ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರುಸುತ್ತೂರು ಜೆಎಸ್ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘದ ಈ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.ವಿದ್ಯಾರ್ಥಿ ಸಂಘವನ್ನು ಜೆಎಸ್ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ಸಹ ನಿರ್ದೇಶಕ ಎಂ. ಶಿವಮಾದಪ್ಪ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕ್ರೀಡೆ, ಯೋಗ, ಮಲ್ಲಕಂಬ, ಸಂಗೀತ, ಗಣಕಯಂತ್ರ ವಿಷಯಗಳಲ್ಲಿ ಪರಿಣಿತಿ ಹೊಂದಿ ಉನ್ನತ ಬೆಳವಣಿಗೆ ಹೊಂದಲು ಈ ಶಾಲೆಯಲ್ಲಿ ಸದಾವಕಾಶವಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಮುಖ್ಯಅತಿಥಿಗಳಾಗಿ ಮೈಸೂರಿನ ನಿವೃತ್ತ ಪ್ರಾಂಶುಪಾಲ ಕೆ.ಎಂ. ಮಹದೇವಪ್ಪ, ಇಂದಿನ ರಾಜಕೀಯದಲ್ಲಿ ವಿದ್ಯಾರ್ಥಿ ಸಂಘಗಳು ರಾಜಕೀಯ ಜೀವನವನ್ನು ರೂಪಿಸಲು ಅಡಿಗಲ್ಲಾಗಿವೆ. ವಿದ್ಯಾರ್ಥಿ ಸಂಘದಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಇಂತಹ ಸಂಸ್ಕಾರಯುಕ್ತ ಸಂಸ್ಥೆಯಿಂದ ಹೊರಹೊಮ್ಮುವ ವಿದ್ಯಾರ್ಥಿಗಳು ರಾಜಕಾರಣಿಗಳಾದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ರೀತಿಯ ಆಡಳಿತ ನೀಡಬಹುದು ಎಂದು ತಿಳಿಸಿದರು.ಯಾವ ವಿದ್ಯಾರ್ಥಿಯು ತನ್ನ ಸಾಮರ್ಥ್ಯದಿಂದ ಮುನ್ನಡೆಯುತ್ತಾನೋ ಅವನು ಪ್ರಗತಿ ಸಾಧಿಸುತ್ತಾನೆ. ವಿದ್ಯಾರ್ಥಿ ಸಂಘಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗುತ್ತವೆ. ಆಸಕ್ತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರತರಬೇಕೆಂದರು. ಯೋಗದ ಮಹತ್ವವನ್ನು ತಿಳಿಸಿ, ಪ್ರತಿ ದಿನ ಯೋಗಾಭ್ಯಾಸ ಮಾಡಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್ ವಹಿಸಿದ್ದರು.ಜೆಎಸ್ಎಸ್ ಸಂಸ್ಥೆಯ ಮುಖ್ಯಸ್ಥರಾದ ಜಿ.ಎಲ್. ತ್ರಿಪುರಾಂತಕ, ಸಂಪತ್ತು, ವೀರಭದ್ರಯ್ಯ, ಎಸ್. ಶಿವಸ್ವಾಮಿ, ಜಿ. ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ, ಮಹದೇವಪ್ರಸಾದ್, ಪಿ. ಸುಶೀಲ ಇದ್ದರು.ಶಾಲಾ ಮಕ್ಕಳು ಪ್ರಾರ್ಥಿಸಿದರು, ಬಿ. ವೇದಾವತಿ ಸ್ವಾಗತಿಸಿದರು. ಮಂಗಳ ಗೌರಮ್ಮ ವಂದಿಸಿದರು. ಎಚ್.ಬಿ. ಕೃಪಾ ನಿರೂಪಿಸಿದರು.