ಅಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೌಭಾಗ್ಯ ಲೋಕೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೌಭಾಗ್ಯ ಲೋಕೇಶ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್ ಅವಿರೋಧ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷೆ ಸೌಭಾಗ್ಯ ಲೋಕೇಶ್ ಮಾತನಾಡಿ ಅಕ್ಕನಹಳ್ಳಿ ವೃತ್ತದ ಸಂತೆ ನಡೆಯುವ ಜಾಗದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಸಮಸ್ಯೆಗಳಿರುವ ಕಡೆ ಸೋಲಾರ್ ದೀಪಗಳನ್ನು ಹಾಕಿಸುವ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿಯ ಅಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೌಭಾಗ್ಯ ಲೋಕೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಮೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು ಸೌಭಾಗ್ಯ ಲೋಕೇಶ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗಿರೀಶ್ ಅವಿರೋಧ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷೆ ಸೌಭಾಗ್ಯ ಲೋಕೇಶ್ ಮಾತನಾಡಿ ಅಕ್ಕನಹಳ್ಳಿ ವೃತ್ತದ ಸಂತೆ ನಡೆಯುವ ಜಾಗದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಸಮಸ್ಯೆಗಳಿರುವ ಕಡೆ ಸೋಲಾರ್ ದೀಪಗಳನ್ನು ಹಾಕಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಡಿಒ ನಂಜುಂಡೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ಸೋಸಲಗೆರೆ ನವೀನ್ ಕುಮಾರ್, ಎ. ಆರ್. ಪುಟ್ಟರಾಜು, ಶಾಂತಮ್ಮ ಲಕ್ಷ್ಮಣಗೌಡ, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಧು, ವಿಕ್ಟರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರತ್ನ ತಿಮ್ಮ ಶೆಟ್ಟಿ, ಸದಸ್ಯರಾದ ಎಸ್. ಎಂ. ರಾಜಕುಮಾರ, ಎಂ. ಬಿ. ದಿನೇಶ್, ಶಶಿಕಲಾ, ಜೆಸಿಂತಾ ಮೇರಿ, ಗ್ಯಾಂಗಿ ಸರೋಜಾ ಶಾಂತಪ್ಪ, ರಾಜಮ್ಮ, ಮುಖಂಡರುಗಳಾದ ತೋಟಿ ನಾಗರಾಜ್, ಎಂ. ಎನ್. ಸುರೇಶ್, ಗುಂಡಣ್ಣ, ಮಾದಲಗೆರೆ ದಿಲೀಪ್, ಇಂದ್ರಜಿತ್, ವೆಂಕಟೇಶ್, ಕವನ ಗಿರೀಶ್, ನಯನ ರಾಜೇಶ್, ಬಸವನಪುರ ಸ್ವಾಮಿ, ಡೈರಿ ನಾಗರಾಜ್, ಚಿಕ್ಕೋನಹಳ್ಳಿ ರಂಗಣ್ಣ, ಇತರರು ಹಾಜರಿದ್ದರು.======
ಫೋಟೋಅಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸೌಭಾಗ್ಯ ಲೋಕೇಶ್ ಅವರನ್ನು ಸದಸ್ಯರು, ಮುಖಂಡರು ಅಭಿನಂದಿಸಿದರು. ನವೀನ್ ಕುಮಾರ್, ಪುಟ್ಟರಾಜು, ದಿಲೀಪ್, ಮಧು, ಗುಂಡಣ್ಣ, ಗಿರೀಶ್, ರಾಜೇಶ್, ನಂಜುಂಡೇಗೌಡ, ಶಾಂತಮ್ಮ ಶಾಂತಮ್ಮ, ಕವನ, ನಯನ, ಇದ್ದರು.