ಸಾವುಕನಹಳ್ಳಿ: 4 ಚೆಕ್‌ ಡ್ಯಾಂ ನಿರ್ಮಾಣಕ್ಕೆ ಚಾಲನೆ

| Published : Oct 08 2023, 12:00 AM IST

ಸಾರಾಂಶ

ದೇವನಹಳ್ಳಿ: ತಾಲೂಕಿನ ಸಾವುಕನಹಳ್ಳಿ ಬಳಿ 2.70 ಕೋಟಿ ವೆಚ್ಚದ ನಾಲ್ಕು ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಎಚ್‌. ಮುನಿಯಪ್ಪ ಚಾಲನೆ ನೀಡಿದರು.
-ಚೆಕ್‌ ಡ್ಯಾಂಗಳ ನಿರ್ಮಾಣದಿಂದ ಅಂತರ್ಜಲ ಹೆಚ್ಚಳ: ಸಚಿವ ಕೆ.ಎಚ್‌.ಮುನಿಯಪ್ಪ ದೇವನಹಳ್ಳಿ: ತಾಲೂಕಿನ ಸಾವುಕನಹಳ್ಳಿ ಬಳಿ 2.70 ಕೋಟಿ ವೆಚ್ಚದ ನಾಲ್ಕು ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ. ಎಚ್‌. ಮುನಿಯಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಟಲ್‌ ಭೂಜಲ ಯೋಜನೆಯಡಿ ತಾಲೂಕಿನ ಸಾವುಕನಹಳ್ಳಿ , ಹುರುಳುಗುರ್ಕಿ, ದಂಡಿಗಾನಹಳ್ಳಿ ಮತ್ತು ತೈಲಗೆರೆ ಗ್ರಾಮಗಳಲ್ಲಿನ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಚೆಕ್‌ಡ್ಯಾಂಗಳಲ್ಲಿ ಮಳೆ ನೀರು ಸಂಗ್ರಹವಾದರೆ ಅಂತರ್ಜಲ ಹೆಚ್ಚಾಗಿ ಪ್ರಾಣಿ ಪಕ್ಷಿಗಳಿಗೆ ಅಲ್ಲದೆ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಯೋಜನೆಗೆ ಪೂರಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಕೆರೆಗಳಲ್ಲಿ ಹಂತಹಂತವಾಗಿ ಹೂಳೆತ್ತಿ ಮಳೆ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುವುದು. ಅಂತರ್ಜಲ ವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಕ ಎಂಜಿನಿಯರ್‌ ಮಂಜುನಾಥ್‌, ಸಹಾಯಕ ಎಂಜಿನಿಯರ್‌ ವಿಕಾಸ್‌ ಹಾಗು ಬಿದಲೂರು ಗ್ರಾಪಂ ಅಧ್ಯಕ್ಷ ಎಸ್‌.ಪಿ.ಮುನಿರಾಜು ಹಾಗು ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ. ರಾಮಚಂದ್ರಪ್ಪ, ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ ಉಪಸ್ಥಿತರಿದ್ದರು. (ಫೋಟೋ ಕ್ಯಾಪ್ಷನ್‌) ದೇವನಹಳ್ಳಿ ತಾಲೂಕಿನ ಸಾವುಕನಹಳ್ಳಿ ಬಳಿ 4 ಚೆಕ್‌ ಡ್ಯಾಂಗಳ ನಿರ್ಕಾಣ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಚಾಲನೆ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಕ ಎಂಜಿನಿಯರ್‌ ಮಂಜುನಾಥ್‌, ಸಹಾಯಕ ಎಂಜಿನಿಯರ್‌ ವಿಕಾಸ್‌ ಇತರರಿದ್ದರು.