ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಸರ್ವಜ್ಞ ಜಯಂತಿ

| Published : Feb 21 2025, 12:46 AM IST

ಸಾರಾಂಶ

16ನೇ ಶತಮಾನದಲ್ಲಿ ಜೀವನಾನುಭವಗಳ ಸಾರವನ್ನು ತ್ರಿಪದಿಗಳು ಹಾಗೂ ವಚನಗಳ ಮೂಲಕ ಸರ್ವಶ್ರೇಷ್ಠ ಕವಿಯಾದವರು ಸರ್ವಜ್ಞರು ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದ್ದಾರೆ.

ಹೊನ್ನಾಳಿ: 16ನೇ ಶತಮಾನದಲ್ಲಿ ಜೀವನಾನುಭವಗಳ ಸಾರವನ್ನು ತ್ರಿಪದಿಗಳು ಹಾಗೂ ವಚನಗಳ ಮೂಲಕ ಸರ್ವಶ್ರೇಷ್ಠ ಕವಿಯಾದವರು ಸರ್ವಜ್ಞರು ಎಂದು ತಹಸೀಲ್ದಾರ್ ಪಟ್ಟರಾಜಗೌಡ ಹೇಳಿದರು.

ತಾಲೂಕು ಆಡಳಿತ ವತಿಯಿಂದ ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ವಚನಕಾರ, ಸರ್ವಜ್ಞರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ತ್ರಿಪದಿಗಳ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ.ಎಂ. ವಿಜಯಾನಂದ ಕುಮಾರ ಸ್ವಾಮಿ ಅವರು ಸರ್ವಜ್ಞರ ಕುರಿತು ಉಪನ್ಯಾಸ ನೀಡಿ

12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಸರಳವಾದ ವಚನಗಳೊಂದಿಗೆ ಸಮಾಜದ ಕ್ರಾಂತಿಗೆ ಮುನ್ನುಡಿ ಹಾಡಿದ್ದರು. ಅನಂತರದಲ್ಲಿ 16ನೇ ಶತಮಾನದಲ್ಲಿ ಕವಿ ಸರ್ವಜ್ಞರು ತಾವೇ ಹೇಳಿಕೊಂಡಿರುವಂತೆ ಸರ್ವರೊಳಗೊಂದು ನುಡಿಯ ಕಲಿತು ವಿದ್ಯೆಯ ಪರ್ವವೇ ಆದ ಸರ್ವಜ್ಞ ಎನ್ನುವಂತೆ, ಸರ್ವಜ್ಞರು ಲೋಕಸಂಚಾರ ಮಾಡಿದರು. ಲಭ್ಯ ಮಾಹಿತಿ ಪ್ರಕಾರ 70700ಕ್ಕೂ ಹೆಚ್ಚು ವಚನಗಳು, ಸಾವಿರಾರು ತ್ರಿಪದಿಗಳನ್ನು ರಚಿಸಿದ್ದಾರೆ. ಆ ಮೂಲಕ ಸರ್ವಜನ್ಞ ಮಾನವ ಸಮಾಜದ ಬದಲಾವಣೆ ಹಾಗೂ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಕೆ.ಆರ್.ಬಸವರಾಜಪ್ಪ ಮಾತನಾಡಿ, ನಾಡಿನ ಇತಿಹಾಸದಲ್ಲಿ ಬಂದುಹೋಗಿರುವ ಎಲ್ಲ ಮಹಾನ್ ಪುರುಷರು ಇಡೀ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಇಂತಹ ಮಹಾನ್ ಪುರುಷರನ್ನು ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಿ ನೋಡಬಾರದು ಎಂದು ಹೇಳಿದರು.

ಹಿರೇಕಲ್ಮಠದ ಚನ್ನೇಶ್ ಜಕ್ಕಲಿ ಸರ್ವಜ್ಞರ ಕುರಿತು ಮಾತನಾಡಿದರು. ಗ್ರೇಡ್ -2 ತಹಸೀಲ್ದಾರ್ ಸುರೇಶ್, ಕುಂಬಾರ ಸಮಾಜದ ನಗರ ಅಧ್ಯಕ್ಷ ಕೆ.ಜಿ.ಷಣ್ಮುಖಪ್ಪ, ಮಹಿಳಾ ಅಧ್ಯಕ್ಷೆ ಓಂಕಾರಮ್ಮ , ಹಿರಿಯ ಮುಖಂಡ ಟೈಲರ್ ಬಸವರಾಜ್, ಶಿರಸ್ತೇದಾರ ಮಂಜುನಾಥ್, ಶಿಕ್ಷಣ ಇಲಾಖೆಯ ಅಧಿಕಾರಿ ಅಪ್ಸರ್ ಆಹಮ್ಮದ್, ಸುರೇಶ್, ಚನ್ನೇಶ್, ಶಿವರಾಜ್. ಕಂದಾಯ ಇಲಾಖೆ ನೌಕರ ರವಿ, ಮುಂತಾದವರು ಇದ್ದರು.

- - --20ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸರ್ವಜ್ಞರ ಜಯಂತಿ ಸಮಾರಂಭದಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ ಅವರು ಸರ್ವಜ್ಞ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿದರು. ಕುಂಬಾರ ಸಮಾಜದ ಮುಖಂಡರು, ಅಧಿಕಾರಿ-ಸಿಬ್ಬಂದಿ ಇದ್ದರು.