ಕನ್ನಡಪ್ರಭ ವಾರ್ತೆ ಸವದತ್ತಿ ಐತಿಹಾಸಿಕವಾದ ಗ್ರಾಮದೇವಿಯ ಜಾತ್ರೆಯು ೪೫ ವರ್ಷಗಳ ನಂತರ ಸವದತ್ತಿಯಲ್ಲಿ ನಡೆಯುತ್ತಿದ್ದು, ಏಕತೆಯಿಂದ ಜಾತ್ರೆ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿಐತಿಹಾಸಿಕವಾದ ಗ್ರಾಮದೇವಿಯ ಜಾತ್ರೆಯು ೪೫ ವರ್ಷಗಳ ನಂತರ ಸವದತ್ತಿಯಲ್ಲಿ ನಡೆಯುತ್ತಿದ್ದು, ಏಕತೆಯಿಂದ ಜಾತ್ರೆ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.

ಪಟ್ಟಣದ ಗ್ರಾಮದೇವಿಯ ಕಾಡಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಧಾರ್ಮಿಕ ಮತ್ತು ಸಾರ್ವಜನಿಕ ಸಭೆಯ ಎಂಟನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ೧೯೧೨ರಲ್ಲಿ ನಡೆದ ಜಾತ್ರೆಯು ೭೦ ವರ್ಷಗಳ ನಂತರ ೧೯೮೧ರಲ್ಲಿ ಲಿಂ.ಸಿ.ಎಮ್.ಮಾಮನಿ ಅವರ ನೇತೃತ್ವದಲ್ಲಿ ನಡೆದಿದ್ದು, ಈಗ ೪೫ ವರ್ಷಗಳ ನಂತರ ಸರ್ವರೂ ಒಗ್ಗೂಡಿ ಆಚರಿಸುತ್ತಿರುವುದು ಸಮಾಜದಲ್ಲಿ ಸಮಾನತೆಯನ್ನು ತೋರುತ್ತಿದೆ. ಈ ದೊಡ್ಡ ಪರಂಪರೆಯನ್ನು ಮುಂದುವರೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು, ಇತಿಹಾಸದುದ್ದಕ್ಕೂ ಇಂತಹ ಧಾರ್ಮಿಕ ಕಾರ್ಯಗಳು ಅಜರಾಮರವಾಗಿ ಉಳಿಯಲಿವೆ ಎಂದು ಅಭಿಪ್ರಾಯಪಟ್ಟರು.ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ನಮ್ಮ ಮೂಲ ಸಂಸ್ಕೃತಿಯ ಅರಿವು ಯುವಕರಲ್ಲಿ ಮೂಡಬೇಕಿದ್ದು, ಗೋಪೂಜೆಯಂತ ಶ್ರೇಷ್ಠ ಕಾರ್ಯದಲ್ಲಿ ನಾವು ಪಾಲ್ಗೊಳ್ಳಬೇಕು. ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಮ್ಮ ಧರ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಿದೆ. ಸವದತ್ತಿಯಲ್ಲಿ ನಡೆಯುತ್ತಿರುವ ಈ ಜಾತ್ರೆ ಮಾದರಿಯಾಗಿದ್ದು, ಎಲ್ಲರೂ ಒಗ್ಗೂಡಿ ಜಾತ್ರೆ ನಡೆಸುತ್ತಿರುವುದು ಸರ್ವರಲ್ಲಿ ಸಂತಸವನ್ನು ಮೂಡಿಸಿದೆ ಎಂದರು.ವಿ.