ಧರ್ಮಾಚರಣೆಯಿಂದ ಜೀವನದಲ್ಲಿ ಸಂತೃಪ್ತಿ, ಯಶಸ್ಸು: ಶ್ರೀ ಪ್ರಜ್ಞಾನಂದ ಬಾಲ ಸ್ವಾಮೀಜಿ

| Published : Jan 26 2025, 01:35 AM IST

ಧರ್ಮಾಚರಣೆಯಿಂದ ಜೀವನದಲ್ಲಿ ಸಂತೃಪ್ತಿ, ಯಶಸ್ಸು: ಶ್ರೀ ಪ್ರಜ್ಞಾನಂದ ಬಾಲ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ಧರ್ಮ ಶ್ರೇಷ್ಠವಾದುದು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ನಾವು ಧರ್ಮವನ್ನು ನಂಬಿ ಧರ್ಮಾಚರಣೆ ಮಾಡಿದಾಗ ಜೀವನದಲ್ಲಿ ಸಂತೃಪ್ತಿ, ಯಶಸ್ಸು ಸಾಧ್ಯ ಎಂದು ವಾಸವಿ ಪೆನುಗೊಂಡ ಕ್ಷೇತ್ರದ ಶ್ರೀ ಪ್ರಜ್ಞಾನಂದ ಬಾಲ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಧರ್ಮ ಶ್ರೇಷ್ಠವಾದುದು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ನಾವು ಧರ್ಮವನ್ನು ನಂಬಿ ಧರ್ಮಾಚರಣೆ ಮಾಡಿದಾಗ ಜೀವನದಲ್ಲಿ ಸಂತೃಪ್ತಿ, ಯಶಸ್ಸು ಸಾಧ್ಯ ಎಂದು ವಾಸವಿ ಪೆನುಗೊಂಡ ಕ್ಷೇತ್ರದ ಶ್ರೀ ಪ್ರಜ್ಞಾನಂದ ಬಾಲ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಶೀರ್ವಚನ ನೀಡಿ, ಶ್ರದ್ಧೆ ಭಕ್ತಿಯಿಂದ ಭಗವಂತನ ಆರಾಧನೆ ಮಾಡಬೇಕು. ದೇವರ ಧ್ಯಾನ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮಗೆ ಭಗವಂತನ ಅನುಗ್ರಹ ಪ್ರಾಪ್ತವಾಗುವ ಜೊತೆಗೆ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಯಶಸ್ಸು ಸಿಗುತ್ತದೆ.

ಗುರುಹಿರಿಯರಲ್ಲಿ ಭಯ ಭಕ್ತಿ ತೋರಬೇಕು. ಸಮಾಜದಲ್ಲಿ ಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು. ನಾವು ಯಾವುದೇ ವೃತ್ತಿಯನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಜನರು ನಮ್ಮನ್ನು ಗುರುತಿಸುತ್ತಾರೆ. ಧರ್ಮವೂ ನಮ್ಮನ್ನು ಕಾಪಾಡುತ್ತದೆ. ಆರ್ಯವೈಶ್ಯ ಸಮಾಜದವರು ಹಿಂದಿನಿಂದಲೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸಮಾಜದ ಬಹುತೇಕರು ವ್ಯಾಪಾರ ವೃತ್ತಿ ಅವಲಂಬಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಾಪಾರ ನಡೆಸಿ ಜೀವನ ನಿರ್ವಹಣೆ ಸುಲಭವಲ್ಲ. ಕರ್ತವ್ಯ ಪ್ರಜ್ಞೆ, ಪ್ರಾಮಣಿಕತೆ ಅಮ್ಮನವರ ಅನುಗ್ರಹವಿದ್ದಲಿ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಾಧ್ಯ ಎಂದರು. ಇದಕ್ಕೂ ಮೊದಲು ಶ್ರೀಗಳು ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ವಾಸವಿ ಪೆನುಗೊಂಡ ಕ್ಷೇತ್ರದ ಶ್ರೀ ಪ್ರಜ್ಞಾನಂದ ಬಾಲ ಸ್ವಾಮೀಜಿ ಮುಂದಿನ ತಿಂಗಳು ಫೆಬ್ರವರಿಯಲ್ಲಿ ಪೀಠಾರೋಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿ ಶ್ರೀ ಶಾರದಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದರು. ನಂತರ ಶ್ರೀ ಮಠದ ನರಸಿಂಹವನದ ಶ್ರೀ ಗುರುಭವನಕ್ಕೆ ತೆರಳಿ ಜಗದ್ಗುರುಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಮುಖಂಡ ಮಂಜುನಾಥ ಶ್ರೇಷ್ಠಿ, ಜಗದೀಶ್, ಕುಮಾರ ಸ್ವಾಮಿ, ಸರೋಜಮ್ಮ, ಪದ್ಮಾವತಿ, ಗುರುರಾಜ, ಆಶಾಲಕ್ಷ್ಮಿ,ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.

25 ಶ್ರೀ ಚಿತ್ರ 3-

ಶೃಂಗೇರಿ ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಪೆನುಗೊಂಡ ಕ್ಷೇತ್ರದ ಶ್ರೀ ಪ್ರಜ್ಞಾನಂದ ಬಾಲ ಸ್ವಾಮೀಜಿ ಆಶೀರ್ವಚನ ನೀಡಿದರು.