ಸಾರಾಂಶ
ಯಾದಗಿರಿ ಸಮೀಪದ ಎಂ. ಹೊಸಳ್ಳಿ ತಾಂಡದ ಸತೀಶ್ ಎಸ್. ಚವ್ಹಾಣ ಹೈದ್ರಾಬಾದನ ಪ್ರತಿಷ್ಠಿತ ಶಾಲೆಯಾದ ಸಿ.ಆರ್.ಪಿ.ಎಫ್ (ಸಿಬಿಎಸ್‌ಇ) ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕೇಂದ್ರ ಪುರಸ್ಕೃತ ಎನ್‌ಟಿಎ ಶ್ರೇಷ್ಠ ಯೋಜನೆಯಡಿ ಸಿಬಿಎಸ್‌ಇ ವಸತಿ ಶಾಲೆಯ(ಪರಿಶಿಷ್ಟ ಜಾತಿ) ಎನ್‌ಟಿಎ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 74ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದಿಂದ ಆಯ್ಕೆಯಾಗಿದ್ದಾನೆ. ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ದೊರಕಿಸಲು ಎನ್.ಟಿ.ಎ ಶ್ರೇಷ್ಠ ಯೋಜನೆಯ ಪ್ರವೇಶ ಪರೀಕ್ಷೆ ಆರಂಭಿಸಿದ್ದು ಈ ಯೋಜನೆಯಡಿ 9 ಮತ್ತು 11ನೇ ತರಗತಿಗೆ ಆಯ್ಕೆ ಮಾಡಲಾಗುತ್ತದೆ.
ಯಾದಗಿರಿ:
ಸಮೀಪದ ಎಂ. ಹೊಸಳ್ಳಿ ತಾಂಡದ ಸತೀಶ್ ಎಸ್. ಚವ್ಹಾಣ ಹೈದ್ರಾಬಾದನ ಪ್ರತಿಷ್ಠಿತ ಶಾಲೆಯಾದ ಸಿ.ಆರ್.ಪಿ.ಎಫ್ (ಸಿಬಿಎಸ್‌ಇ) ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕೇಂದ್ರ ಪುರಸ್ಕೃತ ಎನ್‌ಟಿಎ ಶ್ರೇಷ್ಠ ಯೋಜನೆಯಡಿ ಸಿಬಿಎಸ್‌ಇ ವಸತಿ ಶಾಲೆಯ(ಪರಿಶಿಷ್ಟ ಜಾತಿ) ಎನ್‌ಟಿಎ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 74ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದಿಂದ ಆಯ್ಕೆಯಾಗಿದ್ದಾನೆ. ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ದೊರಕಿಸಲು ಎನ್.ಟಿ.ಎ ಶ್ರೇಷ್ಠ ಯೋಜನೆಯ ಪ್ರವೇಶ ಪರೀಕ್ಷೆ ಆರಂಭಿಸಿದ್ದು ಈ ಯೋಜನೆಯಡಿ 9 ಮತ್ತು 11ನೇ ತರಗತಿಗೆ ಆಯ್ಕೆ ಮಾಡಲಾಗುತ್ತದೆ.ಈ ಹಿಂದೆಯೂ ಸಹ 2022-23ನೇ ಸಾಲಿನಲ್ಲಿ ನಡೆದ ಎನ್‌ಟಿಎ ಶ್ರೇಷ್ಠ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 167ನೇ ರ‍್ಯಾಂಕ್ ಮತ್ತು ರಾಜ್ಯಕ್ಕೆ 1ನೇ (ಪ್ರಥಮ) ಸ್ಥಾನ ಪಡೆದುಕೊಂಡು ಪಠ್ಯಕ್ರಮದ ಶಾಲೆಗೆ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದರು. ಈ ವಿದ್ಯಾರ್ಥಿ ಸಾಧನೆಗೆ ಶಾಲೆ ಆಡಳಿತ ಮಂಡಳಿ, ಪಾಲಕರಾದ ಶರಣಬಸಪ್ಪ ಎಂ.ಹೊಸಳ್ಳಿ, ಹೊಸಳ್ಳಿ ತಾಂಡಾದ ಗ್ರಾಮಸ್ಥರು ಸೇರಿ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.