ಸಸಿಹಿತ್ಲು: ‘ಗ್ರಾಮದ ಗೌಜಿ’ ಕೆಸರುಗದ್ದೆ ಕ್ರೀಡಾಕೂಟ

| Published : Jul 01 2024, 01:50 AM IST

ಸಾರಾಂಶ

ಬಾಕಿಮಾರು ಗದ್ದೆಯಲ್ಲಿ ನಡೆದ ಮಂಗಳೂರು, ಮೂಲ್ಕಿ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ‘ಗ್ರಾಮದ ಗೌಜಿ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ನಮ್ಮ ತುಳುನಾಡಿನ ಹಬ್ಬ, ಆಚರಣೆಗಳು, ಆಟೋಟಗಳು ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಶಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಗೌಜಿ ಕಾರ್ಯಕ್ರಮದ ಮೂಲಕ ಯುವ ಜನಾಂಗಕ್ಕೆ ಕೃಷಿ ಹಾಗೂ ಜನಪದ ಕ್ರೀಡೆಗಳ ಬಗ್ಗೆ ತಿಳಿ ಹೇಳುವ ಕಾರ್ಯವಾಗಬೇಕು ಎಂದು ಮಂಗಳೂರು ವಿಕಾಸ್ ಕಾಲೇಜಿನ ಸೂರಜ್ ಕಲ್ಯ ಹೇಳಿದರು.

ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಮಹೋತ್ಸವದ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯ ಬಾಕಿಮಾರು ಗದ್ದೆಯಲ್ಲಿ ನಡೆದ ಮಂಗಳೂರು, ಮೂಲ್ಕಿ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ‘ಗ್ರಾಮದ ಗೌಜಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಗ್ಗಿದ ಕಳಿಯ ಸಂಘದ ಗೌರವಾಧ್ಯಕ್ಷ ಚಂದಯ್ಯ ಕರ್ಕೇರ ವಹಿಸಿದ್ದರು. ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಉದ್ಯಮಿ ಆರಿಫ್ ಬಾವಾ ಮುಕ್ಕ, ಬಿಜೆಪಿ ನಾಯಕ ಪುಷ್ಪರಾಜ್ ಮುಕ್ಕ, ಯವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ, ದಿವಾಕರ ಸಾಮಾನಿ ಚೇಳಾಯರು ಗುತ್ತು, ವಿಶಾಲ್ ಶೆಟ್ಟಿ, ವೈಷ್ಣವಿ ಕಾರ್ಗೋ, ಕಾವೂರು ಬಿಲ್ಲವ ಸಂಘದ ರಕ್ಷಿತ್ ಪೂಜಾರಿ, ಗುರಿಕಾರ ಶ್ರೀನಿವಾಸ ಕರ್ಕೇರಾ, ತಿಲಕ್ ಕರ್ಕೆರ ಲಚ್ಚಿಲ್, ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್., ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಮುಂಬೈ ಸಮಿತಿಯ ಪುರುಷೋತ್ತಮ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಸರೋಜಿನಿ ಶಾಂತರಾಜ್, ಉದಯ ಬಿ. ಸುವರ್ಣ, ಮಧು ಸುವರ್ಣ ಮಾಲತಿ ಡಿ. ಕೋಟ್ಯಾನ್, ಲೀಲಾ ವಸಂತ್ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು. ರಮೇಶ್‌ ಪೂಜಾರಿ ಚೇಳಾಯರು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ನರೇಶ್ ಕುಮಾರ್ ಸಸಿಹಿತ್ಲು ನಿರೂಪಿಸಿದರು. ಬಳಿಕ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.