ಹೋರಾಟದಲ್ಲಿ ಸಂತೃಪ್ತಿ ಕಂಡರೂ ಅವಕಾಶದಿಂದ ವಂಚಿತರಾದರು: ಬಿ.ಎಲ್‌.ಶಂಕರ್

| Published : Aug 03 2025, 01:30 AM IST

ಹೋರಾಟದಲ್ಲಿ ಸಂತೃಪ್ತಿ ಕಂಡರೂ ಅವಕಾಶದಿಂದ ವಂಚಿತರಾದರು: ಬಿ.ಎಲ್‌.ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ದಿ.ಎಚ್.ಟಿ.ರಾಜೇಂದ್ರ ಅವರು ಹೋರಾಟದಲ್ಲೇ ಸಂತೃಪ್ತಿ ಕಂಡಿದ್ದಾರೆ. ಆದರೆ, ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.

- ಲಿಟಲ್ ಪ್ಲವರ್ ಚರ್ಚನಲ್ಲಿ ಮಲೆನಾಡಿನ ಮಾಣಿಕ್ಯ ಎಚ್‌.ಟಿ.ರಾಜೇಂದ್ರ ಅವರಿಗೆ ನುಡಿ ನಮನ, ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಿ.ಎಚ್.ಟಿ.ರಾಜೇಂದ್ರ ಅವರು ಹೋರಾಟದಲ್ಲೇ ಸಂತೃಪ್ತಿ ಕಂಡಿದ್ದಾರೆ. ಆದರೆ, ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.ಶನಿವಾರ ಲಿಟ್ಟಲ್ ಫ್ಲವರ್ ಹಾಲ್ ನಲ್ಲಿ 50ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಇತ್ತೀಚಿಗೆ ನಿಧನರಾದ ಮಲೆನಾಡಿನ ಮಾಣಿಕ್ಯ ಎಚ್.ಟಿ.ರಾಜೇಂದ್ರ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಧೃವತಾರೆ-ರಾಜೇಂದ್ರ ಬಾಳ ನೆನಪಿನ ಹನಿಗಳು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ಸತ್ತವರ ಬಗ್ಗೆ, ಸಾವಿನ ಬಗ್ಗೆ, ಆಪ್ತರ ಬಗ್ಗೆ ಮಾತನಾಡುವುದು ಕಷ್ಟ, ಹುಟ್ಟುವುದು ಮರಣ ಹೊಂದುವುದು ಅನಿವಾರ್ಯ. ಪ್ರತಿ ಯೊಬ್ಬರ ಬದುಕಿನಲ್ಲೂ ಇದು ಬರುವಂತಹದ್ದು. ಮರಣದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಜನತಾ ಪರಿವಾರದಲ್ಲಿ ಜ್ಞಾನವಂತರು, ತಿಳಿವಳಿಕೆವುಳ್ಳ ಸಮಾಜವಾದಿ ಹಿನ್ನಲೆ ಬೆಂಬಲವಿದ್ದ ಎಂ.ಪಿ.ಪ್ರಕಾಶ್‌ ಸಾಲಿಗೆ ರಾಜೇಂದ್ರ ಅವರನ್ನು ಹೋಲಿಸಬಹುದಾಗಿದೆ. ಎಚ್‌.ಟಿ. ರಾಜೇಂದ್ರ ಅವರು ಅಕಾಲಿಕ ಮರಣಹೊಂದಿದರು ಎಂಬ ಅಭಿಪ್ರಾಯ ಬಹುತೇಕರಲ್ಲಿದೆ. ವಯಸ್ಸು ಕೇವಲ ಸಂಖ್ಯೆ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ರಾಮಕೃಷ್ಣ ಪರಮಹಂಸರು, ನಾರಾಯಣ ಗುರುಗಳು, ಸ್ವಾಮಿ ವಿವೇಕಾನಂದರು, ರಮಣ ಮಹರ್ಷಿಗಳು ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಕಡಿಮೆ ವಯಸ್ಸಿನಲ್ಲಿ ಮರಣಹೊಂದಿದವರು ಎಂದರು.

