ಪಾರಣೆಯಲ್ಲಿ ಸತ್ಯನಾರಾಯಣ ಪೂಜೆ ಸಂಪನ್ನ

| Published : Oct 19 2025, 01:02 AM IST

ಸಾರಾಂಶ

ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಪಾರಾಣೆ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವಿರಾಜಪೇಟೆ ತಾಲೂಕು ಮೂರ್ನಾಡು ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಾರಣೆ ಎ.ಬಿ. ಕಾರ್ಯಕ್ಷೇತ್ರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇಲ್ಲಿಗೆ ಸಮೀಪದ ಪಾರಣೆ ಜಿ ಎಂ ಪಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಮಾಜಿ ಸೈನಿಕರು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ.ಎಂ. ಸುಬ್ರಮಣಿ ಅವರು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯೋಜನೆ ಕಾರ್ಯಕ್ರಮಗಳು ಜನರ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಯಿಂದ ಕೂಡಿರುತ್ತದೆ. ಅಂತೆಯೇ ಹಿಂದಿನ ಕಾಲದಲ್ಲಿ ಊರಿನ ಜನರುಗಳನ್ನು ಒಗ್ಗೂಡಿಸಲು ಈ ಪೂಜಾ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದು, ಈಗಿನ ಕಾಲದಲ್ಲಿ ಈ ರೀತಿ ಪೂಜೆಗಳು ಕಂಡುಬರುವುದು ಅಪರೂಪವಾಗಿದೆ. ಈ ರೀತಿಯ ಪೂಜೆಗಳು ಮಾಡುವುದು ನಮ್ಮ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ತಿಳಿಸಿದರು.

ವಿರಾಜಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹರೀಶ್.ಪಿ. ಮಾತನಾಡಿ, ಯೋಜನೆಯಲ್ಲಿ ಹತ್ತು ಹಲವು ಜನಮಂಗಳ ಹಾಗೂ ಸಮಾಜಮುಖ ಕಾರ್ಯಗಳು ನಡೆಸಿದ್ದು ಇವುಗಳಲ್ಲಿ ಜ್ಞಾನದೀಪ ಶಿಕ್ಷಕರ ಆಯ್ಕೆ, ಮಾಸಾಶನ, ಸುಜ್ಞಾನಿಧಿ ವೇತನ, ದೇವಸ್ಥಾನದ, ಹಿಂದು ರುದ್ರ ಭೂಮಿ ಜೀರ್ಣೋದ್ಧಾರ, ಊರಿನ ಕೆರೆಗಳ ಪುನ:ಶ್ಚೇತನಕ್ಕೂ ಬೇಕಾಗುವ ಅನುದಾನವನ್ನು ಕ್ಷೇತ್ರದ ವತಿಯಿಂದ ತಿಳಿಸಿದರು ಹಾಗೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ತಪ್ಪು ಮಾಹಿತಿಗಳು ಕಿವಿ ಕೊಡಬೇಡಿ ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮಾ ಪ್ರಭು ಮಾತನಾಡಿ, ಸತ್ಯನಾರಾಯಣ ಪೂಜೆ ನಮ್ಮ ಸನಾತನ ಸಂಸ್ಕೃತಿಯಾಗಿದ್ದು ಎಲ್ಲ ಸದಸ್ಯರು ಹಾಗೂ ಊರಿನ ಜನರು ಈ ಪೂಜೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ಪಾರಣೆ ಪಂಚಾಯತ್ ಅಧ್ಯಕ್ಷರಾದ ಕಟ್ಟಿ ಕುಶಾಲಪ್ಪ ಅವರು ಮಾತನಾಡಿ ಯೋಜನೆ ವತಿಯಿಂದ ಆಯೋಜಿಸಿದ್ದ ಪೂಜಾ ಕಾರ್ಯಕ್ರಮವು ಜನಗಳ ಒಗ್ಗೂಡುವಿಕೆಗೆ ಒಂದು ಮಾರ್ಗವಾಗಿದ್ದು ಯೋಜನೆ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಪೂಜಾ ಸಮಿತಿ ಅಧ್ಯಕ್ಷ ಬಿ.ಎಸ್. ಮೋಹನ್ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವೇದಪ್ರಸಾದ್, ಮಂಜು ಮಾಚಯ್ಯ, ಕಾದಿರ ನಿಶಾ ಪಳಂಗಪ್ಪ, ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ, ಬಲ್ಯಟಂಡ ಕೌಶಿ, ವಲಯದ ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಕೃಷಿ ಮೇಲ್ವಿಚಾರಕರಾದ ವಸಂತ, ವಲಯದ ಸೇವ ಪ್ರತಿನಿಧಿಗಳು, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.