ಸಾರಾಂಶ
ಕೊಡೇಕಲ್ ಗ್ರಾಮದ ಜನಕ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಡೇಕಲ್
ಸಂತ ಕವಿ ಸರ್ವಜ್ಞರ ವಚನಗಳು ಮಾನವನ ಜೀವನ ಕನ್ನಡಿಯಾಗಿದ್ದು, ಸಾಮಾಜಿಕ, ಧಾರ್ಮಿಕ, ಆರ್ಥಿಕ ಹಾಗೂ ಸರ್ವಾಂಗೀಣ ವ್ಯಕ್ತಿತ್ವಕ್ಕೆ ಪೂರಕವಾಗಿವೆ ಎಂದು ಉಪನ್ಯಾಸಕ ಎಸ್.ಸಿ. ಪಂಜಗಲ್ ಹೇಳಿದರು.ಇಲ್ಲಿನ ಜನಕ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತ್ರಿಪದಿ ಬ್ರಹ್ಮ ಸರ್ವಜ್ಞ ಜಯಂತಿ ಆಚರಿಸಿ, ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅನಾದಿ ಕಾಲದಿಂದಲೂ ನಮ್ಮ ದೇಶದ ನಾಡು ನುಡಿ, ಸಂಸ್ಕೃತಿ ಪರಂಪರೆ ಕಟ್ಟಿ ಬೆಳೆಸಿದ ಮಹಾತ್ಮರು ಅನೇಕರು. ಅವರೆಲ್ಲರೂ ಮುಂದಿನ ಪೀಳಿಗೆಗಾಗಿ ತಮ್ಮಲ್ಲಿ ಇರುವಂತಹ ಜ್ಞಾನವನ್ನು ನೀಡಿದ ಮಹಾ ಚೇತನಗಳು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಸಾಧಕರು ಉದಯಿಸಿದ್ದಾರೆ. ತಮ್ಮ ಆದರ್ಶಗಳಿಂದ ನಮ್ಮ ದೇಶದ ಹಿರಿಮೆಯನ್ನು ಜಗತ್ತಿನ ಉತ್ತುಂಗ ಶಿಖರದಲ್ಲಿ ನಿಲ್ಲಿಸಿದಂತಹ ವ್ಯಕ್ತಿಗಳಲ್ಲಿ ಅತಂತ್ಯ ಮುಖ್ಯವಾಗಿ ಕಂಡು ಬರುವಂತಹ ಸರ್ವರಿಗೂ ಜ್ಞಾನವನ್ನು ಹಂಚಿದಂತಹ ಮಹಾನ್ ಚೇತನ ನಮ್ಮ ಕವಿ ಸರ್ವಜ್ಞ ಎಂದರು.ಉಪನ್ಯಾಸಕ ಶಶಿಕುಮಾರ ಪತ್ತಾರ ಮಾತನಾಡಿ, ಸರ್ವಜ್ಞ ಸ್ವತಃ ತಮ್ಮ ತ್ರಿಪದಿಯಲ್ಲಿ ತಿಳಿಸಿರುವಂತೆ ಏಳು ಕೋಟಿ ಏಳು ಲಕ್ಷ ಏಳು ಸಾವಿರ ಎಪ್ಪತ್ತು ವಚನ ರಚನೆ ಮಾಡಿದ್ದು, ಇಂದು ಸಾವಿರಗಳಲ್ಲಿ ಮಾತ್ರ ವಚನಗಳು ಲಭ್ಯವಿದೆ ಎಂದು ಸಂಶೋಧಕ ಮಲ್ಲೇಪುರಂ ವೆಂಕಟೇಶ್ವರವರ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಹಾಗೂ ಆಡುಮುಟ್ಟದ ಸೊಪ್ಪಿಲ್ಲ. ಸರ್ವಜ್ಞ ಮೂರ್ತಿ ಬರೆಯದ ವಿಷಯವಿಲ್ಲ ಎಂಬ ಮಹಾನ್ ಹೇಳಿಕೆಯನ್ನು ಇತಿಹಾಸಕಾರರು ನುಡಿದಿದ್ದಾರೆ. ಅಂತಹ ಆದರ್ಶ ವ್ಯಕ್ತಿ ತತ್ವಾದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆದೆ ಎಂದರು.
ಈ ವೇಳೆ ಉಪನ್ಯಾಸಕರಾದ ನಾಗರಾಜ ಪಾಟೀಲ್, ಸುಜಾತಾ ವಂಗಿ, ಸಂಗೀತಾ ದೊರಿಗೋಳ್ ಹಾಗೂ ವಿರ್ದ್ಯಾರ್ಥಿಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಅಕ್ಷತಾ ನಿರೂಪಿಸಿ, ವಂದಿಸಿದರು.