ಸಾತಪ್ಪನ್‌ ಕಪ್‌ ಗಾಲ್ಫ್‌ ಚಾಂಪಿಯನ್‌ ಶಿಪ್‌ ನಲ್ಲಿ ಮಡಿಕೇರಿಯ ಕೆ ಪಿ ರಂಜಿತ್‌ ಚಾಂಪಿಯನ್‌ಶಿಪ್‌ ತನ್ನದಾಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ಡೌನ್ಸ್ ಗಾಲ್ಪ್ ಕ್ಲಬ್ ನಲ್ಲಿ ಜರುಗಿದ 21 ನೇ ಆವೃತ್ತಿಯ ಸಾತಪ್ಪನ್ ಕಪ್ ಗಾಲ್ಫ್‌ ಚಾಂಪಿಯನ್ ಶಿಪ್ ನಲ್ಲಿ ಮಡಿಕೇರಿಯ ಕೆ.ಪಿ. ರಂಜಿತ್ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡರೆ, ಮಾಲೀ ಶಶಿಕಿರಣ್ ದ್ವಿತೀಯ ಸ್ಥಾನ ಗಳಿಸಿದರು.ಎರಡು ದಿನಗಳ ಗಾಲ್ಫ್‌ ಪಂದ್ಯಾವಳಿಯಲ್ಲಿ 71 ಗಾಲ್ಫ್‌ರ್ ಗಳು ಪಾಲ್ಗೊಂಡಿದ್ದರು.

ವಿವಿಧ ವಿಭಾಗಗಳಲ್ಲಿ ಕೆ.ಯು. ವಿಕ್ರಾಂತ್, ಎಚ್.ಎಲ್. ಸಂಜಯ್, ಕೆ.ಎನ್. ಅಪ್ಪಣ್ಣ , ಎಂ.ಎನ್. ಸೋಮಯ್ಯ, ಕೆ.ಹರೀಶ್ ಅಪ್ಪಣ್ಣ, ಎಂ.ಎ.ಪೂಣಚ್ಚ, ಡಿ.ಜಿ. ಕಿಶೋರ್, ಟ್ರೋಫಿ ವಿಜೇತರಾದರೆ ಮಹಿಳೆಯರ ವಿಭಾಗದಲ್ಲಿ ಶ್ವೇತಾ ರಾಮು, ಪ್ರಥಮ, ಮೖಣಾಲಿನಿ ಚಿಣ್ಣಪ್ಪ ದ್ವಿತೀಯ ಸ್ಥಾನ ಪಡೆದರು.

ಲಾಂಗೆಸ್ಟ್ ಡ್ರೈವ್ ವಿಭಾಗದಲ್ಲಿ ಅಖಿಲ್ ಮುತ್ತಣ್ಣ ಮತ್ತು ಕ್ಲೋಸೆಸ್ಟ್ ಟು ಪಿನ್ ವಿಭಾಗದಲ್ಲಿ ಕೆ.ಪಿ.ರಂಜಿತ್ ಬಹುಮಾನ ತನ್ನದಾಗಿಸಿಕೊಂಡರು.ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್ ಅಧ್ಯಕ್ಷ ಮುತ್ತಣ್ಣ ಕಾರ್ಯಪ್ಪ, ಪಂದ್ಯಾವಳಿಯ ಪ್ರಾಯೋಜಕರಾದ ನಾಗಾರ್ಜುನ್ ಸಾಖಮುರಿ, ಪ್ರಶಾಂತ್ ಸಾಖಮುರಿ, ಗೀತಾ ಸಾಖಮುರಿ, ಪದ್ಮಜಸಾಖಮುರಿ ಬಹುಮಾನ ವಿತರಿಸಿದರು. ಮರ್ಕೇರಾ ಡೌನ್ಸ್ ಗಾಲ್ಫ್‌ ಕ್ಲಬ್‌ನ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಹಾಜರಿದ್ದರು.