ಸಾರಾಂಶ
ಬ್ರಹ್ಮಕಲಶೋತ್ಸವ: ವಿಜ್ಞಾಪನಾ ಪತ್ರ ಬಿಡುಗಡೆಕನ್ನಡಪ್ರಭ ವಾರ್ತೆ ಮೂಲ್ಕಿ
ದೈವಸ್ಥಾನ, ದೇವಸ್ಥಾನಗಳ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ. ನಮ್ಮ ಧಾರ್ಮಿಕತೆಗೆ ಎಷ್ಟು ಶಕ್ತಿ ಇದೆ ಎಂದರೆ ಹೊರ ದೇಶದವರು ಕೂಡ ನಮ್ಮ ಭಗವದ್ಗೀತೆ ಶ್ಲೋಕವನ್ನು ಕಂಠಪಾಠ ಮಾಡಿದ ಉದಾಹರಣೆ ಇದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಗೌರಾವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವಳದಲ್ಲಿ ನಡೆದ ಮುಷ್ಠಿಕಾಣಿಕೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ವಿಜ್ಞಾಪನಾಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್ ಮಾತನಾಡಿ, ಸುಮಾರು 5 ಕೋಟಿ ಮುಂಬೈ ಸಮಿತಿಯಿಂದ ದೇಣಿಗೆ ಕೊಡುವ ಜವಾಬ್ದಾರಿ ಇದೆ. ಈಗಾಗಲೇ ನನ್ನ ವೈಯಕ್ತಿಕ ನೆಲೆಯಲ್ಲಿ 50 ಲಕ್ಷ ರು. ಕೊಡುತ್ತಿದ್ದೇನೆ ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಶ್ರೀಮಂತಿಕೆ ತುಂಬಾ ಜನರಲ್ಲಿ ಇದೆ. ಆದರೆ ಹೃದಯ ಶ್ರೀಮಂತಿಕೆ ಇರುವವರು ಕೆಲವೇ ಕೆಲವು ಜನ ಮಾತ್ರ. ಅಂಥವರು ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಾರೆ ಎಂದರು.
ದೇವಳದ ಮೊಕ್ತೇಸರ ಅಪ್ಪು ಯಾನೇ ಶ್ರೀನಿವಾಸ ಪೂಜಾರಿ ಆಶೀರ್ವಚನ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ವಿಶ್ವನಾಥ್ ಆದಿ ಉಡುಪಿ, ಸುದರ್ಶನ್ ಮೂಡುಬಿದರೆ, ಗಿರಿಧರ್ ಶೆಟ್ಟಿ, ಗೀತಾಂಜಲಿ ಸುವರ್ಣ, ಈಶ್ವರ್ ಕಟೀಲ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯ, ಮುಂಬೈ ಸಮಿತಿಯ ಅಧ್ಯಕ್ಷ ವೇದ ಪ್ರಕಾಶ್ ಶ್ರೀಯಾನ್, ಉಚ್ಚಿಲ ಮೊಗವೀರ ಸಭಾದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ದೇವಾಡಿಗ ಮಹಾಮಂಡಳಿ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉದ್ಯಮಿ ಸುನೀಲ್ ಪಾಯಸ್ ಮಂಗಳೂರು, ಉಳ್ಳಾಲ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ ನಗರ, ಬಾಲಕೃಷ್ಣ ಕಾರ್ನವರು, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಸಸಿಹಿತ್ಲು, ಸಾರಂತ್ತಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಕಿರಣ್ ಕುಮಾರ್ ಶೆಟ್ಟಿ ಕೊಲ್ನಾಡುಗುತ್ತು, ಚಂದ್ರಶೇಖರ ನಾಣಿಲ್, ದಿವಾಕರ ಸಾಮಾನಿ, ಎಕ್ಕಾರು ಬಂಟರ ಸಂಘ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು, ಮುರ ಸದಾಶಿವ ಶೆಟ್ಟಿ, ಸುನೀಲ್ ಆಳ್ವ, ವಿನೋದ್ ಬೊಳ್ಳೂರು, ಕಸ್ತೂರಿ ಪಂಜ, ಗೀತಾ ಕೋಟ್ಯಾನ್, ದೇವದಾಸ್, ಪ್ರಸಾದ್ ಶೆಟ್ಟಿ ಮರಕಡ, ರಣದೀಪ್ ಕಾಂಚನ್, ರವಿ ಕಾಂಚನ್, ರವಿಚಂದ್ರ, ನವೀನ್ ಚಂದ್ರ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಪ್ರಭಾಕರ ಪೂಜಾರಿ, ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಕೋಶಾಧಿಕಾರಿ ಸುರೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು. ವಾಮನ್ ಇಡ್ಯ ಪ್ರಸ್ತಾವನೆಗೈದರು. ಈ ಸಂದರ್ಭ ವಿವಿಧ ಸಮಿತಿಗಳ ಘೋಷಣೆ ಮಾಡಲಾಯಿತು.ಮುಷ್ಟಿ ಕಾಣಿಕೆ ಸಮರ್ಪಣೆ:ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಮುಷ್ಟಿ ಕಾಣಿಕೆ ಸಮರ್ಪಣೆ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಕ್ಷೇತ್ರದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಮುಷ್ಟಿ ಕಾಣಿಕೆಗೆ ಚಾಲನೆ ನೀಡಿದರು.ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಧರ್ಮಪಾಲ ದೇವಾಡಿಗ, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರೀಯಾನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 30 ಲಕ್ಷ ವೆಚ್ಚದಲ್ಲಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಮುಖಮಂಟಪವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ ಹಾಗೂ ಆಡಳಿತ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಪಂದುಬೆಟ್ಟು ಆದಿಉಡುಪಿ ನಿರ್ಮಿಸಿಕೊಡುತ್ತಿದ್ದು, ಅಷ್ಟೇ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿಂಬದಿಯ ಪ್ರವೇಶ ದ್ವಾರವನ್ನು ನಿರ್ಮಿಸಿಕೊಡಲು ದಾನಿಯೊಬ್ಬರು ಮುಂದೆ ಬಂದಿದ್ದಾರೆ. ದೇವಸ್ಥಾನದ ಟ್ರಸ್ಟಿ ಗೀತಾ. ಪಿ. ಕುಮಾರ್ 10 ಲಕ್ಷ ರು. ದೇಣಿಗೆಯ ಘೋಷಣೆ ಮಾಡಿದ್ದು, ಕನ್ಯಾನ ಸದಾಶಿವ ಶೆಟ್ಟಿಯವರು ಮುಷ್ಟಿ ಕಾಣಿಕೆಯ ಮೂಲ ಕಾಣಿಕೆಯಾಗಿ 9 ಲಕ್ಷ ರು. ನೀಡಿದ್ದು, ಮುಂದೆ ಇನ್ನಷ್ಟು ನೀಡುವ ಭರವಸೆ ನೀಡಿದರು.
;Resize=(128,128))