ಅಸ್ಪೃಶ್ಯತೆ, ಬಾಲ್ಯವಿವಾಹ, ಸತಿಸಹಗಮನ, ಕೇಶ ಮುಂಡನದಂಥ ಅನಿಷ್ಟ ಆಚರಣೆಗಳ ವಿರುದ್ಧ ಹೋರಾಟವನ್ನು ಮಾಡಿದರು. ಮಹಿಳಾ ಸಬಲೀಕರಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರವಾದುದು.

ಗದಗ: ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೊಂದೆ ಪರಿಹಾರ ಎಂಬುದನ್ನು ಅರಿತು ಜ್ಯೋತಿಬಾ ಫುಲೆ ಅವರ ಸಹಕಾರದೊಂದಿಗೆ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಮತ್ತು ಕೆಳವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಅವರು ಮುನ್ನುಡಿ ಬರೆದರು ಎಂದು ಎಂಜಿಆರ್‌ಡಿಪಿಆರ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಚೈತ್ರಾ ತಿಳಿಸಿದರು.ನಗರದ ತೋಂಟದ ಸಿದ್ಧಲಿಂಗ ಶ್ರೀ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೈಲಾರಪ್ಪ ಮೆಣಸಗಿ ಸ್ಮರಣಾರ್ಥ ಜರುಗಿದ ಕುಮಾರವ್ಯಾಸ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಸ್ಪೃಶ್ಯತೆ, ಬಾಲ್ಯವಿವಾಹ, ಸತಿಸಹಗಮನ, ಕೇಶ ಮುಂಡನದಂಥ ಅನಿಷ್ಟ ಆಚರಣೆಗಳ ವಿರುದ್ಧ ಹೋರಾಟವನ್ನು ಮಾಡಿದರು. ಮಹಿಳಾ ಸಬಲೀಕರಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರವಾದುದು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶ್ರೇಣಿಕೃತ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರಿಗೆ ಮತ್ತು ನಿಮ್ನ ವರ್ಗದವರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಶೋಷಣೆಯಿಂದ ಜನ ನಲುಗುತ್ತಿದ್ದ ಸಂದರ್ಭದಲ್ಲಿ ಶಿಕ್ಷಣವನ್ನು ಮಂತ್ರದಂಡವಾಗಿಸಿಕೊಂಡು ಸಮಾನ ಸಮಾಜ ನಿರ್ಮಾಣಕ್ಕೆ ಫುಲೆ ದಂಪತಿಗಳು ಪ್ರಯತ್ನಿಸಿದರು. ಶಾಲೆ ಮತ್ತು ಆಶ್ರಮಗಳನ್ನು ಸ್ಥಾಪಿಸಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದರು ಎಂದರು.ಕಾರ್ಯದರ್ಶಿ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಶ್ರಮ ಸಂಸ್ಕೃತಿಯ ಮೂಲಕ ಪ್ರಕಾಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿ ಕಾನೂನು ಹಾಗೂ ಶೈಕ್ಷಣಿಕ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದ ಕೀರ್ತಿ ವಿದ್ಯಾನಿಧಿ ಪ್ರಕಾಶನದ ಮೈಲಾರಪ್ಪ ಮೆಣಸಗಿ ಅವರಿಗೆ ಸಲ್ಲುತ್ತದೆ ಎಂದರು.ದತ್ತಿದಾನಿ ಜಯದೇವ ಮೆಣಸಗಿ ಮಾತನಾಡಿದರು. ಕುಮಾರವ್ಯಾಸ ಜಯಂತಿ ಅಂಗವಾಗಿ ಹೆಸರಾಂತ ಗಮಕಿಗಳಾದ ವಾಸುದೇವಾಚಾರ್ಯ ಹೂಲಿ ಹಾಗೂ ಐಶ್ವರ್ಯ ಹೂಲಿ ಅವರಿಂದ ಕುಮಾರವ್ಯಾಸ ಭಾರತದ ಪ್ರಸಂಗಗಳ ವಾಚನ ಮತ್ತು ವ್ಯಾಖ್ಯಾನ ಜರುಗಿತು. ಮಂಜುಳಾ ವೆಂಕಟೇಶಯ್ಯ ಅವರು ಸಾವಿತ್ರಿಬಾಯಿ ಫುಲೆ ಕುರಿತು ಕವನ ವಾಚಿಸಿದರು. ನಿವೃತ್ತ ಪ್ರಾಚಾರ್ಯ ವಿ.ಎಸ್. ದಲಾಲಿ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಸಿ.ಕೆ.ಎಚ್. ಶಾಸ್ತ್ರಿ, ಅರ್ಜುನ ಗೊಳಸಂಗಿ, ದೇವೇಂದ್ರ ನಾಯಕ, ಬಿ.ಬಿ. ಹೊಳಗುಂದಿ, ಜೆ.ಎ. ಪಾಟೀಲ, ಎ.ಎಂ. ಅಂಗಡಿ, ರತ್ನಕ್ಕ ಪಾಟೀಲ, ಸಿ.ಎಂ. ಮಾರನಬಸರಿ, ಜಿ.ಎ. ಪಾಟೀಲ, ಕೆ.ಎಸ್. ಪಲ್ಲೇದ, ಬಸವರಾಜ ನೆಲಜೇರಿ, ಉಮಾ ಕಣವಿ, ನೀಲಮ್ಮ ಅಂಗಡಿ, ರಾಜಶೇಖರ ಕರಡಿ, ಎಂ.ಎಫ್. ಡೋಣಿ, ಎಸ್.ಎಂ. ಗುಳಗುಳಿ, ಎಸ್.ಡಿ. ಗಾಂಜಿ, ಅಶೋಕ ಸತ್ಯರಡ್ಡಿ, ರಾಹುಲ ಗಿಡ್ನಂದಿ, ಎಂ.ಎಚ್. ಕಾಮನಹಳ್ಳಿ, ಸಂತೋಷಕುಮಾರ, ಎಸ್.ಎಂ. ಗುಳಗುಳಿ, ಡಿ.ಜಿ. ಕುಲಕರ್ಣಿ, ಬಸವರಾಜ ಗಣಪ್ಪನವರ, ರವೀಂದ್ರ ಜೋಶಿ, ಶ್ರೀಕಾಂತ ಹೂಲಿ, ಶರಣಪ್ಪ ಹೊಸಂಗಡಿ, ರಾಜಶೇಖರ ದಾನರಡ್ಡಿ, ಎಂ.ಎಂ. ಕಾಗದಗಾರ, ಬಿ.ಬಿ. ಪಾಟೀಲ, ರವಿ ದೇವರಡ್ಡಿ, ಗೋವಿಂದಜಿ, ಸುರೇಶ, ಜಾನ್ ಥಾಮಸ್, ಗಿರೀಶ ಪಂತರ, ಎ.ಸಿ. ಹಿರೇಮಠ, ಅಪ್ಪಣ್ಣ ಮುರಗೋಡ, ಸಿದ್ಧರಾಮ ಪಟ್ಟೇದ, ವಿ.ಕೆ. ದ್ಯಾಮನಗೌಡರ, ಆನಂದ ಹಡಪದ, ಜಗನ್ನಾಥ, ಕೆ.ಎಸ್. ಬಾಳಿಕಾಯಿ, ರತ್ನಾ ಪುರಂತರ, ಪದ್ಮಾ ಮೆಣಸಗಿ ಸೇರಿದಂತೆ ಮೊದಲಾದವರು ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಅಮರೇಶ ರಾಂಪೂರ ವಂದಿಸಿದರು.