಶ್ರೀಜ್ಞಾನ ಪ್ರಭು ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮಿಗಳು ಉದ್ಘಾಟನೆ ಮಾಡಲಿದ್ದು ಕಾರ್ಯಕ್ರಮದಲ್ಲಿ ಸಂಸದ ವಿ.ಸಂಸದ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಭಾಗವಹಿಸಲಿದ್ದು ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ವಹಿಸಲಿದ್ದು ತಾಲೂಕಿನ ಮಾಜಿ ಶಾಸಕರುಗಳು ಸೇರಿದಂತೆ ತಾಲೂಕಿನ ಎಲ್ಲಾ ಜನಾಂಗಗಳ ಅಧ್ಯಕ್ಷರು , ಮುಖಂಡರುಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಜನರು ಭಾಗವಹಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರೇಡ್ -೨ ತಹಸೀಲ್ದಾರ್ ಪ್ರಸಾದ್, ಇಒ ಶಿವರಾಜಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.