ಪ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಸವದತ್ತಿಯ ಗ್ರಾಮದೇವಿಯ ಜಾತ್ರೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಾಗಿದೆ. ಶ್ರೀದೇವಿಯ ಕೃಪೆಯಿಂದ ಪ್ರತಿಯೊಬ್ಬರಲ್ಲಿ ಧರ್ಮ ರಕ್ಷಣೆಯ ಕಾರ್ಯಗಳು ನಡೆಯುತ್ತಿವೆ. ಧಾರ್ಮಿಕ ಆಚರಣೆಯೊಂದಿಗೆ ಸರ್ವರಿಗೂ ಅತ್ಯುತ್ತಮ ಊಟದ ವ್ಯವಸ್ಥೆ ಮಾಡುವ ಜೊತೆಗೆ ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಠಿಯಾಗಿದೆ ಎಂದು ಶ್ಲಾಘಿಸಿದರು.ಉಪ್ಪಿನಬೆಟಗೇರಿಯ ಕುಮಾರ ವಿರುಪಾಕ್ಷ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಗ್ರಾಮದೇವಿಯ ಜಾತ್ರೆಯ ಉದ್ದೇಶವೇ ದೇವಿಯ ಮಹಾತ್ಮೆಯನ್ನು ಮನದಟ್ಟು ಮಾಡಿಕೊಳ್ಳುವುದಾಗಿದೆ. ಎಲ್ಲ ದೇವಿಯರು ಮಾತೃ ಸ್ವರೂಪವಾಗಿದ್ದಾರೆ. ಸವದತ್ತಿಯು ಎರಡು ಶಕ್ತಿ ದೇವಿಯ ಕೇಂದ್ರವಾಗಿದ್ದು, ಸವದತ್ತಿ ಯಲ್ಲಮ್ಮಾ ಮತ್ತು ಶಿರಸಂಗಿ ಕಾಳಮ್ಮ ದೇವಸ್ಥಾನಗಳು ಶಕ್ತಿ ಕೇಂದ್ರಗಳಾಗಿ ಹೊರ ಹೊಮ್ಮಿವೆ ಎಂದರು.ಹೊಸಮಠದ ಶಾಂತವೀರ ಮಹಾಸ್ವಾಮೀಜಿ, ಕಲ್ಮಠ ಬಿದರಿಯ ಬಸವಲಿಂಗ ದೇವರು, ಚುಳಕಿಯ ಚಿದಾನಂದ ಸ್ವಾಮೀಜಿ, ಕಗದಾಳದ ವೀರಭದ್ರ ಶಾಸ್ತ್ರಿಗಳು, ನರೇಂದ್ರದ ಸಂಗಮೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಿಶ್ವಾಸ ವೈದ್ಯ ವೇದಿಕೆಯ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ಮುರಗೋಡ, ಗಣ್ಯರಾದ ಚಂದ್ರಶೇಖರ ಬಟಕುರ್ಕಿ, ಸುಳ್ಳದ ಸಹೋದರರು, ದೇವಿಗೆ ಮೂಗುತಿ ಮಾಡಿಸಿದ ಗಿರಿಜಮ್ಮ ಅಡಿವೆಪ್ಪ ಬೀಳಗಿ, ಮಂಜುನಾಥ ಪಾಚಂಗಿ, ಜಾತ್ರಾ ಉತ್ಸವದಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆ ಮಾಡಿದ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸಿ.ಎಸ್.ಮಲಕನ್ನವರ, ಕಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ವಾಡಕರ, ನೋಡಲ್ ಅಭಿಯಂತರ ಶಿವಾಜಿ ಕುದರಿ, ಮೇಲ್ವಿಚಾರಕ ಮಹಾಬಳೇಶ್ವರ ಕಡಕೋಳ ಅವರನ್ನು ಸನ್ಮಾನಿಸಲಾಯಿತು.ಡಾ.ವೈ.ಎಮ್.ಯಾಕೊಳ್ಳಿ ಸ್ವಾಗತಿಸಿದರು. ಶಿವಾನಂದ ತಾರಿಹಾಳ ಮತ್ತು ಎಂ.ಪಿ.ಪಾಟೀಲ ನಿರೂಪಿಸಿದರು. ಹುಸೇನ ನದಾಫ ವಂದಿಸಿದರು