ಕಾಯಕ ಯೋಗಿ ಬಸವಣ್ಣನವರ ವಚನಗಳು ಜಗತ್ತಿಗೆ ದಾರಿದೀಪ: ಸಿ.ಎಂ.ಕ್ರಾಂತಿಸಿಂಹ

| Published : May 10 2024, 11:48 PM IST

ಕಾಯಕ ಯೋಗಿ ಬಸವಣ್ಣನವರ ವಚನಗಳು ಜಗತ್ತಿಗೆ ದಾರಿದೀಪ: ಸಿ.ಎಂ.ಕ್ರಾಂತಿಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿ ಶಿಕ್ಷಣದ ಕೊರತೆ ಇದ್ದ ಕಾಲದಲ್ಲಿ ಸಾಮಾಜಿಕ, ಮಾನವೀಯ ಮೌಲ್ಯಗಳ ಪಾಠ ಮಾಡಿದ ಬಸವಣ್ಣನವರು ವಚನಗಳ ಮೂಲಕ ಸರ್ವರನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಆದರೆ, ಇಂದಿನ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳದೆ ಆರೋಗ್ಯಕರ, ಸಮಾನತೆ ಸಮಾಜಕ್ಕೆ ಮುಂದಾಗಿದ್ದಾರೆ. ಬಸವಣ್ಣನವರು ರಚಿಸಿದ ವಚನಗಳು ಆಧುನಿಕ ಜಗತ್ತಿಗೆ ಮಾದರಿಯಾಗಿ ದಾರಿದೀಪವಾಗಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಬಸವಣ್ಣನವರು ರಚಿಸಿದ ವಚನಗಳು ಆಧುನಿಕ ಜಗತ್ತಿಗೆ ಮಾದರಿಯಾಗಿ ದಾರಿದೀಪವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನ ಕಾರ್ಯದರ್ಶಿ ಸಿ.ಎಂ.ಕ್ರಾಂತಿಸಿಂಹ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಬಸವಣ್ಣ ಜಯಂತಿಯಲ್ಲಿ ಮಾತನಾಡಿ, ಬಸವಣ್ಣ ವಚನಗಳನ್ನು ರಚಿಸಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದ್ದರು. ಸರ್ವರಿಗೂ ಸಮಾನದ ಸಮಾಜವನ್ನು ನಿರ್ಮಿಸುವ ಕನಸು ಕಾಣುತ್ತಿದ್ದರು. ಬಸವಣ್ಣನವರ ಕನಸನ್ನು ನನಸು ಮಾಡಬೇಕಾದದ್ದು ನಮ್ಮೆಲ್ಲರ ಆಶಯವಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ವಳಗೆರೆಹಳ್ಳಿ ವಿ.ಸಿ. ಉಮಾಶಂಕರ ಮಾತನಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸಮಾನತೆ, ಸಹಬಾಳ್ವೆ, ಸಹಕಾರ ದಿಂದ ಬಾಳಬೇಕು ಹಾಗೂ ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರುವ ಮೂಲಕ ಕಾಯಕಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದಾರೆ ಎಂದರು.

ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಅವರ ಆಶಯಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳೆಯರ ಬಗ್ಗೆ ಇದ್ದ ಕೀಳು ಮನೋಭಾವವನ್ನ ಹೋಗಲಾಡಿಸಲು ಪ್ರಯತ್ನಿಸಿದ ಮಹಾತ್ಮರಾಗಿದ್ದರು ಎಂದು ಬಣ್ಣಿಸಿದರು.

ರೈತ ಮುಖಂಡ ಬೋರಾಪುರ ಶಂಕರೇಗೌಡ ಮಾತನಾಡಿದರು. ರೈತ ಸಂಘದ ಮುಖಂಡರಾದ ವಿ.ಎಂ.ಗಂಗಾಧರ, ಕಾರ್ಯದರ್ಶಿ ಸೋಂಪುರ ಉಮೇಶ, ಗೌರವಾಧ್ಯಕ್ಷ ವಿ.ಎಚ್. ಶಿವಲಿಂಗಯ್ಯ, ಸಂಪನ್ಮೂಲ ವ್ಯಕ್ತಿ ಪ್ರಸನ್ನ ಕುಮಾರ್, ಹೂತಗೆರೆ ಆನಂದ್, ಪರಶು, ಯರಿಯನ್ ಶ್ರೀನಿವಾಸ್. ಸೇರಿದಂತೆ ಇತರರಿದ್ದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ: ಡಾ.ಅಣ್ಣಯ್ಯ ತೈಲೂರು

ಕನ್ನಡಪ್ರಭ ವಾರ್ತೆ ಮದ್ದೂರುಸಾಮಾಜಿಕ ಮೌಢ್ಯಗಳನ್ನು ಧಿಕ್ಕರಿಸಿ ಸಮಾನತೆಯ ಬೀಜ ಬಿತ್ತಿದ ಮಾನವತಾವಾದಿ ಬಸವೇಶ್ವರರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.

ತಾಲೂಕಿನ ಕೊಪ್ಪ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿಯಿಂದ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿಯಲ್ಲಿ ಮಾತನಾಡಿ, ನೀತಿ ಕಣಜಗಳಾಗಿರುವ ವಚನಗಳ ಮೂಲಕ ನೇರ ನಿಷ್ಟುರ ವಿಚಾರಧಾರೆಗಳನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ ಬಸವಣ್ಣನವರು ನಿಜಕ್ಕೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದರು.12ನೇ ಶತಮಾನದಲ್ಲಿ ಶಿಕ್ಷಣದ ಕೊರತೆ ಇದ್ದ ಕಾಲದಲ್ಲಿ ಸಾಮಾಜಿಕ, ಮಾನವೀಯ ಮೌಲ್ಯಗಳ ಪಾಠ ಮಾಡಿದ ಬಸವಣ್ಣನವರು ವಚನಗಳ ಮೂಲಕ ಸರ್ವರನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಆದರೆ, ಇಂದಿನ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳದೆ ಆರೋಗ್ಯಕರ, ಸಮಾನತೆ ಸಮಾಜಕ್ಕೆ ಮುಂದಾಗಿದ್ದಾರೆ ಎಂದು ವಿಷಾದಿಸಿದರು.

ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ.ಟಿ.ವಿ.ಭಾರತಿ ಮಾತನಾಡಿ, ಬಸವಣ್ಣನವರ ವಿಚಾರಧಾರೆಗಳು ಸರ್ವ ಕಾಲಕ್ಕೂ, ಸರ್ವ ಜನಾಂಗಕ್ಕೂ ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಯಶೋಧ, ಡಾ.ಲತಾ , ಉಪನ್ಯಾಸಕರಾದ ಮಹದೇವಯ್ಯ, ರಾಜ ನಾಯಕ್, ಸರ್ವ ಮಂಗಳ, ಸೌಮ್ಯ, ಸೌಜನ್ಯ ಮಂಜುಳಾ ಉಪಸ್ಥಿತರಿದ್ದರು.