ಸಾವಿತ್ರಿಬಾಯಿ ಫುಲೆ ಆದರ್ಶಗಳು ಶಿಕ್ಷಕರಿಗೆ ದಾರಿದೀಪ-ರಾಜಶ್ರೀ

| Published : Feb 01 2025, 12:02 AM IST

ಸಾವಿತ್ರಿಬಾಯಿ ಫುಲೆ ಆದರ್ಶಗಳು ಶಿಕ್ಷಕರಿಗೆ ದಾರಿದೀಪ-ರಾಜಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸದಾ ನೊಂದವರ ಪರವಾಗಿ, ದನಿಯನ್ನು ಎತ್ತಿ ಸಮಾಜದ ಸ್ವಾಸ್ಥ್ಯ ಕಾಪಾಡಿದ ಸಾವಿತ್ರಿಬಾಯಿ ಎಲ್ಲ ಕಾಲಕ್ಕೂ ಮಾದರಿಯ ಹೋರಾಟಗಾರ್ತಿ. ಅವರ ಆದರ್ಶಗಳು ಶಿಕ್ಷಕರಿಗೆ ದಾರಿದೀಪವಾಗಿವೆ ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷೆ ರಾಜಶ್ರೀ ಅಶೋಕ ಸಜ್ಜೇಶ್ವರ ಹೇಳಿದರು.

ಹಾವೇರಿ: ಸದಾ ನೊಂದವರ ಪರವಾಗಿ, ದನಿಯನ್ನು ಎತ್ತಿ ಸಮಾಜದ ಸ್ವಾಸ್ಥ್ಯ ಕಾಪಾಡಿದ ಸಾವಿತ್ರಿಬಾಯಿ ಎಲ್ಲ ಕಾಲಕ್ಕೂ ಮಾದರಿಯ ಹೋರಾಟಗಾರ್ತಿ. ಅವರ ಆದರ್ಶಗಳು ಶಿಕ್ಷಕರಿಗೆ ದಾರಿದೀಪವಾಗಿವೆ ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷೆ ರಾಜಶ್ರೀ ಅಶೋಕ ಸಜ್ಜೇಶ್ವರ ಹೇಳಿದರು.

ನಗರದ ಇಜಾರಿಲಕ್ಮಾಪುರದ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೊಂದು ವಿಶೇಷ ರೂಪದ ಜನ್ಮ ದಿನಾಚರಣೆಯಾಗಿದ್ದು, ಅಂಗವೈಕಲ್ಯದಿಂದ ಬಳಲುವ ಮಕ್ಕಳಿಗೆ ಸಾಂತ್ವನ ಹೇಳಿದ್ದು ಸಂಘಕ್ಕೆ ಗೌರವ ತಂದಿದೆ ಎಂದರು.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಹಾವೇರಿ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ನೋಟ್‌ಬುಕ್ ಮತ್ತು ಪೆನ್ನುಗಳನ್ನೂ ಪದಾಧಿಕಾರಿಗಳು ನೀಡಿದರು.

ಬುದ್ಧಿಮಾಂದ್ಯ ಸಂಸ್ಥೆಯ ಪ್ರಧಾನ ಶಿಕ್ಷಕ ಬಸವಂತಪ್ಪ ಕಾಳಣ್ಣನವರ, ಸಾಹಿತಿ ಸತೀಶ ಕುಲಕರ್ಣಿ, ಕಲಾ ಬಳಗದ ಪೃಥ್ವಿರಾಜ ಬೆಟಗೇರಿ, ರಾಜೇಂದ್ರ ಹೆಗಡೆ ಇದ್ದರು.

ಸಮಾರಂಭದಲ್ಲಿ ಜಿಲ್ಲೆಯ ಬೇರೆ ಬೇರೆ ಭಾಗದಿಂದ ಆಗಮಿಸಿದ್ದ ಸಾವಿತ್ರಿಬಾಯಿ ಫುಲೆ ಘಟಕದ ಶಿಕ್ಷಕಿಯರಾದ ಜಿಲ್ಲಾ ಸಹ ಕಾರ್ಯದರ್ಶಿ ಎ.ಎಸ್. ಪಾಟೀಲ, ಪಾರ್ವತಿ ಪಾಟೀಲ, ಪದ್ಮಾವತಿ ಕಲ್ಲೂ, ಎ.ಟಿ ನೀರಲಗಿ, ಶಿಗ್ಗಾವಿಯ ಕೆ.ಕೆ. ಪತ್ತಾರ, ವಿಜಯಲಕ್ಷ್ಮೀ ಬಡಿಗೇರ, ರೂಪಾಂಜಲಿ ಓಣಿಮಠ, ಎ. ಮೀರಾಬಾಯಿ, ಎಸ್.ವಿ. ಸೂರಗೊಂಡ, ಆರ್.ಎಸ್. ಸುಂಕದ, ವಿ.ಜಿ. ಹಿರೇಮಠ, ಅನಸೂಯಾ ಬಳ್ಳಾರಿ, ಶಶಿಕಲಾ ಅತ್ತಿಕಟ್ಟಿ, ಆರ್.ಎಸ್. ಬಣಕಾರ, ಚಂದ್ರಕಲಾ ನಂದಣ್ಣನವರ, ಯಶೋದಾ ಮಾರೇರ, ರೇಣುಕಾ ಬಿಸೆನಾಯಕರ್, ಮಂಜುಳಾ ಕುಲಕರ್ಣಿ, ಅನ್ನಪೂರ್ಣಾ ಚವ್ಹಾಣ, ಮಂಜುಳಾ ನಾಮದೇವ, ನಿರ್ಮಲಾ ಮತ್ತೂರ, ರಾಜೇಶ್ವರಿ ಬಿಲ್ಲಹಳ್ಳಿ, ಸಾವಿತ್ರಿ ಹಂಜಗಿ ಹಾಗೂ ಜಿಲ್ಲೆಯ ಶಿಕ್ಷಕಿಯರು ಪಾಲ್ಗೊಂಡಿದ್ದರು.

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷೆ ಅಕ್ಕಮಹಾದೇವಿ ಸ್ವಾಗತಿಸಿದರು. ಬಸಯ್ಯ ಹುಚ್ಚಯ್ಯನವರಮಠ ಪ್ರಾಸ್ತಾವಿಕ ಮಾತನಾಡಿದರು. ಭುವನೇಶ್ವರಿ ಮತ್ತಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಕ್ಕಮ್ಮ ಪಾಟೀಲ ವಂದಿಸಿದರು.