ಸಾರಾಂಶ
ನಮ್ಮ ಪೂರ್ವಜರು ಉಳಿಸಿ ಹೋಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸದತ್ತ ಗಮನ ಹರಿಸಬೇಕಿದೆ.
ಹೂವಿನಹಡಗಲಿ: ಆಧುನಿಕ ಜಗತ್ತಿನಲ್ಲಿ ಯುವ ಜನತೆ ಗ್ರಾಮೀಣ ಭಾಗದ ಜಾನಪದ ಕಲೆಗಳಿಂದ ದೂರ ಉಳಿದು, ಇಡೀ ದೈನಂದಿನಲ್ಲಿ ಮೊಬೈಲ್ ಬಳಕೆಯಲ್ಲೇ ಕಾಲ ಕಳೆಯುತ್ತಾರೆ. ನಮ್ಮ ಪೂರ್ವಜರು ಉಳಿಸಿ ಹೋಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸದತ್ತ ಗಮನ ಹರಿಸಬೇಕಿದೆ ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಪಪೂ ಕಾಲೇಜಿನ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ವಿಜಯನಗರ ಚಂದ್ರಶೇಖರ ಕಲಾಬಳಗ ಅಂಗೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಡಿ ಆಯೋಜಿಸಿದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಗ್ರಾಮೀಣ ಭಾಗದ ಜನತೆ ಇಂದಿಗೂ ತಮ್ಮ ಮನೋರಂಜನೆಗಾಗಿ ಹಬ್ಬ ಹರಿದಿನಗಳಲ್ಲಿ ನಾಟಕ, ಬಯಲಾಟ, ಸಣ್ಣಾಟ, ದೊಡ್ಡಾಟ, ತೊಗಲುಗೊಂಬೆ, ಸುಗ್ಗಿ ಕುಣಿತ, ಜನಪದ ಸಂಗೀತ, ಹಂತಿಪದ ಸೇರಿದಂತೆ ಮುಂತಾದ ಜಾನಪದ ಕಲೆಗಳು ಪ್ರದರ್ಶನಗೊಳಿಸಿ, ಸಂತೋಷ ಪಡುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆ ಮೊಬೈಲ್ ಬಂದ ಮೇಲೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯಂತಹ ಜನಪದ ಕಲೆಗಳನ್ನು ಮರೆಯುತ್ತಿದ್ದಾರೆ ಎಂದರು.
ಕಾಲೇಜು ಉಪ ಪ್ರಾಚಾರ್ಯ ಬಿ.ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲೆಗಳ ಕುರಿತು ಶಿಕ್ಷಕ ರಾಮಪ್ಪ ಕೋಟಿಹಾಳ ಉಪನ್ಯಾಸ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಕೊಟೇಶ, ಹಿರಿಯ ಕಲಾವಿದ ಬೀರಬ್ಬಿ ಬಸವರಾಜ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷೆ ಬೆನ್ನೂರು ಹಾಲೇಶಪ್ಪ ಜನಪದ ಕಲಾವಿದ ಕೆ.ಸಿ. ಪರಶುರಾಮ ಅಂಗೂರು ಉಪಸ್ಥಿತರಿದ್ದರು.ನಂತರದಲ್ಲಿ ರಂಗಗೀತೆಗಳನ್ನು ಎಚ್.ಆಂಜಿನಪ್ಪ ಮತ್ತು ತಂಡ, ಜಾನಪದ ಗೀತೆಗಳು ಟಿ.ರಾಮಪ್ಪ ಮತ್ತು ತಂಡ ನಡೆಸಿಕೊಟ್ಟರು.
ಮೌಲಾಸಾಬ ಪ್ರಾರ್ಥಿಸಿದರು. ಶಿಕ್ಷಕ ಗಡ್ಡಿ ಶಿವಕುಮಾರ ಸ್ವಾಗತಿಸಿದರು. ಶಿಕ್ಷಕ ಸುಂಕದ ಬಸವರಾಜ ನಿರೂಪಿಸಿದರು.