34 ದಲಿತ ಕುಟುಂಬದ ಜಮೀನಿನ ಪಹಣಿ ರದ್ದು ವಿರೋಧಿಸಿ ಸೆ.10ಕ್ಕೆ ಸತ್ಯಾಗ್ರಹ

| Published : Sep 10 2024, 01:32 AM IST

34 ದಲಿತ ಕುಟುಂಬದ ಜಮೀನಿನ ಪಹಣಿ ರದ್ದು ವಿರೋಧಿಸಿ ಸೆ.10ಕ್ಕೆ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಯಡೆಹಳ್ಳಿ ಸರ್ವೆ ನಂ.66 ರಲ್ಲಿ 34 ಕುಟುಂಬದವರಿಗೆ ತಲಾ ಎರಡು ಎಕರೆಯಂತೆ ಮಂಜೂರಾದ ಜಮೀನಿನ ಪಹಣಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಮಾಜಿ ಸಿಎಂ ಬಂಗಾರಪ್ಪನವರ ಸಮಾಧಿ ಸ್ಥಳದ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿ.ಎನ್.ರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿಯ ಯಡೆಹಳ್ಳಿ ಸರ್ವೆ ನಂ.66 ರಲ್ಲಿ 34 ಕುಟುಂಬದವರಿಗೆ ತಲಾ ಎರಡು ಎಕರೆಯಂತೆ ಮಂಜೂರಾದ ಜಮೀನಿನ ಪಹಣಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಸೊರಬ ತಾಲ್ಲೂಕಿನ ಬಂಗಾರಪ್ಪನವರ ಸಮಾಧಿ ಸ್ಥಳದ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡೆಹಳ್ಳಿಯ ರೈತರ ಜಮೀನಿನ ಪಹಣಿಯನ್ನು ರದ್ದುಮಾಡಿರುವುದನ್ನು ವಿರೋಧಿಸಿ ಈಗಾಗಲೇ ಹಲವು ಬಾರಿ ಹೋರಾಟ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ನೀಡಲಾಗಿದೆ. ಆದರೆ ಅವರು ನಮ್ಮ ಸಮಸ್ಯೆಯನ್ನು ಪರಿಗಣಿಸಿಲ್ಲ ಎಂದು ದೂರಿದರು.

ಅ.26 ರಂದು ಎಲ್ಲಾ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಮುಖ್ಯಮಂತ್ರಿಯಾಗಿದ್ದ ದಿ.ಎಸ್.ಬಂಗಾರಪ್ಪನವರ ಜನ್ಮದಿನಾಚರಣೆಯನ್ನು ಆಚರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿಯ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತಿ.ನಾ.ಶ್ರೀನಿವಾಸ್ ಈ ಸಂದರ್ಭದಲ್ಲಿ ತಿಳಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಂ.ಬಿ.ಕೃಷ್ಣಪ್ಪ, ವೀರೇಶ್, ಸಂಗಮ್ಮ, ಲಲಿತಮ್ಮ, ಸುವರ್ಣಮ್ಮ ಮತ್ತಿತರರು ಇದ್ದರು.ಬಂಗಾರಪ್ಪ ಸಮಾಧಿ ಬಳಿ ಹೋರಾಟಕಾಗೂಡು ತಿಮ್ಮಪ್ಪನವರು ನಮ್ಮ ಹೋರಾಟವನ್ನು ಬೆಂಬಲಿಸಿ ರೈತರ ಜಮೀನಿಗೆ ಪಹಣಿ ರದ್ದು ಮಾಡಬೇಡಿ ಎಂದು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೂ ಕೂಡ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಆದ್ದರಿಂದ ಸೆ.10ರಂದು ಸಾಗರದಲ್ಲಿ ರುವ ಕಾಗೋಡು ತಿಮ್ಮಪ್ಪನವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ರೈತರ ಸಮಸ್ಯೆಯನ್ನು ಅವರ ಗಮನಕ್ಕೆ ತರುತ್ತೇವೆ. ನಂತರ ಸೊರಬ ತಾಲ್ಲೂಕಿಗೆ ತೆರಳಿ ಬಂಗಾರಪ್ಪನವರ ಸಮಾಧಿ ಸ್ಥಳದಲ್ಲಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಬಿ.ಎನ್.ರಾಜು ಹೇಳಿದರು.