ಸತ್ಯನಾರಾಯಣಸ್ವಾಮಿ ಅದ್ಧೂರಿ ರಥೋತ್ಸವ

| Published : May 01 2024, 01:16 AM IST

ಸಾರಾಂಶ

ರಥೋತ್ಸವದ ಅಂಗವಾಗಿ ಮಲ್ಲ ಎಣ್ಣೆ ಕಂಬ ಹತ್ತುವ ಸ್ಪರ್ಧೆ ನಡೆದಿದ್ದು, ಸುತ್ತಮುತ್ತಲ ಹಲವಾರು ಗ್ರಾಮಗಳ ಯುವಕರು ಪಾಲ್ಗೊಂಡಿದ್ದರು. ಇದಾದ ನಂತರ ರಾತ್ರಿ ಬೆಂಗಳೂರಿನ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ತಂಡದಿಂದ ಜಾನಪದ ನೃತ್ಯ ವೈಭವ ಮೂಡಿಬಂತು

ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಬಳಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀದೇವಿ ಭೂದೇವಿ ಸಮೇತ ಶ್ರೀ ಸತ್ಯನಾರಾಯಣ ಸ್ವಾಮಿಯ ೩ನೇ ವರ್ಷದ ಬ್ರಹ್ಮ ರಥೋತ್ಸವ ಅತ್ಯಂತ ವೈಭವದಿಂದ ನಡೆದಿದ್ದು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿದರು.ಶ್ರೀದೇವಿ ಭೂದೇವಿ ಸಮೇತ ಶ್ರೀ ಸತ್ಯನಾರಾಯಣ ಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ನಡೆದ ಈ ರಥೋತ್ಸವದಲ್ಲಿ ಬಿಸಿಲಿನ ಬೇಗೆಯ ನಡುವೆಯೂ ಸಾವಿರಾರು ಮಂದಿ ಶ್ರದ್ದಾಭಕ್ತಿಗಳಿಂದ ಪಾಲ್ಗೊಂಡು ರಥ ಸಾಗುತ್ತಿದ್ದಂತೆ ಹೂ, ಹಣ್ಣು ಎಸೆದು ತಮ್ಮ ಹರಕೆ ತೀರಿಸಿದರು.ಮಲ್ಲ ಎಣ್ಣೆ ಕಂಬ ಹತ್ತುವ ಸ್ಪರ್ಧೆ

ರಥೋತ್ಸವದ ಅಂಗವಾಗಿ ಮಲ್ಲ ಎಣ್ಣೆ ಕಂಬ ಹತ್ತುವ ಸ್ಪರ್ಧೆ ನಡೆದಿದ್ದು, ಸುತ್ತಮುತ್ತಲ ಹಲವಾರು ಗ್ರಾಮಗಳ ಯುವಕರು ಪಾಲ್ಗೊಂಡಿದ್ದರು. ಇದಾದ ನಂತರ ರಾತ್ರಿ ಬೆಂಗಳೂರಿನ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ತಂಡದಿಂದ ಜಾನಪದ ನೃತ್ಯ ವೈಭವ ಮೂಡಿಬಂತು.ಸಂಜೆ ಸತ್ಯನಾರಾಯಣಸ್ವಾಮಿ ಹಾಗೂ ವೀರಾಂಜನೇಯ ಸ್ವಾಮಿಗೆ ದೀಪೋತ್ಸವ ವೈಭವದಿಂದ ನಡೆಯಿತು. ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶೆಟ್ಟಿವಾರಹಳ್ಳಿ ಎಸ್.ಎನ್.ರೆಡ್ಡಪ್ಪ ನೇತೃತ್ವದಲ್ಲಿ ಕೈವಾರ ತಾತಯ್ಯನವರ ತತ್ವಪದ ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಇಡೀ ಕಾರ್ಯಕ್ರಮದ ಉಸ್ತುವಾರಿ ಸತ್ಯನಾರಾಯಣ ಸ್ವಾಮಿ ಸೇವಾ ಟ್ರಸ್ಟ್‌ನ ವ್ಯವಸ್ಥಾಪಕ ನಾರಾಯಣಗೌಡ, ಟ್ರಸ್ಟ್ ಸದಸ್ಯರಾದ ನಂದೀಶ್ ಬಾಬು, ಗಂಗೋಲಪ್ಪ, ಗ್ರಾ.ಪಂ ಸದಸ್ಯ ವೆಂಕಟೇಶ್ ಗೌಡ, ಸುಧಾರಾಣಿ, ಆನಂದ ರೆಡ್ಡಿ, ಶಂಕರೇ ಗೌಡ, ಬಿ.ವೆಂಕಟೇಶಪ್ಪ, ನರಸಿಂಹ ನಾಯ್ಕ್, ಲಕ್ಷ್ಮೇಗೌಡ ಇದ್ದರು.ಇಂದು ಪೌರಾಣಿಕ ನಾಟಕ

ಮೇ ೧ರಂದು ಸಂಜೆ ಪಾರ್ವಟೋತ್ಸವ ನಡೆಯಲಿದ್ದು, ರಾತ್ರಿ ೯ ಗಂಟೆಗೆ ರಾಜಸೂಯಾಗ ಅಥವಾ ಜರಾಸಂದನ ವಧೆ ಕನ್ನಡ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.