ಸಾರಾಂಶ
ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ಕಾರ್ಯಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮಂಡ್ಯದ ಆದಿಚುಂಚನಗಿರಿ ಆಸ್ಪತ್ರೆ, ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಹುಣಸೂರು, ಕಾವೇರಿ ಸಂಭ್ರಮ ಹಾಗೂ ಶನಿವಾರಸಂತೆ ಭಾರತಿ ಪ್ರೌಢ ಮತ್ತು ಪ.ಪೂ.ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶನಿವಾರ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು.ಶಿಬಿರವನ್ನು ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ಕಾರ್ಯಪ್ಪ ಉದ್ಘಾಟಿಸಿದರು.
ಈ ಸಂದರ್ಭ ಮಂಡ್ಯ ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕವಿತಾ ಮಾತನಾಡಿ, ಶಿಬಿರದಲ್ಲಿ ವಿವಿಧ ಕಾಯಿಲೆಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದಲ್ಲಿ ರೋಗಿಗಳು ಆದಿಚುಂಚನಗಿರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬಹುದು, ಸಂಸ್ಥೆಯಿಂದ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ರೋಗಿಗಳು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.ಶಿಬಿರದಲ್ಲಿ ವಿವಿಧ ಕಾಯಿಲೆಗಳಿಗೆ ಸಂಬಂಧ ಪಟ್ಟ ತಜ್ಞ ವೈದ್ಯರು ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಿ.ಕೆ.ಚಿಣ್ಣಪ್ಪ, ಲಯನ್ಸ್ ಕ್ಲಬ್ ಪ್ರಮುಖರಾದ ಎನ್.ಬಿ.ನಾಗಪ್ಪ, ನಾಗರಾಜ್, ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಅಪ್ಪಸ್ವಾಮಿ, ಪ್ರಮುಖರಾದ ಪುಟ್ಟಸ್ವಾಮಿ, ಮಲ್ಲೇಶ್ ಆದಿಚುಂಚನಗಿರಿ ಆಸ್ಪತ್ರೆಯ ನಿರ್ವಾಹಣೆ ಮುಖ್ಯಸ್ಥೆ ಭಾಗ್ಯ, ಡಾ.ಶ್ರುತಿ, ಡಾ.ಸತೀಶ್ ಭಾಗವಹಿಸಿದ್ದರು.