ಜನತಾ ಪರಿವಾರದ ಪ್ರಮುಖರ ಸಂಪರ್ಕವಿದ್ದ ರಾಜೇಂದ್ರ ಅವರಿಗೆ ಶಾಸಕರಾಗಲು ಸಾಧ್ಯವಿತ್ತು. ನಾಯಕರು ತನ್ನಷ್ಟೇ ಸಾಮರ್ಥ್ಯ ಇರುವ ನಾಯಕರನ್ನು ಹುಟ್ಟು ಹಾಕುತ್ತಾರೋ ಅವರೇ ನಿಜವಾದ ನಾಯಕರು. ಚುನಾವಣೆಯಲ್ಲಿ ಗೆದ್ದು ಶಾಸಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆದ ಮಾತ್ರಕ್ಕೆ ನಾಯಕರಾಗಲು ಸಾಧ್ಯವಿಲ್ಲ. ಹಾಗಾಗುವುದಿದ್ದರೆ ಮಹಾತ್ಮ ಗಾಂಧಿ, ರಾಮಮನೋಹರ್ ಲೋಹಿಯಾ ಯಾರು ನಾಯಕರಾಗುತ್ತಿರಲಿಲ್ಲ. ರಾಜೇಂದ್ರ ಅವರು ಲೋಹಿ ಅವರ ಸಿದ್ಧಾಂತದಿಂದ ಆಕರ್ಷಿತರಾಗಿ, ಕುವೆಂಪು ಅವರ ಸಿದ್ಧಾಂತ ಮತ್ತು ಸಾಹಿತ್ಯವನ್ನು ಅಪ್ಪಿಕೊಂಡವರು. ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡರ ಚಿಂತನೆ ಅಳವಡಿಸಿಕೊಂಡಿದ್ದವರು. ಅವರು ಅಧಿಕಾರಕ್ಕಾಗಿ ಹಪಹಪಿಸದೆ ಒಂದೇ ದಾರಿ ಯಲ್ಲಿ ಹೋಗುವ ಪ್ರಯತ್ನ ಮಾಡಿದವರು. ವಿಧಾನ ಸಭೆಗೆ ಹೋಗದಿರುವುದು ಶೃಂಗೇರಿ ಕ್ಷೇತ್ರಕ್ಕೆ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಉಂಟಾದ ನಷ್ಟ ಎಂದರು.ಹೈಕೋರ್ಟ್ ಮುಖ್ಯ ನ್ಯಾ. ಎಚ್.ಟಿ.ನರೇಂದ್ರ ಪ್ರಸಾದ್ ಮಾತನಾಡಿ, ರಾಜೇಂದ್ರ ಅವರು ಕೇವಲ ಮನೆಯವರಿಗೆ ಅಣ್ಣ ನಾಗಿರದೆ ಎಲ್ಲರಿಗೂ ಅಣ್ಣನಾಗಿದ್ದರು. ನಮ್ಮ ತಂದೆ,ತಾಯಿ ಸಹ ಅವರನ್ನ ಅಣ್ಣ ಎಂದು ಕರೆಯುತ್ತಿದ್ದರು. ಕ್ಷೇತ್ರದ ಎಲ್ಲಾ ಜನಾಂಗದ ಮೇಲೆ ಪ್ರೀತಿ ತೋರಿಸಿದ್ದರು ಎಂದರು. ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಕ್ಷೇತ್ರದಾದ್ಯಂತ ನುಡಿನಮನ ನಡೆಯುತ್ತಿರುವುದು ರಾಜೇಂದ್ರ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ಹುಟ್ಟುವಾಗ ಉಸಿರಿರುತ್ತದೆ. ಸತ್ತಾಗ ಹೆಸರಿರುತ್ತದೆ. ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಎದುರು ಸೋತಾಗಲೂ ಅಭಿನಂದನಾ ಭಾಷಣ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದರು.ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರನ್ನು ಯಾವುದೇ ಪಕ್ಷ ಸಮುದಾಯ, ಸಂಸ್ಥೆಗೆ ಸಮೀತಗೊಳಿಸಬಾರದು.ರಾಜಕಾರಣದಲ್ಲಿ ಸಿಕ್ಕ ಅವಕಾಶ ಬಳಿಸಿಕೊಂಡು ನೊಂದವರ ಧ್ವನಿಯಾಗಿದ್ದರು ಎಂದರು.ನುಡಿನಮನ ಸಮಿತಿ ಅಧ್ಯಕ್ಷ ಪಿ.ಜೆ.ಅಂಟೋಣಿ ಮಾತನಾಡಿ, ರಾಜೇಂದ್ರ ಅವರು ಮತ್ತು ನನ್ನ ನಡುವೆ 25 ವರ್ಷಗಳ ಒಡನಾಟವಿದೆ. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣವಿತ್ತು. ಯುವ ನಾಯಕರನ್ನು ಬೆಳೆಸಿದ್ದಾರೆ. ಕುವೆಂಪು, ರಾಮ ಮನೋಹರ ಲೋಹಿಯ ಆದರ್ಶ ಮೈಗೂಡಿಸಿಕೊಂಡಿದ್ದರು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಮೀಪದ ವೃತ್ತಕ್ಕೆ ಮಡಬೂರು ಎಚ್.ಟಿ.ರಾಜೇಂದ್ರ ವೃತ್ತ ಎಂದು ನಾಮಕರಣ ಮಾಡಬೇಕೆಂದು ಒಕ್ಕಲಿಗರ ಸಂಘದಿಂದ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಅವರಿಗೆ ಮನವಿ ಸಲ್ಲಿಸಲಾಯಿತು.ರೋಮನ್ ಕ್ಯಾಥೋಲಿಕ್ ಚರ್ಚ್ ನ ಫಾದರ್ ಟಿನೋ,ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಎಸ್.ಎಸ್. ಶಾಂತಕುಮಾರ್, ಮಂಜು ಎನ್.ಗೌಡ,ಜಗದೀಶ್, ಎನ್.ಎಂ.ಕಾಂತರಾಜ್, ಆಬೀದ್, ಜೋಸ್, ಹರ್ಷ, ಪಿ.ಆರ್.ಸದಾಶಿವ, ಮನೋಹರ, ಜುಬೇದ ಹಾಗೂ ಪುಸ್ತಕದ ಲೇಖಕ ಪಿ.ಕೆ.ಬಸವರಾಜಪ್ಪ, ಕಣಿವೆ ವಿನಯ್, ಇದ್ದರು.