ಸಾರಾಂಶ
ಇಂದಿನ ಯುವಕರು ಲಿಂಗಧಾರಣೆ ಮಾಡಿಕೊಳ್ಳುವ ಮೂಲಕ ವೀರಶೈವ ಸಮಾಜವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಚಕ್ರಬಾವಿ ಮರಳು ಸಿದ್ದೇಶ್ವರ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಮಾಗಡಿ : ಇಂದಿನ ಯುವಕರು ಲಿಂಗಧಾರಣೆ ಮಾಡಿಕೊಳ್ಳುವ ಮೂಲಕ ವೀರಶೈವ ಸಮಾಜವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಚಕ್ರಬಾವಿ ಮರಳು ಸಿದ್ದೇಶ್ವರ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಲ್ಲುದೇವನಹಳ್ಳಿ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರೇಶ್ವರ ಧಾರ್ಮಿಕ ದತ್ತಿ ಜೆಎಸ್ಎಸ್ ಮಹ ವಿದ್ಯಾಪೀಠ ಮೈಸೂರು ವತಿಯಿಂದ ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಪ್ರಯುಕ್ತ 60 ವಟುಗಳಿಗೆ ಲಿಂಗ ದೀಕ್ಷೆ ಹಾಗೂ ಧರ್ಮಪ್ರಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.ವೀರಶೈವ ಸಮಾಜವನ್ನು ಉಳಿಸಿ ಬೆಳೆಸಿಕೊಳ್ಳುವ ಕೆಲಸವನ್ನು ಇಂದಿನ ಯುವಕರು ಮಾಡಬೇಕಾಗಿದ್ದು, ನಮ್ಮ ಧರ್ಮ ಶ್ರೇಷ್ಠವಾದ ಧರ್ಮವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಲಿಂಗಧಾರಣೆ ಮಾಡಿಕೊಳ್ಳಬೇಕು. ಧರ್ಮ ಆಚರಣೆಯನ್ನು ಪ್ರತಿಯೊಬ್ಬರು ಅನುಸರಿಸಬೇಕು. ವಿದ್ಯೆ ಮೂಲಕ ಸಂಸ್ಕಾರವನ್ನು ಬೆಳೆಸಿಕೊಳ್ಳುವ ಕೆಲಸ ಆಗಬೇಕು ಎಂದರು.
ಗುರು-ಹಿರಿಯರು, ತಂದೆ- ತಾಯಿಗಳಿಗೆ ಗೌರವಿಸುವ ಕೆಲಸ ಮಾಡಬೇಕು. ಎಲ್ಲಾ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಶಿವರಾತೇಶ್ವರ ಧಾರ್ಮಿಕ ದತ್ತಿ ಸ್ಥಾಪನೆ ಮಾಡುವ ಮೂಲಕ ಸಾವಿರಾರು ವಟ್ಟುಗಳಿಗೆ ಲಿಂಗ ದೀಕ್ಷೆ ಮಾಡುತ್ತಿರುವುದು ಪುಣ್ಯದ ಕೆಲಸವಾಗಿದೆ ಎಂದು ತಿಳಿಸಿದರು.ಇದೇ ವೇಳೆ ಕೆಂಪನಹಳ್ಳಿ ಹಾಗೂ ಕಲ್ಲುದೇವನಹಳ್ಳಿ ಗ್ರಾಮದ ಅರವತ್ತಕ್ಕೂ ಹೆಚ್ಚು ವಟುಗಳಿಗೆ ಲಿಂಗ ದೀಕ್ಷೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸುರಳ್ಳಿ ಮಠದ ಶ್ರೀಗಳು ಸುತ್ತೂರು ಮಠದ ಪಂಚಾಕ್ಷರಿ ಸೇರಿದಂತೆ ಗ್ರಾಮದ ಭಕ್ತರು ಭಾಗವಹಿಸಿದ್ದರು.