ಸಾರಾಂಶ
ಶಿರಾ: ತಾಲೂಕು ರಂಗನಾಥಪುರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಪ್ರಸ್ತುತ 10 ನೇ ತರಗತಿಯಲ್ಲಿ ಓದುತ್ತಿರುವ ಆರ್ ಸಿ. ಗೌಡ.ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿ ಅಸಾಧಾರಣ ಸಾದನೆ ಮಾಡಿದ್ದಾರೆ.ಶಿರಾ ತಾಲೂಕು ರಾಗಲಹಳ್ಳಿ. ಚಂದ್ರಪ್ಪ ಮತ್ತು ಅನಿತಮ್ಮ ಎಂಬ ಕೃಷಿಕ ಕುಟುಂಬದ ಆರ್.ಸಿ. ಗೌಡ ಕಳೆದ ವರ್ಷ ಜನವರಿ 29 ರಂದು ಶಿರಾ ತಾಲೂಕು ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾನೆ.ಗ್ರಾಮದ ತಾಯಿಯೊಬ್ಬಳು ಬಟ್ಟೆ ತೊಳೆಯಲು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹೋಗಿದದರು. ಆಗ 16 ವರ್ಷದ ಹೆಣ್ಣು ಮಗಳೊಬ್ಬಳು ನೀರಿಗೆ ಜಾರಿ ಬಿದ್ದಳು. ಆಕೆಯನ್ನು ಎಳೆಯಲು ಹೋಗಿ ಆಕೆ ಅಕ್ಕ ನೀರಿಗಿಳಿದಳು. ಇಬ್ಬರಿಗೂ ಈಜು ಬರುತ್ತಿರಲಿಲ್ಲ.ಆಗ ಯಾರಾದರೂ ಸಹಾಯಕ್ಕೆ ಬರುತ್ತಾರೆಂದು ತಾಯಿ ಕೆರೆ ಪಕ್ಕದ ರಸ್ತೆಗೆ ಓಡಿ ಬಂದಿದ್ದಾಳೆ. ಆಗ ಬರಗೂರಿಗೆ ಹೋಗುತ್ತಿದ್ದ ಬಸ್ ಈಕೆ ಕೂಗನ್ನು ಕೇಳಿ ನಿಲ್ಲಿಸಿತು. ತನ್ನಿಬ್ಬರು ಮಕ್ಕಳು ನೀರಿನಲ್ಲಿ ಮುಳುಗುತ್ತಿದ್ದಾರೆಂದು ಹೇಳಿದ್ದಾಳೆ. ಕೂಡಲೇ ಬಸ್ಸಿನಲ್ಲಿದ್ದ ಆರ್ ಸಿ. ಗೌಡ ಓಡೋಡಿ ಬಂದು ನೀರಿಗೆ ದುಮುಕಿ ಒಬ್ಬಾಕೆಯನ್ನು ಎಳೆದು ತಂದಿದ್ದಾನೆ. ಮತ್ತೊಬ್ಬಾಕೆಯನ್ನು ಹರಸಾಹಸ ಪಟ್ಟು ದಡಕ್ಕೆ ತಂದಿದ್ದಾನೆ. ಅಷ್ಟರಲ್ಲಾಗಲೇ ಹೆಚ್ಚು ನೀರು ಕುಡಿದು ನಿತ್ರಾಣಳಾಗಿದ್ದಾಳು. ಆಕೆಯ ಬಾಯಿಂದ ನೀರನ್ನು ಹೊರ ತೆಗೆದುಕ ಅದೇ ಬಸ್ಸಿನಲ್ಲಿ ಬರಗೂರಿಗೆ ಕರಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೀಗಾಗಿ ಇಬ್ಬರು ಮಕ್ಕಳು ಬದುಕುಳಿಯುವಂತಾಯಿತು.