ಸತೀಶಣ್ಣ ನೀ ಶಸ್ತ್ರತ್ಯಾಗ ಮಾಡಬೇಡ, ನೀವು ಸಿಎಂ ಆಗ್ಬೇಕು: ರಾಜೂಗೌಡ

| Published : Oct 19 2025, 01:03 AM IST

ಸತೀಶಣ್ಣ ನೀ ಶಸ್ತ್ರತ್ಯಾಗ ಮಾಡಬೇಡ, ನೀವು ಸಿಎಂ ಆಗ್ಬೇಕು: ರಾಜೂಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಮಧ್ಯೆಯೇ ಬಿಜೆಪಿ ಮಾಜಿ ಸಚಿವ ರಾಜೂ ಗೌಡ ನಾಯಕ, ಸತೀಶ್ ಅಣ್ಣ ನೀ ಶಸ್ತ್ರತ್ಯಾಗ ಮಾಡಬೇಡ. ಇದೇ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ವೇದಿಕೆಯಲ್ಲೇ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರಾದ ಜಡಗಣ್ಣ, ಬಾಲಣ್ಣಗೆ ಹೋಲಿಸಿದ ಘಟನೆ ಶುಕ್ರವಾರ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮುಧೋಳ ನಗರದಲ್ಲಿ ಶುಕ್ರವಾರ ನಡೆದ ವೀರ ಸೇನಾನಿಗಳಾದ ಜಡಗಣ್ಣ, ಬಾಲಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೂ ಗೌಡ, ನಮ್ಮ ಸಮಾಜಕ್ಕೆ ಸತೀಶಣ್ಣ (ಸತೀಶ್ ಜಾರಕಿಹೊಳಿ) ಜಡಗಣ್ಣ ಬಾಲಣ್ಣ ಇದ್ದಂತೆ. ಮಾತು ಕಡಿಮೆ ಆದರೆ ಪ್ಲಾನ್ ಹಾಕಿದ್ರೆ ಕರೆಕ್ಟ್ ಏಟು ಹಾಕ್ತಾನೆ ನಮ್ಮ ಸತೀಶಣ್ಣ. ವೀರ ಯೋಧ ಜಡಗಣ್ಣ ಬಾಲಣ್ಣ ಅವರು ಬ್ರಿಟೀಷರ ಎದುರು ಶಸ್ತ್ರತ್ಯಾಗ ಮಾಡಿರಲಿಲ್ಲ. ಈ ಬಾರಿ ನಾನು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ, ಮುಂದಿನ ಸಾರಿ ಅಂತಿದ್ದೀಯಾ. ಅದೆಲ್ಲ ಬೇಡ ಇದೇ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಆಗಿ. ನಿಮ್ಮನ್ನ ಮುಖ್ಯಮಂತ್ರಿ ಆಗಿ ನೋಡಬೇಕೆಂಬ ನಮ್ಮ ಆಸೆ ಇದೆ. ಮುಂದಿನ ಸಿಎಂ ಸತೀಶಣ್ಣನೇ ಆಗ್ಲೀ ಎಂದರು.ನಾವು ನಿಮ್ಮ ರಕ್ತವನ್ನೇ ಹಂಚಿಕೊಂಡು ಹುಟ್ಟೀವಿ, ನಾವೇನು ಹಗುರಿಲ್ಲ. ಸುರಪುರ ಬ್ಯಾಡ್ರು ಹಿಂದಿನ ದಿನದಲ್ಲಿ ಬ್ರಿಟೀಷರನ್ನೂ ಬಿಟ್ಟಿಲ್ಲ, ಔರಂಗಜೇಬನನ್ನೂ ಬಿಟ್ಟಿಲ್ಲ ಎಂದು ಹೇಳಿದರು.

2028ಕ್ಕೆ ಸಿಎಂ ಸ್ಥಾನದ ಬಗ್ಗೆ ಆಲೋಚನೆ ಇದೆ ಎಂಬ ಸತೀಶ್ ಮಾತಿಗೆ ಕೌಂಟರ್ ನೀಡಿದ ರಾಜೂಗೌಡ, 2028ರವರೆಗೆ ಕಾಯೋಕೆ ಆಗಲ್ಲ, ಇದೇ ನವೆಂಬರ್‌ನಲ್ಲಿ ಸಿಎಂ ಆಗು. ಶಸ್ತ್ರತ್ಯಾಗ ಮಾಡಬೇಡಿ, ಈಗಲೇ ನೀವು ಸಿಎಂ ಆದ್ರೆ ನಮ್ಮ ಆಸೆ ಈಡೇರುತ್ತೆ. 2028ಕ್ಕೆ (ಕಾಂಗ್ರೆಸ್) ನೀವು ಬರಲ್ಲ , ಮತ್ತೆ ನಾವು (ಬಿಜೆಪಿ) ಬರ್ತೇವೆ, ನಿಮಗೆ ಬಿಟ್ಟುಕೊಡಲ್ಲ. ಈಗ ಆದ್ರೆ ನಮ್ಮ ಆಸೆಯೂ ಈಡೇರುತ್ತೆ, ನಿಮ್ಮ ಆಸೆನೂ ಇಡೇರುತ್ತದೆ ಎಂದು ಹೇಳಿದರು.