ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಬಿ.ಆರ್ ಕಾಲೇಜು ರಾಜ್ಯಕ್ಕೆ 4 ಮತ್ತು 9 ನೇ ರ್‍ಯಾಂಕ್‌

| Published : Apr 11 2024, 12:45 AM IST

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಬಿ.ಆರ್ ಕಾಲೇಜು ರಾಜ್ಯಕ್ಕೆ 4 ಮತ್ತು 9 ನೇ ರ್‍ಯಾಂಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಶರಣಬಸವೇಶ್ವರ ಸಂಯುಕ್ತ ವಸತಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ. ಕಲಬುರಗಿ

ಶರಣಬಸವೇಶ್ವರ ಸಂಯುಕ್ತ ವಸತಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.

ಸಮರ್ಥ. ಎಸ್. ಬಿ. 595/600 ಅಂಕಗಳನ್ನು ಪಡೆದು ರಾಜ್ಯಕ್ಕೆ 4 ನೇ ರ್‍ಯಾಂಕ್‌ ಪಡೆದು ಸಾಧನೆ ಮೆರೆದಿದ್ದಾನೆ. ಕಾಲೇಜಿನ 27 ವರ್ಷಗಳಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆದು ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬನಶಂಕರಿ. ಶಿವರುದ್ರಪ್ಪ 590/600 ಅಂಕಗಳನ್ನು ಪಡೆದು ರಾಜ್ಯಕ್ಕೆ 9 ನೇ ರ್‍ಯಾಂಕ್‌ ಪಡೆದಿದ್ದಾಳೆ. ಸ್ನೇಹಾ. ಬಿ. ಕೆ. 588/600, ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ರ್‍ಯಾಂಕ್‌ ಪಡೆದಿದ್ದಾಳೆ. ಒಟ್ಟು 613 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿನ ಕೀರ್ತಿಗೆ ಪಾತ್ರರಾಗಿದ್ದಾರೆ.

ಪರೀಕ್ಷೆ ಬರೆದಿರುವವರಲ್ಲಿ 613 ಡಿಸ್ಟಿಂಕ್ಷನ್‌, 82 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಇನ್ನು 401 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ.

ಜೀವಶಾಸ್ತ್ರದಲ್ಲಿ 55 ಮಕ್ಕಳು, ರಸಾಯನಶಾಸ್ತ್ರದಲ್ಲಿ 31, ಗಣಿತದಲ್ಲಿ 20, ಭೌತಶಾಸ್ತ್ರದಲ್ಲಿ 6, ಕನ್ನಡದಲ್ಲಿ 6 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

ಸಮರ್ಥ ಎಸ್. ಬಿ.- 595, ಶೇ. 99.17, ಬನಶಂಕರಿ. ಶಿವರುದ್ರಪ್ಪ- 590, ಶೇ.98.33, ಸ್ನೇಹಾ. ಬಿ.ಕೆ. 588, ಶೇ.98, ಭಾಗ್ಯಶ್ರೀ ಮಾನಪ್ಪ- 587/60. ಶೇ.97.83, ವಿನಯಕುಮಾರ ಕಸಬೇಗೌಡರ- 587, ಶೇ.97.83, ಸುಶ್ಮಿತಾ ಶರಣಬಸಪ್ಪ- 586, ಶೇ.97.67, ರವಿನಾ ಶಿವಲಿಂಗಪ್ಪ- 584, ಶೇ.97.33, ಪವನ ಪೊದ್ದಾರ- 584, ಶೇ.97.33, ಶ್ರೀಶೈಲ ರಮೇಶ- 584, ಶೇ.97.33, ನಿಖಿತಾ ಬಸರೆಡ್ಡಿ- 584, ಶೇ.97.33, ದಿವಾಕರ ಹೊಟ್ಟಿ- 584, ಶೇ.97.33, ಪಂಚಾಕ್ಷರಿ ರಾಜಶೇಖರ, 584, ಶೇ.97.33, ಮೇಘನಾ ಬಸವರಾ 584, ಶೇ.97.33, ಸಂಧ್ಯಾ ಬಿ ಪಾಟೀಲ- 584, ಶೇ.97.33, ಶಿವಲೀಲಾ ಮಲ್ಲಿಕಾರ್ಜುನ- 583, ಶೇ.97.17, ಲಕ್ಷ್ಮೀ ಕಟ್ಟಿಮನಿ- 583, ಶೇ.97.17.

‘ಎಸ್.ಬಿ.ಆರ್.ನಲ್ಲಿ ನಡೆಯುವ ನಿರಂತರ ಅಭ್ಯಾಸದಿಂದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಗುರುಗಳ ಅಧ್ಯಯನ ಮತ್ತು ಅಧ್ಯಾಪನದಿಂದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಕಾಲೇಜಿನ ಗೌರವಕ್ಕೆ ಪಾತ್ರರಾಗಿದ್ದಾರೆ. ನೀಟ್ ಮತ್ತು ಸಿ.ಇ.ಟಿ ಪರೀಕ್ಷೆಯಲ್ಲಿಯೂ ಅತೀ ಉತ್ತಮ ರ್‍ಯಾಂಕ್‌‍ಗಳನ್ನು ಪಡೆಯಲಿ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ ಶುಭ ಹಾರೈಸಿದ್ದಾರೆ.

ವಿದ್ಯಾರ್ಥಿಗಳ ಈ ಯಶಸ್ಸಿಗೆ ಪ್ರಾಚಾರ್ಯ ಎನ್.ಎಸ್.ದೇವರಕಲ್ ಶುಭ ಹಾರೈಸಿದ್ದಾರೆ. ಈ ಫಲಿತಾಂಶವು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪ್ರಾಮಾಣಿಕತೆ ಮತ್ತು ಶ್ರದ್ಧೆಯ ಫಲವಾಗಿದೆ ಎಂದು ಅವರು ಅಭಿನಂದಿಸಿದ್ದಾರೆ. ಈ ಯಶಸ್ಸನ್ನು ಮುಂದಿನ ದಿನಗಳಲ್ಲಿಯೂ ಪುನರಾವರ್ತಿಸುವಂತೆ ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.