ಸಾರಾಂಶ
- ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ । ಸೇಡಿನ ಪ್ರತಿಕ್ರಿಯೆ ಪ್ರಕರಣ
- - - ಕನ್ನಡಪ್ರಭ ವಾರ್ತೆ ದಾವಣಗೆರೆನಾಗಮಂಗಲ ಘಟನೆ ಹಿನ್ನೆಲೆಯಲ್ಲಿ ಸೆ.18ರಂದು ದಾವಣಗೆರೆ ಪಿ.ಬಿ. ರಸ್ತೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಉದ್ರೇಕದ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಭಾಷಣ ಮಾಡಿದ್ದ ಹಿಂದು ಜಾಗರಣಾ ವೇದಿಕೆ ಪ್ರಾಂತೀಯ ಸಂಚಾಲಕ ಸತೀಶ ಪೂಜಾರಿ ಹಾಗೂ ಅದಕ್ಕೆ ಪ್ರತಿಯಾಗಿ ಸೇಡಿನ ರೀತಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದ ಮುಸ್ಲಿಂ ಸಮುದಾಯದ ನೂರ್ ಅಹಮ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸತೀಶ ಪೂಜಾರಿ ಭಾಷಣ ಹಾಗೂ ನೂರ್ ಅಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ರೀತಿಯಿಂದ ಪ್ರಚೋದನೆಗೆ ಒಳಗಾದ ಎರಡು ಕೋಮಿನವರು ಸೆ.19ರಂದು ಸಂಜೆ ಅರಳಿಮರ ವೃತ್ತದಿಂದ ಸಾಗಿ ಬಂದ ಗಣೇಶ ವಿಸರ್ಜನಾ ಮೆರವಣಿಗೆ ಕೆ.ಆರ್. ರಸ್ತೆಯ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಜಗಳೂರು ಬಸ್ ನಿಲ್ದಾಣ ಬಳಿ ಚೌಕಿಪೇಟೆ ರಸ್ತೆಯ ಎನ್.ಆರ್. ರಸ್ತೆ ತಿರುವಿನಲ್ಲಿ ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಎರಡೂ ಕೋಮಿನ ಯುವಕರ ದುಷ್ಪ್ರೇರಣೆಯಿಂದ ಪರಸ್ಪರ ಕಲ್ಲು ತೂರಾಟ ಮಾಡಿ, ಸಾರ್ವಜನಿಕ ಆಸ್ತಿ ಹಾಗೂ ಅಂಗಡಿಗಳಿಗೆ ನಷ್ಚವನ್ನುಂಟು ಮಾಡಿದ್ದಾರೆ. ಅಲ್ಲದೇ, ಒಬ್ಬರಿಗೊಬ್ಬರು ಹಲ್ಲೆ, ಕೊಲೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.ಘಟನೆಗಳಿಗೆ ಸಂಬಂಧಿಸಿದಂತೆ ಬಸವ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 91/2024, ಕಲಂ 109, 115(2), 118, 189(2), 190, 191(2), 191(3), 299, 300, 324(4), 49, BNS 2023 ರೀತ್ಯಾ ಪ್ರಕರಣ ದಾಖಲಾಗಿದೆ. ಆರೋಪಿತರಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತೀಯ ಸಂಚಾಲಕ ಸತೀಶ ಪೂಜಾರಿ ಹಾಗೂ ನೂರ್ ಅಹಮ್ಮದ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
- - - (-ಸಾಂದರ್ಭಿಕ ಚಿತ್ರ)