ಸಾರಾಂಶ
ಹೋರಾಟಗಾರನೊಬ್ಬನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಡಿಎಸ್‌ಎಸ್ (ನಾಗವಾರ ಬಣ) ರಾಜ್ಯ ಸಂಘಟನೆ ಸಂಚಾಲಕ ಶ್ಯಾಮರಾವ್ ಘಾಟಗೆ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಹೋರಾಟಗಾರನೊಬ್ಬನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ರಾಜ್ಯ ಸಂಘಟನಾ ಸಂಚಾಲಕ ಶ್ಯಾಮರಾವ್ ಘಾಟಗೆ ಅಭಿಪ್ರಾಯಪಟ್ಟರು.ನಗರದ ಬಸವಭವನದಲ್ಲಿ ಶನಿವಾರ ಏರ್ಪಡಿಸಿದ್ದ ದಿ.ಉದಯ ಕಡಕೋಳ ಅವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.. ಇದು ರಾಜಕೀಯ ಕಾರ್ಯಕ್ರಮವಲ್ಲ, ಒಬ್ಬ ಅವಿರತ ಹೋರಾಟಗಾರನಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಾಗಿದೆ. ಸಣ್ಣ ವಯಸ್ಸಿನ ಹೋರಾಟಗಾರ ಉದಯ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಸಂಘಟನೆ ಬೆಂಬಲವಾಗಿ ನಿಲ್ಲುತ್ತದೆ ಎಂದರು. ರಾಜ್ಯ ಸಮಿತಿಯಿಂದ ₹ 50 ಸಾವಿರ, ವರ್ಧಮಾನ ನ್ಯಾಮಗೌಡ ₹ 25 ಸಾವಿರ, ತೊಫಿಕ್ ಪಾರ್ಥನಳ್ಳಿ ₹ 25 ಸಾವಿರ, ರಾಜು ಮನ್ನಿಕೇರಿ ₹ 50 ಸಾವಿರ ಹೀಗೆ ಅನೇಕರು ಸಹಾಯ ಸಹಕಾರ ನೀಡಿದ್ದಾರೆ ಎಂದರು.ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ, ಸಂಘಟನಾ ಸಂಚಾಲಕ ಕೆಂಪಣ್ಣ ಸಾಗ್ಯ, ರಾಜು ಮೇಲಿನಕೇರಿ, ಹಿರಿಯ ಸಂಪಾದಕ ಅನಿಲ ಹೊಸಮನಿ, ಸಲ್ಮಾನ್ ಪಾರ್ಥನಳ್ಳಿ, ವೆಂಕಟೇಶಮೂರ್ತಿ ಮುಂತಾದವರು ನುಡಿನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ ಮಾತನಾಡಿ, ದಿ.ಉದಯ 8 ವರ್ಷಗಳ ಕಾಲ ಕಾಂಗ್ರೆಸ್‌ನ ಎಸ್.ಸಿ., ಎಸ್‌ಟಿ ಮೋರ್ಚಾ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದನ್ನು ಸ್ಮರಿಸಿಕೊಂಡರು. ರಾಜ್ಯ ಸಂಘಟನಾ ಸಂಚಾಲಕ ಎಫ್. ವೈ. ದೊಡ್ಡಮನಿ, ಈಶ್ವರ ವಾಳೆಣ್ಣವರ, ಕಿರಣ ಪಿಸಾಳೆ, ದಾನೇಶ ಘಾಟಗೆ, ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಲಿನಮನಿ, ಚಂದ್ರು ಚಕ್ರವರ್ತಿ, ರವುತ ತಳಕೇರಿ, ದೇವೇಂದ್ರ ಹಾದಿಮನಿ, ಮಹೇಶ ಕೋಳಿ, ಮುತ್ತಣ್ಣ ಮೇತ್ರಿ, ಆನಂದ ಬೆಳ್ಳಾರೆ, ಚೆನ್ನು ಕಟ್ಟಿಮನಿ, ರಮೇಶ ಸಣ್ಣಕ್ಕಿ ಇತರರು ವೇದಿಕೆಯಲ್ಲಿದ್ದರು.