ತರೀಕೆರೆ ಬಟ್ಟೆ ಕೈಚೀಲಗಳನ್ನು ಹೆಚ್ಚಾಗಿ ಬಳಸುವ ಮೂಲಕ ಪ್ರಾಕೃತಿಕ ಪರಿಸರ ಹಾಳಾಗದ ಹಾಗೆ ಕಾಪಾಡಬೇಕು ಎಂದು ಶ್ರೀ ಅಮೃತೇಶ್ವರ ಪ್ರೌಢಶಾಲೆ ಶಿಕ್ಷಕ ಖಿಜರ್‌ಖಾನ್ ಹೇಳಿದ್ದಾರೆ.
ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳು ಬಗ್ಗೆ ಕಾರ್ಯಕ್ರಮ
ಕನ್ನಡ ಪ್ರಭ ವಾರ್ತೆ, ತರೀಕೆರೆಬಟ್ಟೆ ಕೈಚೀಲಗಳನ್ನು ಹೆಚ್ಚಾಗಿ ಬಳಸುವ ಮೂಲಕ ಪ್ರಾಕೃತಿಕ ಪರಿಸರ ಹಾಳಾಗದ ಹಾಗೆ ಕಾಪಾಡಬೇಕು ಎಂದು ಶ್ರೀ ಅಮೃತೇಶ್ವರ ಪ್ರೌಢಶಾಲೆ ಶಿಕ್ಷಕ ಖಿಜರ್‌ಖಾನ್ ಹೇಳಿದ್ದಾರೆ.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲಾ ಮಕ್ಕಳಿಗೆ ಇಕೋಕ್ಲಬ್ ನಿಂದ ಪ್ಲಾಸ್ಟಿಕ್‌ನಿಂದಾಗುವ ದುಷ್ಟರಿಣಾಮಗಳ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಪ್ಲಾಸ್ಟಿಕ್‌ನಿಂದ ಜಲಚರ ಜೀವಿಗಳ ಜೀವಕ್ಕೆ ಕುತ್ತು ಆಗುತ್ತಿದೆ. ಪ್ಲಾಸ್ಟಿಕ್ ದುಷ್ಪರಿಣಾಮಗಳ ಅರಿವನ್ನು ಸರ್ವರಲ್ಲೂ ಮೂಡಿಸಬೇಕು ಎಂದು ಹೇಳಿದರು.
ಶಿಕ್ಷಕ ರಮಾಕಾಂತ್ .ಜೆ. ಮಾತನಾಡಿ ನಮ್ಮ ಪೂರ್ವಜರು ಪ್ಲಾಸ್ಟಿಕ್ ಇಲ್ಲದ ಕಾಲದಲ್ಲೂ ಉತ್ತಮ ಜೀವನ ನಡೆಸಿ, ಪ್ರಾಕೃತಿಕ ಸೌಂದರ್ಯ ಹಾಳಾಗದ ಹಾಗೆ ಕಾಪಾಡಿದ್ದರು ಎಂದು ತಿಳಿಸಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆ ಸುಂದರ ಪರಿಸರ ಹಾಳಾಗದ ಹಾಗೆ ಕಾಪಾಡಬೇಕು. ಅಂಗಡಿಗಳಿಂದ ಮತ್ತು ಸಂತೆಯಿಂದ ತರಕಾರಿ ಇತ್ಯಾದಿ ವಸ್ತುಗಳನ್ನು ತರಲು ಕೈಚೀಲ ಬಳಸಬೇಕು. ಪ್ಲಾಸ್ಟಿಕ್ ಭೂಮಿಯಲ್ಲಿ ಕರಗದೆ ನೂರಾರು ವರ್ಷಗಳ ಕಾಲ ಹಾಗೇ ಇರುತ್ತವೆ. ಹಾಗಾಗಿ ಪ್ರಕೃತಿಗೆ ಮಾರಕವಾಗಿರುವ ಇಂತಹ ಪ್ಲಾಸ್ಟಿಕ್‌ಗಳನ್ನು ಬಳಸಬಾರದು ಎಂದರು.ಶಿಕ್ಷಕರಾದ ಸವಿತಮ್ಮ, ಸತೀಶ್ ನಂದಿಹಳ್ಳಿ, ಮಂಜುಳ ಮಲ್ಲಿಗವಾಡ ಮತ್ತು ದೈಹಿಕ ಶಿಕ್ಷಕ ಪಂಚಾಕ್ಷರಪ್ಪ ಮಾತನಾಡಿದರು. ರೇಖಾ ಭಾಗವಹಿಸಿದ್ದರು.26ಕೆಟಿಆರ್.ಕೆ.2ಃ
ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಇಕೋ ಕ್ಲಬ್ ನಿಂದ ನಡೆದ ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ., ಶಿಕ್ಷಕ ಖಿಜರ್ ಖಾನ್ ಮತ್ತಿತರರು ಭಾಗಹಿಸಿದ್ದರು.