ರಸಪ್ರಶ್ನೆಯಲ್ಲಿ ಸರ್ವಜ್ಞ ವಿದ್ಯಾಪೀಠ ಶಾಲೆ ದ್ವಿತೀಯ ಸ್ಥಾನ

| Published : Feb 25 2024, 01:49 AM IST

ಸಾರಾಂಶ

ತಾಳಿಕೋಟೆ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಒಟ್ಟು 32 ಶಾಲೆಗಳು ಭಾಗಹಿಸಿದ್ದು, ಮೊದಲಿಗೆ ಎಲ್ಲ ವಿದ್ಯಾರ್ಥಿಗಳಿಗೆ ಅರ್ಹತಾ ಸುತ್ತಿನ ಲಿಖಿತ ಪರೀಕ್ಷೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ:

ತಾಳಿಕೋಟೆ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಒಟ್ಟು 32 ಶಾಲೆಗಳು ಭಾಗಹಿಸಿದ್ದು, ಮೊದಲಿಗೆ ಎಲ್ಲ ವಿದ್ಯಾರ್ಥಿಗಳಿಗೆ ಅರ್ಹತಾ ಸುತ್ತಿನ ಲಿಖಿತ ಪರೀಕ್ಷೆ ನಡೆಸಲಾಯಿತು.

ಅದರಲ್ಲಿ 79 ಅಂಕ ಪಡೆದ ಸರ್ವಜ್ಞ ವಿದ್ಯಾಪೀಠ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಮತ್ತು ಸರ್ವಜ್ಞ ವಿದ್ಯಾಪೀಠ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು 73 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದರು. ಒಟ್ಟು 10 ತಂಡಗಳನ್ನು ಆಯ್ಕೆ ಮಾಡಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಅಂತಿಮ ಸುತ್ತಿನಲ್ಲಿ ಸರ್ವಜ್ಞ ವಿದ್ಯಾಪೀಠ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶರತ್ ಬಸವರಾಜ ಹುಗ್ಗಿ, ರಾಧಿಕಾ ದೇವರಾಯ ಗುಡಿಹಾಳ, ಮಲ್ಲಿಕಾರ್ಜುನ ಶಂಕರ ಹಳಕೂರ ದ್ವಿತೀಯ ಸ್ಥಾನ ಪಡೆದರು. ವಿಜೇತರಾದ ತಂಡಕ್ಕೆ ₹ 3 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ನೀಡಿ ಗೌರವಿಸಲಾಯಿತು.ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಮಂಗಳೂರು, ಮುಖ್ಯಗುರುಗಳಾದ ಸಂತೋಷ ಪವಾರ, ಹಾಗೂ ಗುರು ವೃಂದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ರಸುಲಸಾ ತುರಕನಗೇರಿ, ಬಸವರಾಜ ಸವದತ್ತಿ, ಸಿದ್ದನಗೌಡ ಮುದ್ನೂರ, ರವಿಕುಮಾರ ಮಲ್ಲಾಬಾದಿ, ಲಕ್ಷ್ಮೀ ಚುಂಚುರ, ಗಿರೀಶ.ಎಚ್, ರೂಪಾ ಪಾಟೀಲ, ಮಿನಾಕ್ಷಿ ರಜಪೂತ, ರೂಪಾ ಬಿರಾದಾರ, ಶಿವಲೀಲಾ ಚುಂಚುರ, ಸಂಗೀತಾ ಬಿರಾದಾರ, ಭಾಗ್ಯಶ್ರೀ ಗಿರಿನಿವಾಸ, ಅಂಬೂಜಾ ಹಜೇರಿ, ಜ್ಯೋತಿ ನಾಯ್ಕ, ಜೆಸಮೀನ ಆಲ್ದಾಳ, ವಿದ್ಯಾಶ್ರೀ ಗಿರಿನಿವಾಸ, ಶರಣಗೌಡ ಕಾಚಾಪುರ, ಬಸವರಾಜ ಕೋಣ್ಣುರ, ಜಯಶ್ರೀ ಮಕಾಸಿ, ರೇಷ್ಮಾ ನಧಾಪ್, ಮುಬಿನ ಮುರಾಳ, ಮೇಘಾ ಬಲಕಲ್ಲ, ನಾಗರತ್ನ ಮೈಲೇಶ್ವರ ಹಾಗೂ ಸಿಬ್ಬಂದಿ ಅಭಿನಂದನೆ ತಿಳಿಸಿದರು.