ಶಾಸಕರ ಭರವಸೆ ಮೇರೆಗೆ ಸತ್ಯಾಗ್ರಹ ಹಿಂದಕ್ಕೆ

| Published : Mar 27 2024, 01:02 AM IST

ಶಾಸಕರ ಭರವಸೆ ಮೇರೆಗೆ ಸತ್ಯಾಗ್ರಹ ಹಿಂದಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಎಂಬ ಶಾಸಕ ಅಶೋಕ ಮನಗೂಳಿ ಅವರ ಭರವಸೆ ಹಿನ್ನೆಲೆಯಲ್ಲಿ ಗಬಸಾವಳಗಿ ಗ್ರಾಮದ ಬಸ್ನಿಲ್ದಾಣ ಬಳಿ ಅವಳಿ ಗ್ರಾಮಸ್ಥರು ಮೂರು ದಿನಗಳಿಂದ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂದಗಿ

ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಎಂಬ ಶಾಸಕ ಅಶೋಕ ಮನಗೂಳಿ ಅವರ ಭರವಸೆ ಹಿನ್ನೆಲೆಯಲ್ಲಿ ಗಬಸಾವಳಗಿ ಗ್ರಾಮದ ಬಸ್‌ನಿಲ್ದಾಣ ಬಳಿ ಅವಳಿ ಗ್ರಾಮಸ್ಥರು ಮೂರು ದಿನಗಳಿಂದ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು.

ಮಂಗಳವಾರ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಸತ್ಯಾಗ್ರಹಿಸಿಗಳುನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ಇರಯವಾಗಲೇ ತಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದು ಸ್ಥಳಕ್ಕೆ ಆಗಮಿಸಿದ್ದೇನೆ. ನಾನು ಯಾವತ್ತೂ ಹೋರಾಟಗಾರರೊಂದಿ ಇದ್ದೇನೆ. ಪ್ರಸ್ತುತ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕಾರ್ಯವನ್ನು ಕೂಡಲೇ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಎರಡು ಗ್ರಾಮಗಳ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಆದ್ಯತೆ ಮೇರೆಗೆ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಬೇಡಿಕೆ ಈಡೇರದಿದ್ದರೆ ಮತದಾನ ಬಹಿಷ್ಕಾರಿಸುವುದಾಗಿ ಗ್ರಾಮಸ್ಥರು ಹೇಳುತ್ತಿದ್ದು, ಅಂಥ ನಿರ್ಧಾರಕ್ಕೆ ಮುಂದಾಗಬಾರದು. ಮತದಾನ ಅಮೂಲ್ಯ ಮತ್ತು ಪ್ರತಿಯೊಬ್ಬರ ಹಕ್ಕಾಗಿದೆ. ಅರ್ಹರೆಲ್ಲ ಮತದಾನ ಮಾಡಬೇಕು ಎಂದು ಶಾಸಕರು ವಿನಂತಿಸಿದರು.

ಸತ್ಯಾಗ್ರಹ ನಿರತರು ಮಾತನಾಡಿ, ಆಲಮೇಲ ತಾಲೂಕಿಗೆ ಸೇರಿಸಿದ ಎರಡೂ ಗ್ರಾಮಗಳನ್ನು ಸಿಂದಗಿಗೆ ಸೇರಿಸಬೇಕು ಎಂದು ಕೋರಿ ಈಗಾಗಲೇ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡ ನಡೆಸಲಾಗಿದೆ. ನಂತರ 14 ದಿನ ಅನಿರ್ದಿಷ್ಟಾವಧಿ ಧರಣಿ ಕೂಡ ನಡೆಸಲಾಗಿದೆ. ಆಗಲೂ ಅಧಿಕಾರಿಗಳು ಕ್ಯಾರೆ ಎನ್ನದಿದ್ದಾಗ ಪತ್ರಿಕಾಗೋಷ್ಠಿ ನಡೆಸಿ ಮಾ.23ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸದ್ಯ ಶಾಸಕರ ಭರವಸೆ ಮೇರೆಗೆ ಉಪವಾಸ ಕೈಬಿಡಲಾಗುವುದು. ಬಳಿಕ ಶಾಸಕರು ಎಳನೀರು ಕುಡಿಸಿದ ನಂತರ ಉಪವಾಸ ಅಂತ್ಯಗೊಳಿಸಲಾಯಿತು.

ಈ ವೇಳೆ ಮಾಜಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಹಾಗೂ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಹೋರಾಟ ಸಮಿತಿ ಪ್ರಭುಗೌಡ ಬಿರಾದರ ಸಾಹೇಬಗೌಡ ಬಿರಾದರ, ಬಂಗಾರೆಪ್ಪಗೌಡ ಬಿರಾದಾರ, ಬಾಬಾಗೌಡ ಬಿರಾದಾರ, ಶಾಂತಗೌಡ ಬಿರಾದರ, ಗಂಗಪ್ಪಗೌಡ ಬಿರಾದರ, ಶಿವಶರಣ ಹೇಳವರ, ಮಲ್ಲಯ್ಯ ಹಿರೇಮಠ, ಬಸನಗೌಡ ಬಿರಾದಾರ, ಬಾಬುರೆಡ್ಡಿ ಬಿರಾದಾರ ಇದ್ದರು.

ಚಪ್ಪಲಿ ತೊಡದಿರಲು ನಿರ್ಧಾರ:

ಉಪವಾಸ ಅಂತ್ಯಗೊಳಿಸಿದ ನಂತರ ಹೋರಾಟ ನಿರತ ಮುಖಂಡರಾದ ಬಂಗಾರೆಪ್ಪಗೌಡ ಬಿರಾದಾರ ಹಾಗೂ ಶಾಂತನಗೌಡ ಬಿರಾದಾರ ಬೇಡಿಕೆ ಈಡೇರುವವರೆಗೆ ಚಪ್ಪಲಿ ಧರಿಸದೇ ಬರಿಗಾಲಿನಲ್ಲೇ ಓಡಾಡುವುದಾಗಿ ಶಪಥ ಮಾಡಿದರು.